ವೈಷ್ಣೋದೇವಿ ಕ್ಷೇತ್ರಕ್ಕೆ ದಿನಕ್ಕೆ 50 ಸಾವಿರ ಭಕ್ತರಿಗೆ ಮಾತ್ರ ಅವಕಾಶ

Posted By:
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ನವೆಂಬರ್ 13: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರಸಿದ್ಧ ಯಾತ್ರಾ ಕ್ಷೇತ್ರ ವೈಷ್ಣೋದೇವಿಗೆ ದಿನಕ್ಕೆ 50 ಸಾವಿರ ಭಕ್ತರ ಭೇಟಿಗೆ ಮಾತ್ರ ಅವಕಾಶ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಬಂದರೆ ಅವರನ್ನು ಅರ್ಧಕುಮಾರಿ ಅಥವಾ ಕಟ್ರಾದಲ್ಲಿ ತಡೆಯಿರಿ ಎಂದು ಕೂಡ ತಿಳಿಸಲಾಗಿದೆ.

ಮಾತಾ ವೈಷ್ಣೋದೇವಿ ಕ್ಷೇತ್ರದ ಮೇಲೆ ದಾಳಿಗೆ ಉಗ್ರರ ಸ್ಕೆಚ್!

ವೈಷ್ಣೋದೇವಿ ಯಾತ್ರೆ ಕೈಗೊಳ್ಳುವವರಿಗಾಗಿ ಪ್ರತ್ಯೇಕ ಪಾದಚಾರಿ ಮಾರ್ಗ ಮತ್ತು ಬ್ಯಾಟರಿ ಚಾಲಿತ ಕಾರುಗಳು ನವೆಂಬರ್ 24ರಿಂದ ಆರಂಭವಾಗಲಿದೆ. ಕ್ಷೇತ್ರದ ಸಮುಚ್ಚಯದೊಳಗಿನ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹೆಚ್ಚುತ್ತಿರುವ ಭಕ್ತರ ಸಂಖ್ಯೆ ಮತ್ತು ಅಲ್ಲಿನ ಸಂಪನ್ಮೂಲದ ಮೇಲೆ ಒತ್ತಡ ಬೀಳುತ್ತದೆ ಎಂಬ ಕಾರಣಕ್ಕೆ ಈ ಆದೇಶ ನೀಡಲಾಗಿದೆ.

Only 50,000 Devotees Can Visit Vaishno Devi Shrine In A Day: Green Court

ವೈಷ್ಣೋದೇವಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಂದ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ಅದೇ ರೀತಿ ಅಲ್ಲಿ ಕುದುರೆ ಬಳಸುವುದರಿಂದಲೂ ಅವುಗಳ ವಿಸರ್ಜನೆಯೂ ಸಮಸ್ಯೆಯಾಗುತ್ತಿದೆ. ಇವೆಲ್ಲ ಬಾನ್ ಗಂಗಾ ನದಿ ಸೇರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಈ ಆದೇಶ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The green court today limited the number of devotees allowed to visit the Vaishno Devi shrine in Jammu and Kashmir to 50,000 per day. The National Green Tribunal said once the limit is reached, devotees will be stopped either at Ardhkumari or Katra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ