ದೇಶದಲ್ಲಿ 21ಕ್ಕೆ ಜಿಗಿದ ಓಮಿಕ್ರಾನ್, ಪ್ರಮುಖ ಬೆಳವಣಿಗೆಗಳು

ನವದೆಹಲಿ, ಡಿಸೆಂಬರ್ 6: ವಿಶ್ವದೆಲ್ಲೆಡೆ ಜನರನ್ನು ಆತಂಕಕ್ಕೆ ದೂಡಿದ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಕ್ರಮೇಣ ಹರಡಲು ಶುರು ಮಾಡಿದೆ. 17 ಹೊಸ ಪ್ರಕರಣಗಳೊಂದಿಗೆ ಭಾರತದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 21 ಕ್ಕೆ ಜಿಗಿದಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ದೆಹಲಿಯಲ್ಲಿನ ಹೊಸ ಓಮಿಕ್ರಾನ್ ಪ್ರಕರಣಗಳೊಂದಿಗೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಕೂಡ ನಿಧಾನಗತಿಯಲ್ಲಿ ಏರುತ್ತಿದೆ. ಮಹಾರಾಷ್ಟ್ರದಲ್ಲಿ ಏಳು, ಜೈಪುರದಲ್ಲಿ ಒಂಬತ್ತು ಮತ್ತು ದೆಹಲಿಯಲ್ಲಿ ಒಬ್ಬ ವ್ಯಕ್ತಿಗೆ ಓಮಿಕ್ರಾನ್ ವೈರಸ್ ಇರುವುದು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 21 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಭಾರತ ಸೇರಿದಂತೆ 38 ದೇಶಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾವುದೇ ದೇಶದಲ್ಲಿ ಸಾವು ಸಂಭವಿಸಿರುವ ವರದಿಗಳು ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

10 ಬೆಳವಣಿಗೆಗಳು ಇಲ್ಲಿವೆ:

ಮಹಾರಾಷ್ಟ್ರದಲ್ಲಿ ನೈಜೀರಿಯಾದಿಂದ ಪ್ರಯಾಣಿಸಿದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು, ಪುಣೆ ಬಳಿಯ ಟೌನ್‌ಶಿಪ್ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಅವರ ಸಹೋದರ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಫಿನ್‌ಲ್ಯಾಂಡ್‌ನಿಂದ ಪ್ರಯಾಣಿಸಿದ ಒಬ್ಬ ಪುರುಷನಲ್ಲಿ ಓಮಿಕ್ರಾನ್ ವೈರಸ್ ಇರುವುದು ಕಂಡುಬಂದಿದೆ.

ಜೈಪುರದ ಒಂಬತ್ತು ರೋಗಿಗಳು ಒಂದೇ ಕುಟುಂಬದವರಾಗಿದ್ದು, ಇವರು ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಮರಳಿದ್ದಾರೆ.

Omicron, which jumped to 21 in the country with 17 new cases

ತಾಂಜಾನಿಯಾದಿಂದ ದೆಹಲಿಗೆ ಆಗಮಿಸಿದ 37 ವರ್ಷದ ವ್ಯಕ್ತಿಯೊಬ್ಬರಿಗೆ ಇಂದು ಮುಂಜಾನೆ ಓಮಿಕ್ರಾನ್ ಇರುವುದು ದೃಢಪಟ್ಟಿದೆ.

ರಾಜಸ್ಥಾನದಲ್ಲಿ ಒಂದು ಪ್ರಕರಣ ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಇದೇ ವಿವರಗಳನ್ನು ಬಿಡುಗಡೆ ಮಾಡುತ್ತವೆ.

ಭಾರತದಲ್ಲಿ ಓಮಿಕ್ರಾನ್‌ನ ಮೊದಲ ಎರಡು ಪ್ರಕರಣಗಳು ಈ ವಾರದ ಆರಂಭದಲ್ಲಿ ಕರ್ನಾಟಕದಿಂದ ವರದಿಯಾಗಿದೆ. ಉಳಿದ ಎರಡು ಪ್ರಕರಣಗಳು ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಪತ್ತೆಯಾಗಿವೆ. ಏಳು ಹೊಸ ಪ್ರಕರಣಗಳೊಂದಿಗೆ, ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಪ್ರಕರಣಗಳು 8 ಕ್ಕೆ ಏರಿಕೆಯಾಗಿದೆ.

ಇದರಿಂದಾಗಿ "ಪಿಎಂ ಸಾಹಿಬ್, ದಯವಿಟ್ಟು ವಿಮಾನಗಳನ್ನು ನಿಲ್ಲಿಸಿ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಮುಖ್ಯಮಂತ್ರಿಗಳು ಕೂಡ ಪ್ರಧಾನಿಗೆ ಪತ್ರ ಬರೆದಿದ್ದರು.

Omicron, which jumped to 21 in the country with 17 new cases

ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಓಮಿಕ್ರಾನ್ ಅನ್ನು WHO "ಕಳವಳಿಕೆಯ ರೂಪಾಂತರ" ಎಂದು ವಿವರಿಸಿದೆ.

ಭಾರತದಾದ್ಯಂತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಓಮಿಕ್ರಾನ್ ವೈರಸ್ ಹೆಚ್ಚಾಗಿ ಕಂಡು ಬಂದ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಪರೀಕ್ಷಿಸುತ್ತಿವೆ. ಕೇಂದ್ರೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಪಾಯಕಾರಿ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರು ಆಗಮನದ ನಂತರ RT-PCR ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಮಾನ ನಿಲ್ದಾಣದಿಂದ ಹೊರಡಲು ಪರೀಕ್ಷೆಯ ಫಲಿತಾಂಶವು ನೆಗಟಿವ್ ಆಗಿರಬೇಕು.

ಸದ್ಯಕ್ಕೆ ಅಪಾಯದಲ್ಲಿದೆ ಎಂದು ಪರಿಗಣಿಸಲಾದ ದೇಶಗಳ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್, ಯುರೋಪ್‌ನ ಎಲ್ಲಾ 44 ದೇಶಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿವೆ.

ಓಮಿಕ್ರಾನ್ ಹೆಚ್ಚು ಮಾರಕವಾಗಿದೆಯೇ ಮತ್ತು ಪ್ರಸ್ತುತ ಲಸಿಕೆಗಳು ರಕ್ಷಣೆ ನೀಡುತ್ತವೆಯೇ ಎಂದು ಸಂಶೋಧಕರು ಇನ್ನೂ ಪರಿಶೀಲಿಸುತ್ತಿದ್ದಾರೆ.

ಕೋವಿಡ್‌ನ ಹೊಸ ರೂಪಾಂತರಿ ಓಮಿಕ್ರಾನ್ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದೆ. ದೇಶಗಳು ವಿದೇಶಿ ಪ್ರವಾಸಿಗರ ಭೇಟಿಗೆ ಹಲವು ನಿರ್ಬಂಧಗಳನ್ನು ಹೇರುತ್ತಿವೆ. ಅಮೆರಿಕ ಸಹ ದೇಶಕ್ಕೆ ಆಗಮಿಸುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ.

Omicron, which jumped to 21 in the country with 17 new cases

ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಶನಿವಾರ ಮೊದಲ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ನಾರ್ವೆಯಲ್ಲಿ ಕ್ರಿಸ್ ಮಸ್ ಪಾರ್ಟಿಗೆ ಹೋಗಿದ್ದ ಜನರಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ಎಷ್ಟು ಬೇಗ ಹಬ್ಬುತ್ತದೆ?, ಇದು ಎಷ್ಟು ಅಪಾಯಕಾರಿ?, ಚಿಕಿತ್ಸೆಗಳನ್ನು ಹೇಗೆ ನೀಡಬೇಕು? ಎಂಬುದನ್ನು ತೀರ್ಮಾನಿಸಲು ಇನ್ನೂ ಒಂದು ವಾರಗಳ ಅಧ್ಯಯನದ ಅವಶ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಬಳಿಕ ಸೋಂಕಿನ ಲಕ್ಷಣಗಳ ಬಗ್ಗೆ ಅಧ್ಯಯನಗಳು ಆರಂಭಗೊಂಡವು. ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಓಮಿಕ್ರಾನ್ ಹಬ್ಬಲಿದೆ ಎಂದು ಅಂದಾಜಿಸಲಾಗಿದೆ. ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಬಳಿ ಆಸ್ಪತ್ರೆಗೆ ದಾಖಲಾಗುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಏರಿಕಯಾಗಿದೆ. ಆದರೆ ಈ ರೂಪಾಂತರಿ ಮಕ್ಕಳ ಮೇಲೆ ಪ್ರಭಾವ ಬೀರಲಿದೆಯೇ? ಎಂಬುದನ್ನು ಹೇಳಲು ಇನ್ನೂ ಅಧ್ಯಯನ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಾರೆ.

Recommended Video

      Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+