Speaker Om Birla: ಎರಡನೇ ಭಾರಿಗೆ ಲೋಕಸಭೆಗೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ
ನವದೆಹಲಿ, ಜೂನ್ 26: ಮೂರನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರ ಹಿಡಿದ ಬೆನ್ನಲ್ಲೆ ಎರಡನೇ ಭಾರಿಗೆ ಬಿಜೆಪಿ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾದರು.
ಈ ಮೊದಲು ಓ ಬಿರ್ಲಾ ಅವರು 2019 ರಿಂದ 2024 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ಮುಂದಿನ 2029ರವರೆಗೆ ಮತ್ತೆ ಎರಡನೇ ಭಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಈ ಪ್ರಸ್ತಾಪವನ್ನು ಬಿಜೆಪಿಯ ಹಿರಿಯ ನಾಯಕರು ಮತ್ತು ಅದರ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಅನುಮೋದಿಸಿತು.
ಓಂ ಬಿರ್ಲಾ ಅವರನ್ನು ಮತ್ತೆ ಸ್ಪೀಕರ್ ಆಗಿ ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರು ಲೋಕಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್ ಸಂಸದ ಕೆ.ಸುರೇಶ್‌ರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಮಂಡಿಸಿದ್ದರು. ಆದರೆ, ಧ್ವನಿಮತದ ಮೂಲಕ ಸುರೇಶ್ ಸ್ಪರ್ಧೆಯಿಂದ ಪರಾಭವಗೊಂಡರು.
ಲೋಕಸಭೆಯ ಹೊಸ ಸ್ಪೀಕರ್ ಆದ ನಂತರ ಓಂ ಬಿರ್ಲಾ ಅವರು ತಮ್ಮ ಆಸನ ಸ್ವೀಕರಿಸಿದರು. ಈ ವೇಳೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು.
ಭಾರೀ ಬಹುಮತಗಳಿಂದ ಓಂ ಬಿರ್ಲಾ ಆಯ್ಕೆ
18ನೇ ಲೋಕಸಭಾ ಈ ಸ್ಪೀಕರ್ ಹುದ್ದೆಗೆ INDIA ಬಣದಿಂದ ಕೋಡಿಕುನ್ನಿಲ್ ಸುರೇಶ್ ಹಾಗೂ ಎನ್‌ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಈ ಕೋಡಿಕುನ್ನಿಲ್ ಸುರೇಶ್ ಅವರನ್ನು ಓಂ ಬಿರ್ಲಾ ಅವರು ಬರೋಬ್ಬರಿ 41 ಸಾವಿರ ಬಹುಮತಗಳಿಂದ ಎರಡನೇ ಬಾರಿಗೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಆದರು.
{document1}












Click it and Unblock the Notifications