2029ರಲ್ಲೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿಗೆ ಸಿದ್ಧತೆ: ಜಾಗೃತಿಗೆ ಶಿವರಾಜ್ ಸಿಂಗ್ ಚೌಹಾಣ್ ಮನವಿ
ನವದೆಹಲಿ: 'ಒಂದೇ ರಾಷ್ಟ್ರ, ಒಂದು ಚುನಾವಣೆ (ONOE)' ಕುರಿತು ಮೇಲಿಂದ ಮೇಲೆ ಚರ್ಚೆ ಆಗುತ್ತಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 'ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತೆ ಒತ್ತಾಯಿಸಿದ್ದಾರೆ. ಆಗಾಗ ನಡೆಯುವ ಚುನಾವಣೆಗಳಿಂದ ದೇಶದ ಅಭಿವೃದ್ಧಿ ಹಿನ್ನಡೆ ಉಂಟಾಗುತ್ತದೆ. ಹರಿದ್ವಾರದ ಸಂತರಿಗೆ ಮನವಿ ಮಾಡಿದ ಸಿಂಗ್ ಅವರು ದೇಶದ ಅಭಿವೃದ್ಧಿಗೆ ಒಮ್ಮೆ ಚುನಾವಣೆ ನಡೆಯುವುದು ಅಗತ್ಯ ಎಂದು ಹೇಳಿದರು.
ಸದ್ಯ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಒಂದೆ ಸಮಯದಲ್ಲಿ ನಡೆಯುತ್ತಿಲ್ಲ. ಇದರಿಂದ ಆಡಳಿತ ಮೇಲೆ, ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಅಭಿವೃದ್ಧಿ, ಜನರ ಸಮಸ್ಯೆಯತ್ತ ಆಯಾ ಸರ್ಕಾರಗಳ ಗಮನ ಕೊಡುವುದು ಕೊಡುವ ಅವಧಿ ಕಡಿಮೆಯಾಗುತ್ತದೆ. ಜನ ಪ್ರತಿನಿಧಿಗಳು ಇಂತಹ ಚುನಾವಣೆಗೆ, ಸೋಲು-ಗೆಲುವಿನ ಲೆಕ್ಕಾಚಾರ ಹಾಕುವಲ್ಲಿ ನಿರತರಾಗಿರುತ್ತಾರೆ.

ದೇಶಕ್ಕಾಗಿ ಒಂದು ರಾಷ್ಟ್ರ, ಒಂದು ಚುನಾವಣೆ
ಹರಿದ್ವಾರದಲ್ಲಿ ಧಾರ್ಮಿಕ ಮುಖಂಡರು ಮತ್ತು ಮಠಾಧೀಶರ ಸಭೆಯಲ್ಲಿ ಭಾಗವಹಿಸಿದ ಚೌಹಾಣ್ ಅವರು, ಪ್ರಧಾನಿ ಮೋದಿಯವರ ದೇಶದ ಒಳಿತಗಾಗಿ ಸಂಕಲ್ಪ ತೊಟ್ಟಿದ್ದಾರೆ. ಯಾವುದೇ ರಾಜಕೀಯ ಪಕ್ಷಕ್ಕಿಂತ ಹೆಚ್ಚಾಗಿ ಅವರಿಗೆ ರಾಷ್ಟ್ರೀಯ ಹಿತಾಸಕ್ತಿಗೆ ಮುಖ್ಯವಾಗಿರುತ್ತದೆ. ದೇಶ ಮುಂದುವರೆದರೆ, ರಾಜಕೀಯ ಪಕ್ಷಗಳು ಸಹ ಅಸ್ತಿತ್ವದಲ್ಲಿರುತ್ತವೆ ಎಂದು ಸಿಂಗ್ ತಿಳಿಸಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2029ರಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ನಡೆಯುತ್ತಾ?
2034ರ ಬದಲು 2029 ರಲ್ಲಿಬಹುಮತ ಹೊಂದಿರುವ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಿರ್ಧರಿಸಿದೆ. ನಡೆಸುವ ಬಗ್ಗೆ ಪರಿಗಣಿಸುತ್ತಿದೆ. ಇತ್ತೀಚೆಗೆ ಮಸೂದೆ ಮಂಡನೆ, ತಿದ್ದುಪಡಿ ಮೂಲಕ 2034ರಿಂದ ಏಕಕಾಲಕ್ಕೆ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಒಟ್ಟಿಗೆ ನಡೆಸಲು ನಿರ್ಧರಿಸಲಾಗಿತ್ತು. ಸದ್ಯ ಅಪ್ಡೇಟ್ ಮಾಹಿತಿ ಪ್ರಕಾರ, 2029ರಲ್ಲಿ ಜಾರಿಗೆ ತರಲು ಪಿಎಂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.
ಸಮಿತಿ ವರದಿ ಸಲ್ಲಿಕೆ ಬಳಿಕ ನಿರ್ಧಾರ
ಇದಕ್ಕೆ ಸಂಬಂಧಿಸಿದಂತೆ 41ಸದಸ್ಯರು ಇರುವ ಸಮಿತಿ ರಚಿಸಲಾಗಿದ್ದು, ಒಂದು ರಾಷ್ಟ್ರ ಒಂದು ಚುನಾವಣಾ ಚೌಕಟ್ಟನ್ನು ಜಾರಿಗೆ ತರಲು ಸಂವಿಧಾನ (ನೂರ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ, 2024 ಪರಿಶೀಲಿಸಿ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಗೆ ಚಳಿಗಾಲದ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಚಳಿಗಾಲದ ಅಧಿವೇಶನ ನವೆಂಬರ್ ಅಂತ್ಯದಿಂದ ಆರಂಬವಾಗುತ್ತದೆ. ಡಿಸೆಂಬರ್ ಮೂನರೇ ವಾರಕ್ಕೆ ಅಂತ್ಯಗೊಳ್ಳಲಿದೆ.
ಜವಾಬ್ದಾರಿ ಹೊತ್ತಿರುವ ಈ ಸಮಿತಿಯು 2029ರ ಹೊತ್ತಿಗೆ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ದೇಶಾದ್ಯಂತ ಸಮಾಲೋಚನೆ ನಡೆಸಲಿವೆ. ಅದರ ಆಧಾರದಲ್ಲಿ ವರದಿ ತಯಾರಿಸಿ ಸಲ್ಲಿಸಲಿದೆ. ಬಳಿಕವೇ ಶಿಫಾರಸುಗಳನ್ನು ಅಂತಿಮಗೊಳಿಸಲಾಗುತ್ತದೆ.


Click it and Unblock the Notifications
