242 ಜನರಲ್ಲಿ ಬದುಕಿ ಉಳಿದವನು ಒಬ್ಬನೇ ಒಬ್ಬ, ಭೀಕರ ವಿಮಾನ ದುರಂತಕ್ಕೆ ಈತನೇ ಸಾಕ್ಷಿ! Ahmedabad Plane Crash
146 ಕೋಟಿ ಭಾರತೀಯರು ಇಂದು ದುಖಃದಲ್ಲಿ ಇದ್ದಾರೆ, ಜೂನ್ 12 ಭಾರತದ ಪಾಲಿಗೆ ಎಂದೆಂದಿಗೂ ಅತ್ಯಂತ ಕರಾಳ ದಿನವಾಗಿ ಉಳಿಯಲಿದೆ. ಗುಜರಾತ್‌ನ ಅಹ್ಮದಾಬಾದ್ ವಿಮಾನ ದುರಂತದಲ್ಲಿ 242 ಜನರು ಮೃಪಟ್ಟಿದ್ದಾರೆ, ಇದರ ಜೊತೆ ವಿಮಾನ ಮೇಲಿಂದ ಬಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೂಡ ಜೀವ ಬಿಟ್ಟಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿ ನೆಮ್ಮದಿ ಕೆಡಿಸಿತ್ತು. ಹೀಗಿದ್ದಾಗಲೇ, ನೆಮ್ಮದಿ ನೀಡುವ ಸುದ್ದಿಯೊಂದು ಸಿಗುತ್ತಿದ್ದು 242 ಜನರಲ್ಲಿ ಬದುಕಿ ಉಳಿದವನು ಒಬ್ಬನೇ ಒಬ್ಬ! ಆತ ಯಾರು ಗೊತ್ತಾ?
ಭಾರತದ ಇತಿಹಾಸದಲ್ಲೇ ಎಂದೆಂದಿಗೂ ಮರೆಯಲು ಆಗದ ಘೋರ ವಿಮಾನ ದುರಂತ ಒಂದು ಇಂದು ಸಂಭವಿಸಿದೆ. 242 ಜನರನ್ನು ಹೊತ್ತು ಏರ್ ಇಂಡಿಯಾ ವಿಮಾನ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏರ್ಪೋರ್ಟ್ ಮೂಲಕ ಲಂಡನ್ ಕಡೆಗೆ ಪ್ರಯಾಣ ಬೆಳೆಸಿತ್ತು. ಹೀಗೆ 232 ಪ್ರಯಾಣಿಕರು & 10 ಸಿಬ್ಬಂದಿ ಸೇರಿ ಒಟ್ಟು 242 ಜನ ತಮ್ಮ ಗುರಿ ತಲುಪುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ಏರ್ ಇಂಡಿಯಾದ ವಿಮಾನ ಗಾಳಿಯಲ್ಲಿ ತೇಲುತ್ತಾ ಅಲ್ಲಾಡಿ ಹೋಗಿದೆ. ಹೀಗೆ, ನೋಡ ನೋಡುತ್ತಲೇ ವಿಮಾನ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಪರದಾಡಿದ್ದು... ಕೊನೆಗೆ ನೇರವಾಗಿ ಹೋಗಿ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿದೆ. ಆಗಲೇ ನೋಡಿ ಈ ವಿಮಾನ ದಿಢೀರ್ ಸ್ಫೋಟಗೊಂಡಿದ್ದು...

242 ಜನರಲ್ಲಿ ಬದುಕಿ ಉಳಿದವನು ಒಬ್ಬನೇ ಒಬ್ಬ!
ಹೌದು, ಲಂಡನ್ ಕಡೆಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಈ ರೀತಿಯಾಗಿ ಭೀಕರ ದುರಂತಕ್ಕೆ ತುತ್ತಾಗಿದ್ದ ಕಾರಣ ವಿಮಾನದಲ್ಲಿ ಇದ್ದ 242 ಜನರೂ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಒಂದಷ್ಟು ಸಮಾಧಾನ ಸಿಕ್ಕಿದೆ, ಯಾಕಂದ್ರೆ ಇಡೀ ವಿಮಾನದಲ್ಲಿ ಇದ್ದ 242 ಜನರ ಪೈಕಿ ಒಬ್ಬನನ್ನ ಬಿಟ್ಟು ಇನ್ನುಳಿದ 241 ಜನರು ಸುಟ್ಟು ಹೋಗಿದ್ದಾರೆ. ಈ ಮೂಲಕ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಬದುಕಿ ಉಳಿದನಲ್ಲ ಅಂತಾ ಜನರು ಮಾತನಾಡುತ್ತಿದ್ದಾರೆ... ಹಾಗಾದರೆ ಸಾವಿನ ಮನೆಯ ಬಾಗಿಲು ಬಡಿದು ಬದುಕಿ ವಾಪಸ್ ಬಂದ ಆ ವ್ಯಕ್ತಿ ಯಾರು?
ಸಾವಿನ ಮನೆಯ ಬಾಗಿಲು ಬಡಿದು...
ಅಂದಹಾಗೆ ಬ್ರಿಟನ್ ಪೌರತ್ವ ಹೊಂದಿರುವ ಭಾರತ ಮೂಲದ ವಿಶ್ವಾಸ್ ಕುಮಾರ್ ರಮೇಶ್ ಎಂಬುವ ಏಕೈಕ ವ್ಯಕ್ತಿಯೇ ಇದೀಗ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕಿ ಉಳಿದಿರುವವರು. ಭಾರತದಲ್ಲಿ ತಮ್ಮ ಕುಟುಂಬದವರ ಜೊತೆ ಇರಲು ಬ್ರಿಟನ್ ಬಿಟ್ಟು ಭಾರತಕ್ಕೆ ಬಂದಿದ್ದರು. ಇದೀಗ, ಮರಳಿ ಬ್ರಿಟನ್‌ಗೆ ಹೋಗುವಾಗಲೇ ಘೋರ ದುರಂತ ನಡೆದು ಹೋಗಿದೆ. ತಮ್ಮ ಸಹೋದರ 45 ವರ್ಷದ ಅಜಯ್ ಕುಮಾರ್ ರಮೇಶ್ ಜೊತೆಗೆ ವಿಶ್ವಾಸ್ ಕುಮಾರ್ ರಮೇಶ್ ಮರಳಿ ಬ್ರಿಟನ್ ದೇಶಕ್ಕೆ ಹೋಗುವಾಗ ಭೀಕರ ದುರಂತ ನಡೆದಿದೆ. ಹೀಗೆ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಭಾರಿ ದೊಡ್ಡ ಅನಾಹುತ ನಡೆದು ಹೋಗಿದ್ದು, ಇದ್ದಕ್ಕಿದ್ದಂತೆ ವಿಶ್ವಾಸ್ ಕುಮಾರ್ ರಮೇಶ್ ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ನಂತರ ಅಪಘಾತ ಸಂಭವಿಸಿರುವ ಅರಿವು ಆಗಿದ್ದು, ಎಸ್ಕೇಪ್ ಆಗಲು ನೋಡಿದಾಗ ಸುತ್ತಲೂ ಶವಗಳು ಬಿದ್ದಿರುವುದನ್ನು ಅವರು ಕಂಡಿದ್ದಾರೆ. ಕೊನೆಗೆ ವಿಮಾನದ ಹೊರಗೆ ಹಾರಿ ಬೆಂಕಿಯಿಂದ ಬಚಾವ್ ಆಗಿ ಬದುಕಿ ಉಳಿದಿದ್ದಾರಂತೆ...












Click it and Unblock the Notifications