ಐಎಸ್ಐಎಸ್ ಸೇರಿದ ಮತ್ತೊಬ್ಬ ಕೇರಳ ಯುವಕ?
ತಿರುವನಂತಪುರಂ, ಸೆಪ್ಟೆಂಬರ್, 16 : ಕೇರಳದ ಕೋಯಿಕ್ಕೋಡ್ ಮೂಲದ ಯುವಕನೊಬ್ಬ ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಶಂಕಿಸಲಾಗಿದೆ. ಕೆಲವು ತಿಂಗಳ ಹಿಂದೆ ಕೇರಳ ಮೂಲದ ಪತ್ರಕರ್ತನೊಬ್ಬ ಉಗ್ರ ಸಂಘಟನೆ ಸೇರಿದ್ದ.
ಕೆಲವು ತಿಂಗಳಿನಿಂದ ಕೋಯಿಕ್ಕೋಡ್ ಮೂಲದ ಯುವಕ ನಾಪತ್ತೆಯಾಗಿದ್ದಾನೆ. ಈತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಸೇರಿದ್ದಾನೆಯೇ? ಎಂದು ಖಚಿತವಾದ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.[ISIS ಸೇರಿದ ಕೇರಳದ ಪತ್ರಕರ್ತ]

ಕೇರಳ ಪೊಲೀಸರಿಗೂ ಗುಪ್ತಚರ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಪ್ರಾಥಮಿಕವಾಗಿ ಸಂಗ್ರಹಿಸಿದ ಮಾಹಿತಿ ಅನ್ವಯ ಕೋಯಿಕ್ಕೋಡ್ ಮೂಲದ ಯುವಕ ಸಿರಿಯಾದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಕೆಲವು ತಿಂಗಳಿನಿಂದ ಈ ಯುವಕ ನಾಪತ್ತೆಯಾಗಿದ್ದು, ಸಿರಿಯಾದಲ್ಲಿರಬಹದು ಎಂದು ಶಂಕಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಒನ್ ಒಂಡಿಯಾಕ್ಕೆ ತಿಳಿಸಿದ್ದಾರೆ. [ISISಗೆ ಬೆಂಬಲ, ಯುವಕರು ಗಡಿಪಾರು]
ಇದು ಎರಡನೇ ಪ್ರಕರಣ : ಕೇರಳ ಮೂಲದ ಯುವಕ ಐಎಸ್‌ಐಎಸ್ ಉಗ್ರ ಸಂಘಟನೆ ಸೇರುತ್ತಿರುವ ಎರಡನೇ ಪ್ರಕರಣವಿದಾಗಿದೆ. ಕೆಲವು ತಿಂಗಳ ಹಿಂದೆ ಪಾಲಕ್ಕಾಡ್‌ನಲ್ಲಿನ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಉಗ್ರ ಸಂಘಟನೆ ಸೇರಿದ್ದ ಮಾಹಿತಿ ಲಭ್ಯವಾಗಿತ್ತು. [ಭಾರತದ ಮೇಲೆ ಇರಾಕಿ ಉಗ್ರರ ಕಣ್ಣು]
ಮೊದಲು ಪಾಲಕ್ಕಾಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ನಂತರ ಉದ್ಯೋಗ ತೊರೆದು ಗಲ್ಫ್ ರಾಷ್ಟ್ರಕ್ಕೆ ಕೆಲಸ ಮಾಡಲು ಹೋಗುವುದಾಗಿ ಹೇಳಿದ್ದ. 8 ತಿಂಗಳ ಹಿಂದೆ ಗಲ್ಫ್‌ನಲ್ಲಿ ಉದ್ಯೋಗ ಪಡೆದಿದ್ದ ಆತ. ಅಲ್ಲಿಂದ ಐಎಸ್‌ಐಎಸ್ ಉಗ್ರರ ಸಂಪರ್ಕ್ ಪಡೆದು ಸಂಘಟನೆ ಸೇರಿದ್ದ.
ಐಎಸ್ಐಎಸ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯರನ್ನು ಯುಎಇ ಮಂಗಳವಾರ ಗಡಿಪಾರು ಮಾಡಿತ್ತು. ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications