ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ತೀವ್ರತೆ ಕಡಿಮೆಯಾಗುವ ಸಾಧ್ಯತೆ: ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಡಿಸೆಂಬರ್‌ 03: ಭಾರತದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಪತ್ತೆಯಾದ ಬೆನ್ನಲ್ಲೇ ಜನರಲ್ಲಿ ಭಾರೀ ಆತಂಕ ಸೃಷ್ಟಿ ಆಗಿದೆ. ಆದರೆ ಈ ಆತಂಕವನ್ನು ನಿವಾರಿಸಿರುವ ಆರೋಗ್ಯ ಸಚಿವಾಲಯವು "ಓಮಿಕ್ರಾನ್‌ ತೀವ್ರತೆಯು ಕಡಿಮೆ ಆಗುವ ಸಾಧ್ಯತೆ ಇದೆ," ಎಂದು ತಿಳಿಸಿದೆ.

ದೇಶದಲ್ಲಿ ಕೋವಿಡ್‌ ಓಮಿಕ್ರಾನ್‌ ರೂಪಾಂತರ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಲಸಿಕೆಯನ್ನು ಪಡೆದುಕೊಳ್ಳಿ ಎಂದು ಮತ್ತೆ ಒತ್ತಾಯ ಮಾಡಿರುವ ಸರ್ಕಾರವು, ಜನರು ಹೆದರಬೇಕಾದ ಅವಶ್ಯಕತೆ ಇಲ್ಲ. ಜಾಗರೂಕರಾಗಿದ್ದಾರೆ ಸಾಕು ಎಂದಿದೆ.

ಓಮಿಕ್ರಾನ್‌ ಲಕ್ಷಣ ಹೇಗಿರುತ್ತದೆ?: ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಿಷ್ಟು..ಓಮಿಕ್ರಾನ್‌ ಲಕ್ಷಣ ಹೇಗಿರುತ್ತದೆ?: ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಿಷ್ಟು..

"ಡೆಲ್ಟಾ ಕಾಣಿಸಿಕೊಂಡ ಸಂದರ್ಭದಲ್ಲಿ ಹಲವಾರು ಮಂದಿಗೆ ಕೋವಿಡ್‌ ಲಸಿಕೆಯನ್ನು ಹಾಕಿರಲಿಲ್ಲ. ಆದರೆ ಈಗ ಓಮಿಕ್ರಾನ್‌ ಕಾಣಿಸಿಕೊಂಡ ಸಂದರ್ಭದಲ್ಲಿ ಹೆಚ್ಚಿನ ಜನರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಕಾರಣದಿಂದಾಗಿ, ಲಸಿಕೆ ಕಾರ್ಯಕ್ರಮವು ವೇಗವಾಗಿ ನಡೆಯುತ್ತಿರುವ ಕಾರಣದಿಂದಾಗಿ ರೋಗದ ತೀವ್ರತೆಯು ಕಡಿಮೆ ಎಂದು ನಿರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

Omicron Severity Likely To Be Low Says Health Ministry

ಶುಕ್ರವಾರ ಸರ್ಕಾರವು ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ನಾವು ಓಮಿಕ್ರಾನ್‌ ರೂಪಾಂತರದ ಗುಣಲಕ್ಷಣಗಳನ್ನು ಗಮನಿಸಿದಾಗ, ಅದು ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಹರಡುವ ಸಾಧ್ಯತೆ ಇದೆ," ಎಂದು ಹೇಳಿದೆ. ಹಾಗೆಯೇ ಹೊಸ ರೂಪಾಂತರದ ಹಲವಾರು ಪ್ರಕರಣಗಳು ಮುಂದಿನ ಕೆಲವು ದಿನಗಳಲ್ಲಿ ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಉಲ್ಲೇಖ ಮಾಡಿದೆ.

ಕೋವಿಡ್ ಲಸಿಕೆಯ ಅಗತ್ಯವನ್ನು ಒತ್ತಿ ಹೇಳಿದ ಸರ್ಕಾರ

"ದಕ್ಷಿಣ ಆಫ್ರಿಕಾದ ಹೊರಗಿನ ದೇಶಗಳಲ್ಲಿ ಓಮಿಕ್ರಾನ್‌ ರೂಪಾಂತರವು ಅಧಿಕವಾಗಿ ವರದಿ ಆಗುತ್ತಿದೆ. ನಾವು ಈ ಓಮಿಕ್ರಾನ್‌ನ ಗುಣಲಕ್ಷಣಗಳನ್ನು ಗಮನಿಸಿದಾಗ ಈ ರೂಪಾಂತರವು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಹೆ‌‌ಚ್ಚಾಗಿ ಹರಡುವ ಸಾಧ್ಯತೆಗಳು ಇದೆ. ಆದರೆ ನಾವು ನಮ್ಮ ದೇಶದಲ್ಲಿ ಕೋವಿಡ್‌ ಲಸಿಕೆ ವೇಗವನ್ನು ಗಮನಿಸಿದಾಗ ರೋಗದ ತೀವ್ರತೆಯು ಕಡಿಮೆ ಎಂದು ನಿರೀಕ್ಷೆ ಮಾಡಲಾಗಿದೆ," ಎಂದು ಸರ್ಕಾರವು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

"ಅಸ್ತಿತ್ವದಲ್ಲಿ ಇರುವ ಕೋವಿಡ್‌ ಲಸಿಕೆಗಳು ಓಮಿಕ್ರಾನ್‌ ವಿರುದ್ಧ ಕಾರ್ಯ ನಿರ್ವಹಿಸಲಾರದು ಎಂದು ಸೂಚಿಸುವ ಯಾವುದೇ ಪುರಾವೆಗಳು ಇಲ್ಲ. ಲಸಿಕೆಯು ಇನ್ನೂ ತೀವ್ರವಾದ ಕಾಯಿಲೆಯಿಂದ ರಕ್ಷಣೆಯನ್ನು ನೀಡುತ್ತದೆ. ಪ್ರಸ್ತುತ ಲಭ್ಯವಿರುವ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳುವುದು ಅತೀ ಅಗತ್ಯ," ಎಂದು ಕೂಡಾ ಸರ್ಕಾರವು ಉಲ್ಲೇಖ ಮಾಡಿದೆ.

ಮದುವೆಗೆ 500 ಜನ ಮಾತ್ರ, ನೈಟ್ ಕರ್ಫ್ಯೂ ಇಲ್ಲ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಮದುವೆಗೆ 500 ಜನ ಮಾತ್ರ, ನೈಟ್ ಕರ್ಫ್ಯೂ ಇಲ್ಲ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ

ಕೋವಿಡ್‌ ಪರೀಕ್ಷೆಯಿಂದ ನಾವು ಕೋವಿಡ್‌ ಇದೆ ಎಂದು ಪತ್ತೆ ಹಚ್ಚಬಹುದು ಆದರೆ, ಓಮಿಕ್ರಾನ್‌ ಸೋಂಕೇ ಎಂದು ದೃಢಪಡಿಸಲು ಸಾಧ್ಯವಿಲ್ಲ. ಕೋವಿಡ್ ಪರೀಕ್ಷೆಯಿಂದ ವೈರಸ್‌ನಲ್ಲಿರುವ ನಿರ್ದಿಷ್ಟ ಜೀನ್‌ಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಓಮಿಕ್ರಾನ್‌ ರೂಪಾಂತರದ ಅಂತಿಮ ದೃಢೀಕರಣಕ್ಕಾಗಿ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಅಗತ್ಯವಿದೆ," ಎಂದು ಸರ್ಕಾರವು ವಿವರಿಸಿದೆ.

ಓಮಿಕ್ರಾನ್‌ ಲಕ್ಷಣ ಸೌಮ್ಯ ಎಂದ ದಕ್ಷಿಣ ಆಫ್ರಿಕಾದ ವೈದ್ಯೆ

ಓಮಿಕ್ರಾನ್‌ ರೂಪಾಂತರ ಹೊಂದಿರುವ ರೋಗಿಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ದಕ್ಷಿಣ ಆಫ್ರಿಕಾದ ವೈದ್ಯರು ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್‌ನ ಲಕ್ಷಣಗಳು ಅಸಾಮಾನ್ಯ. ಆದರೆ ಸೌಮ್ಯವಾಗಿರುತ್ತವೆ ಎಂದು ತಿಳಿಸಿದ್ದಾರೆ. ಈ ಓಮಿಕ್ರಾನ್‌ ರೂಪಾಂತರವು ವಿಶ್ವದಲ್ಲೇ ಎಚ್ಚರಿಕೆಯ ಕರೆಗಂಟೆ ಆಗಿರುವ ನಡುವೆ ದಕ್ಷಿಣ ಆಫ್ರಿಕಾದ ವೈದ್ಯರು ಈ ರೂಪಾಂತರ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ರಾಜಧಾನಿ ಪ್ರಿಟೋರಿಯಾದಲ್ಲಿ ಓಮಿಕ್ರಾನ್‌ ರೋಗಿಗಳ ಬಗ್ಗೆ ಅಧ್ಯಯನವನ್ನು ಮಾಡಿ‌ದ್ದಾರೆ. ಆ ಬಳಿಕ ಈ ಓಮಿಕ್ರಾನ್‌ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. "ಈ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಳ್ಳುವ ಮೊದಲೇ ಈ ಹೊಸ ರೂಪಾಂತರದ ಸಾಧ್ಯತೆಯ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು," ಎಂದು ಡಾ ಏಂಜೆಲಿಕ್ ಕೋಟ್ಜಿ ಹೇಳಿದರು. ಡಾ ಏಂಜೆಲಿಕ್ ಕೋಟ್ಜಿ ಈ ಹಿಂದೆ ಓಮಿಕ್ರಾನ್‌ ಬಗ್ಗೆ ಎಚ್ಚರಿಕೆಯನ್ನು ಮೊದಲ ಬಾರಿಗೆ ನೀಡಿದವರು ಆಗಿದ್ದಾರೆ. ಈ ಓಮಿಕ್ರಾನ್‌ ಕಾಣಿಸಿಕೊಂಡಿರುವ ಜನರಲ್ಲಿ ತೀವ್ರ ಆಯಾಸದಿಂದ ಬಳಲುತ್ತಿರುವ ವಿವಿಧ ಹಿನ್ನೆಲೆ ಹಾಗೂ ಜನಾಂಗೀಯ ಯುವಕರು ಇದ್ದಾರೆ. ಸೋಂಕಿತರಲ್ಲಿ ಅತಿ ಹೆಚ್ಚು ನಾಡಿಮಿಡಿತ ಹೊಂದಿರುವ ಆರು ವರ್ಷದ ಮಗು ಕೂಡಾ ಸೇರಿದೆ. ಆದರೆ ಈ ಓಮಿಕ್ರಾನ್‌ ರೋಗಿಗಳಲ್ಲಿ ಯಾರೂ ಕೂಡಾ ರುಚಿ ಅಥವಾ ವಾಸನೆಯ ನಷ್ಟದಿಂದ ಯಾರೂ ಬಳಲುತ್ತಿಲ್ಲ ಎಂದರು.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

English summary
Omicron Severity Likely To Be Low Says Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X