ಪಟಾಕಿ ಅಂಗಡಿಗೆ ಬೆಂಕಿಬಿದ್ದು ಓರ್ವ ಸಾವು: ದೀಪಾವಳಿಗೆ ಮೊದಲ ವಿಘ್ನ!
ರೂರ್ಕೆಲಾ (ಒಡಿಶಾ), ಅಕ್ಟೋಬರ್ 18: ಈಗಾಗಲೇ ದೀಪಾವಳಿಯ ರಂಗು ಎಲ್ಲೆಡೆ ಹಬ್ಬದ ಕಳೆ ಮೂಡಿಸಿರುವಾಗ ಅಪಶಕುನದ ವಾರ್ತೆಯೊಂದು ಕೇಳಿದೆ.
ಪಟಾಕಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತನಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಒಡಿಶಾದ ರೂರ್ಕೆಲಾ ಎಂಬಲ್ಲಿ ನಡೆದಿದೆ.

ಘಟನೆ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರಬಹುದೆಂದು ಪೊಲೀಸರು ಅಂದಾಜಿಸಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಇಂದು ಬೆಳಗ್ಗಿನ ಜಾವ 2:30 - 3:00 ಗಂಟೆಗೆ ನಡೆದಿದೆ.
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications