ನಕ್ಸಲರ ದಾಳಿ: ಸಿಆರ್‌ಪಿಎಫ್ ಯೋಧ ಸಾವು, ಐದು ಮಂದಿಗೆ ಗಾಯ

ರಾಯಪುರ (ಚತ್ತೀಸ್‌ಗಡ), ಮಾರ್ಚ್‌ 18: ರಾಜ್ಯದ ದಂತೇವಾಡದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.

ನಕ್ಸಲರು ಎಲ್‌ಇಡಿ ಮಾದರಿಯ ಬಾಂಬ್ ಬಳಸಿ ಸಿಆರ್‌ಫಿಎಫ್‌ ಗಾಡಿಯ ಮೇಲೆ ದಾಳಿ ನಡೆಸಿದ್ದಾರೆ. ಆ ನಂತರ ಗುಂಡಿನ ದಾಳಿಯನ್ನು ಸಹ ನಡೆಸಿದ್ದಾರೆ.

ಸಿಆರ್‌ಪಿಎಫ್ ಯೋಧರು ಭದ್ರತೆ ನಿಮಿತ್ತ ಸ್ಥಳೀಯ ಪೊಲೀಸರೊಂದಿಗೆ ದಂತೇವಾಡ ಜಿಲ್ಲೆಯ ಅರನ್‌ಪುರ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ ಈ ದಾಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ವಿಮಾನದ ಮೂಲಕ ರಾಯಪುರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

One CRPF soldier killed 5 injured in Nexal attack

ಫೆಬ್ರವರಿ ತಿಂಗಳ 7ರಂದು, ಇದೇ ಪ್ರದೇಶದಲ್ಲಿ 10 ನಕ್ಸಲರನ್ನು ವಿಶೇಷ ತಂಡವು ಹೊಡೆದುರುಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಂದಿನ ಘಟನೆ ನಡೆದಿದೆ ಎನ್ನಲಾಗುತ್ತಿದೆ. ದಂತೇವಾಡ ಮತ್ತು ಸುತ್ತ-ಮುತ್ತಲ ಕ್ಷೇತ್ರಗಳು ನಕ್ಸಲ ಪೀಡಿತ ಪ್ರದೇಶಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+