Kanjhawala Accident : 'ಕಾಂಜಾವಾಲಾ ಅಪಘಾತದ ಆರೋಪಿಗಳಲ್ಲಿ ಒಬ್ಬರು ಬಿಜೆಪಿ ಸದಸ್ಯ' ಆಪ್ ಆರೋಪ

ದೆಹಲಿಯ ಕಾಂಜಾವಾಲಾ ಅಪಘಾತದ ಆರೋಪಿಗಳಲ್ಲಿ ಒಬ್ಬರು ಬಿಜೆಪಿ ಸದಸ್ಯರಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಆರೋಪಿಸಿದೆ. ಸುಲ್ತಾನ್‌ಪುರಿಯಲ್ಲಿ ನಡೆದ ಆಘಾತಕಾರಿ ಘಟನೆಯ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ಮನೋಜ್ ಮಿತ್ತಲ್ ಬಿಜೆಪಿಯ ಸದಸ್ಯರಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಷಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

ಇನ್ನೂ ಘಟನೆಯಲ್ಲಿ ದೆಹಲಿಯ ರೋಹಿಣಿ ನ್ಯಾಯಾಲಯ ಆರೋಪಿಗಳಾದ ಮನೋಜ್ ಮಿತ್ತಲ್, ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್ ಮತ್ತು ಮಿಥುನ್ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

One of the accused in the Kanjawala accident is a BJP member AAP alleges

ಪ್ರಕರಣವನ್ನು ಮುಚ್ಚಿ ಹಾಕುವ ಸಂಚು- ಸೌರಭ್ ಭಾರದ್ವಾಜ್

ಪ್ರಕರಣ ದಾಖಲಾಗಿರುವ ಮಂಗೋಲ್‌ಪುರಿ ಪೊಲೀಸ್ ಠಾಣೆಯ ಚಿತ್ರಗಳನ್ನು ಹಂಚಿಕೊಂಡಿರುವ ಆಪ್‌ನ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಆರೋಪಿ ಮನೋಜ್ ಮಿತ್ತಲ್ ಅವರ ಚಿತ್ರ ಮತ್ತು ಬಿಜೆಪಿ ಸದಸ್ಯ ಎಂದು ಗುರುತಿಸುವ ಹೋರ್ಡಿಂಗ್ ಅನ್ನು ಹಂಚಿಕೊಂಡಿದ್ದಾರೆ. ಸೌರಭ್ ಭಾರದ್ವಾಜ್, "ಮೃತ ದೇಹವು ಕಾರಿನಲ್ಲಿ ಸಿಕ್ಕಿಹಾಕಿಕೊಂಡರೂ 12 ಕಿಲೋಮೀಟರ್ ದೂರದವರೆಗೆ ಅದನ್ನು ಎಳೆದೊಯ್ಯಲಾಗಿದೆ. ಆದರೆ ಅವರು ಜೋರಾದ ಸಂಗೀತದಿಂದಾಗಿ ಅದು ಆರೋಪಿಗಳ ಗಮನಕ್ಕೆ ಬಂದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ದೆಹಲಿ ಪೊಲೀಸ್ ಡಿಸಿಪಿ ಹರೇಂದ್ರ ಸಿಂಗ್ ಅವರು ಪ್ರಕರಣದ ತೀವ್ರತೆಯನ್ನು ಮರೆ ಮಾಡಲು ಆರೋಪಿಯ ಹೇಳಿಕೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು ಪೋಲೀಸರ ಮರೆಮಾಚುವಿಕೆಗೆ ಹಿಡಿದ ಗನ್ನಡಿಯಾಗಿದೆ. ಯಾವ ಪೋಲೀಸರೂ ಇದಕ್ಕಿಂತ ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ'' ಎಂದು ಅವರು ದೂರಿದ್ದಾರೆ.

ಎಎಪಿಗೆ ಬಿಜೆಪಿ ಪ್ರತ್ಯುತ್ತರ

ಎಎಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿಯ ಮಾಧ್ಯಮ ಘಟಕದ ಮುಖ್ಯಸ್ಥ ಹರೀಶ್ ಖುರಾನಾ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ, ತಪ್ಪಿತಸ್ಥರು ಯಾವ ಪಕ್ಷದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕೆಂದು ಎಎಪಿ ಇಂದು ಒತ್ತಾಯಿಸಿದೆ. ಸೌರಭ್ ಭಾರದ್ವಾಜ್, "ಅವರಿಗೆ ದೆಹಲಿಯ ಬಗ್ಗೆ ಏನೂ ತಿಳಿದಿಲ್ಲ, ನಾನು ಅವನನ್ನು ಸುಲ್ತಾನ್‌ಪುರಿಯಲ್ಲಿ ಡ್ರಾಪ್ ಮಾಡಿದರೆ, ನಜಫ್‌ಗಢ ಯಾವ ದಿಕ್ಕಿನಲ್ಲಿದೆ ಎಂದು ಅವನಿಗೆ ತಿಳಿದಿಲ್ಲ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+