ಒಮಿಕ್ರೋನ್ ರೂಪಾಂತರಿ, ಲಸಿಕೆಗೆ ಸೋಲದೇ ಇರಬಹುದು: ರಣದೀಪ್ ಗುಲೇರಿಯಾ

ನವದೆಹಲಿ, ನವೆಂಬರ್ 29: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿ ಒಮಿಕ್ರೋನ್ ವೈರಸ್ ಲಸಿಕೆಗೆ ಸೋಲದೇ ಇರಬಹುದು ಎಂದು ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಹೊಸದಾಗಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಒಮಿಕ್ರೋನ್ ವೈರಸ್ ಸುಮಾರು 30ಕ್ಕೂ ರೂಪಾಂತರಗಳನ್ನು ಹೊಂದಿದ್ದು, ಅದರ ಪ್ರೋಟೀನ್ ಕವಚ ಮನುಷ್ಯರ ರೋಗ ನಿರೋಧಕ ಶಕ್ತಿಯಿಂದ ಪಾರಾಗುವಂತೆ ಮಾಡುತ್ತದೆ. ಇದರಿಂದ ಕೋವಿಡ್ ವ್ಯಾಕ್ಸಿನ್​ ಕೊರೊನಾದೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಕಠಿಣ ಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಒಮಿಕ್ರೋನ್ ರೂಪಾಂತರವು 30ಕ್ಕೂ ಹೆಚ್ಚು ರೂಪಾಂತರವನ್ನು ಹೊಂದಿದೆ. ಪ್ರೋಟೀನ್ ಕವಚ ಹೊಂದಿರುವುದರಿಂದ ಲಸಿಕೆಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭಾರತದಲ್ಲಿ ಬಳಸಲ್ಪಡುತ್ತಿರುವ ಲಸಿಕೆಗಳನ್ನು ಮತ್ತೊಮ್ಮೆ ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.

Omicron Reportedly Has 30+ Mutations In Spike Protein Region, May Bypass Vaccines: AIIMS Chief

ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಒಮಿಕ್ರೋನ್ ವೈರಸ್ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿದೆ. ಈಗ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಬೆಲ್ಜಿಯಂ, ಹಾಂಗ್ ಕಾಂಗ್, ಇಸ್ರೇಲ್, ನೆದರ್​ಲ್ಯಾಂಡ್​ನಲ್ಲಿ ಓಮಿಕ್ರೋನ್ ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸ್ವಾನಾದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಒಂದು ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಬಂದರೆ, ಅದು ಒಮಿಕ್ರೋನ್ ವೈರಸ್ ಹೌದೋ?, ಅಲ್ಲವೋ? ಎಂದು ತಿಳಿದುಕೊಳ್ಳಲು ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್​ಗಳಿಗೆ ಕಳುಹಿಸಲು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ INSACOG ಅಂದರೆ ಇಂಡಿಯನ್ SARS-CoV-2 ಜೀನೋಮಿಕ್ ಕನ್ಸೋರ್ಟಿಯಾ ಹೊಸ ಒಮಿಕ್ರೋನ್ ರೂಪಾಂತರವನ್ನು ಟ್ರ್ಯಾಕ್ ಮಾಡುತ್ತಿದ್ದು, ಈವರೆಗೂ ದೇಶದಲ್ಲಿ ಈ ವೈರಸ್ ಪತ್ತೆಯಾಗಿಲ್ಲ ಎಂದು ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಒಮಿಕ್ರೋನ್ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಡಾ.ರಣದೀಪ್ ಗುಲೇರಿಯಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡಿವಾಣ ಹಾಕುವುದರ ಜೊತೆಗೆ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿ ಅನುಸರಿಸಲು ಮನವಿ ಮಾಡಬೇಕು. ಕೋವಿಡ್ ಲಸಿಕೆಯ ಎರಡೂ ಡೋಸ್​ಗಳನ್ನು ತೆಗೆದುಕೊಳ್ಳಬೇಕು. ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಬರುವವರನ್ನು ಪ್ರೋತ್ಸಾಹಿಸಬೇಕು ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್‌ ತಣ್ಣಗೆ ಇನ್ನಷ್ಟುದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟುಭಯಂಕರವಾಗಿ ಕಾಣಿಸಿಕೊಂಡಿದೆ.

ಆಸ್ಪ್ರೇಲಿಯಾ ಮತ್ತು ನೆದರ್‌ಲೆಂಡ್‌ ದೇಶಗಳು, ತಮ್ಮ ದೇಶದಲ್ಲೂ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ ಎಂದು ಘೋಷಿಸಿಕೊಂಡಿವೆ. ಆಸ್ಪ್ರೇಲಿಯಾದಲ್ಲಿ 2 ಮತ್ತು ನೆದರ್‌ಲೆಂಡ್‌ನಲ್ಲಿ 13 ಪ್ರಕರಣಗ ಖಚಿತಪಟ್ಟಿವೆ. ಹೀಗಾಗಿ ವೈರಸ್‌ ಪ್ರವೇಶ ಖಚಿಪಟ್ಟದೇಶಗಳ ಸಂಖ್ಯೆ 11ಕ್ಕೆ ಏರಿದೆ.

ಈ ನಡುವೆ ಅಮೆರಿಕ ಖ್ಯಾತ ಸಾಂಕ್ರಾಮಿ ರೋಗ ತಜ್ಞ ಡಾ. ಆ್ಯಂಥೋನಿ ಫೌಸಿ, ಅಮೆರಿಕದಲ್ಲಿ ಇದುವರೆಗೆ ಹೊಸ ವೈರಸ್‌ ಪತ್ತೆಯಾಗದೇ ಇರಬಹುದು. ಆದರೆ ಅದು ಈಗಾಗಲೇ ದೇಶವನ್ನು ಪ್ರವೇಶಿರುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ. ಮತ್ತೊಂದೆಡೆ ರಷ್ಯಾದ ಸಚಿವರೊಬ್ಬರು ಕೂಡಾ, ಈಗಾಗಲೇ ಹೊಸ ವೈರಸ್‌ ತಮ್ಮ ದೇಶ ಪ್ರವೇಶ ಮಾಡಿರುವುದು ಖಚಿತ ಎಂದು ಹೇಳಿಕೊಂಡಿದ್ದಾರೆ.

ಹೀಗಾಗಿ ಹೊಸ ಹೊಸ ವೈರಸ್‌ ದಿನೇ ದಿನೇ ಮತ್ತಷ್ಟುದೇಶಗಳಿಗೆ ಹಬ್ಬಿರುವುದು ಖಚಿತಪಡುತ್ತಲೇ, ವಿಶ್ವದ ಹಲವು ದೇಶಗಳು ಆಫ್ರಿಕಾ ದೇಶಗಳ ಮೇಲೆ ವಿಮಾನ ಮತ್ತು ಜನರ ಸಂಚಾರದ ಮೇಲೆ ನಿಷೇಧ ಹೇರಿವೆ. ಜೊತೆಗೆ ಇತರೆ ದೇಶಗಳ ಪ್ರಯಾಣಿಕರ ಮೇಲೂ ನಿರ್ಬಂಧಗಳನ್ನು ಕಠಿಣಗೊಳಿಸಿವೆ.

ಕಠಿಣ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವ ಚೀನಾದಲ್ಲಿ ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೋವಿಡ್‌ ಕೇಸ್‌ಗಳು ವರದಿಯಾಗಲಿವೆ ಎಂದು ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ ಭಾನುವಾರ 23 ಕೋವಿಡ್‌ ಕೇಸುಗಳು ಪತ್ತೆಯಾಗಿವೆ. ಅವುಗಳಲ್ಲಿ 20 ಕೇಸುಗಳು ಹೊರದೇಶದಿಂದ ಬಂದವರದು.

ಇದರ ನಡುವೆ, ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಆಫ್ರಿಕಾ ಮುಂತಾದ ದೇಶಗಳಲ್ಲಿ ಹರಡುತ್ತಿರುವ ಒಮಿಕ್ರೋನ್‌ ತಳಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನವೊಂದನ್ನು ನಡೆಸಿ, ಅದರ ವರದಿ ಬಿಡುಗಡೆ ಮಾಡಿದ್ದಾರೆ.

ಆ ವರದಿಯ ಪ್ರಕಾರ ಚೀನಾದಲ್ಲಿ ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೇಸ್‌ಗಳು, ಬ್ರಿಟನ್‌ನಂತೆ ನಿರ್ಬಂಧ ತೆರವುಗೊಳಿಸಿದರೆ ನಿತ್ಯ 2.7 ಲಕ್ಷ ಕೇಸ್‌ಗಳು ಹಾಗೂ ಫ್ರಾನ್ಸ್‌ನಂತೆ ನಿರ್ಬಂಧ ತೆರವುಗೊಳಿಸಿದರೆ 4.5 ಲಕ್ಷ ಕೇಸ್‌ಗಳು ವರದಿಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+