• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

37ನೇ ಮದುವೆ ಸಂಭ್ರಮದಲ್ಲಿ ತಾತ! ಜಸ್ಟ್ 135 ಮಕ್ಕಳು, 126 ಮೊಮ್ಮಕ್ಕಳು!

|
Google Oneindia Kannada News

ಒಬ್ಬ ಮನುಷ್ಯ ಅಬ್ಬಬ್ಬಾ ಅಂದ್ರೆ ಎಷ್ಟು ಮದುವೆ ಆಗಬಹುದು ಹೇಳಿ..? ಭಾರತದಲ್ಲಂತೂ ಒಂದೇ ಮದುವೆಗೆ ಅವಕಾಶ ಇದೆ. ಇನ್ನು ಬೇರೆ ಬೇರೆ ದೇಶಗಳಲ್ಲಿ ಹಲವು ಮದುವೆ ಆಗೋ ಅವಕಾಶ ಇದೆ. ಆದ್ರೂ ಬಹುತೇಕ ಗಂಡಸರು ಒಂದೇ ಮದುವೆಗೆ ಹಣ್ಣುಗಾಯಿ-ನೀರುಗಾಯಿ ಆಗ್ತಾರೆ. ಆದ್ರೆ ಇಲ್ಲೊಬ್ಬ ತಾತಪ್ಪ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದು 28 ಪತ್ನಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಎದುರಲ್ಲಿ.

ಇನ್ನೇನು ಬಿದ್ದು ಹೋಗೋ ಹುಣಸೆ ಮರದಂತಿರುವ ತಾತಪ್ಪನಿಗೆ 37ನೇ ಮದುವೆ ಬೇಕಿತ್ತಾ ಅಂತಾ ಇಂಟರ್ನೆಟ್‌ನಲ್ಲಿ ಜನರು ಕುಹಕವಾಡುತ್ತಿದ್ದಾರೆ. ಆದ್ರೆ ಇನ್ನೂ ಕೆಲವರು ಹುಣಸೆ ಮುಪ್ಪಾದರೂ, ಹುಳಿ ಮುಪ್ಪೆ? ಎನ್ನುತ್ತಿದ್ದಾರೆ. ಅದೇನೆ ಇರಲಿ ಒಂದು ಮದುವೆ ಆದ ಬಹುತೇಕರು 'ಇದೊಂದು ಜನ್ಮ ಸವೆಸಿದರೆ ಸಾಕಪ್ಪಾ' ಅನ್ನೋ ಸ್ಥಿತಿಗೆ ಬರುವ ಈ ಕಾಲಘಟ್ಟದಲ್ಲಿ ಬರೋಬ್ಬರಿ 37 ಮದುವೆಯಾಗಿರುವ ತಾತಪ್ಪನ ಧೈರ್ಯ ಮೆಚ್ಚಲೇಬೇಕು ಅಂತಾ ಹಲವರು ಹೊಗಳಿಕೆಯ ಮಾತನಾಡಿದ್ದಾರೆ. ಆದರೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವಿಡಿಯೋ ಯಾವ ದೇಶದ್ದು ಎಂಬ ವಿಚಾರವೇ ಇನ್ನೂ ಕನ್ಫರ್ಮ್ ಆಗಿಲ್ಲ.

ರಾಜರಿಗೆ ನೂರಾರು ಪತ್ನಿಯರು
ಭಾರತದಲ್ಲಿ ಬಹು ಹಿಂದಿನಿಂದಲೂ ಬಹುಪತ್ನಿತ್ವ ಪದ್ಧತಿ ಇತ್ತು. ಅದರಲ್ಲೂ ರಾಜರ ಕಾಲದಲ್ಲಿ ಅರಸರು ತಮ್ಮ ಇಚ್ಛೆಗೆ ತಿಳಿದಷ್ಟು ಮದುವೆ ಆಗುತ್ತಿದ್ದರು. ಇನ್ನು ಮಕ್ಕಳ ಸಂಖ್ಯೆಯೊಂತು ಲೆಕ್ಕವೇ ಇರುತ್ತಿರಲಿಲ್ಲ. ಆದರೆ ಈಗ ಆಧುನಿಕ ಯುಗದಲ್ಲಿ ಇಂತಹ ಘಟನೆಗಳು ಅತಿ ವಿರಳ. ಆದ್ರೂ ಕೆಲವರು ಹತ್ತಾರು ಮದುವೆ ಮಾಡಿಕೊಂಡು ಜಗತ್ತಿನ ಗಮನ ಸೆಳೆಯುತ್ತಾರೆ. ಜಗತ್ತಿನ ಕೆಲವು ದೇಶಗಳಲ್ಲಿ 'ಬಹುಪತ್ನಿತ್ವ ಪದ್ಧತಿ' ಈಗಲೂ ಜಾರಿಯಲ್ಲಿದ್ದು, ಹಾಗೇ ಬಹುಪತ್ನಿತ್ವಕ್ಕೆ ಪ್ರೋತ್ಸಾಹ ಕೂಡ ಸಿಗುತ್ತೆ. ಆದರೆ ಅದಕ್ಕೂ ಒಂದು ಲಿಮಿಟ್ ಇರಬೇಕು ಅನ್ನೋದನ್ನ ಈ ತಾತಪ್ಪ ಮರೆತಂತೆ ಕಾಣುತ್ತಿದೆ.

Old man’s 37th marriage in front of 135 children’s

135 ಮಕ್ಕಳಂತೆ ತಾತನಿಗೆ..!
ಒಂದು ಕಡೆ 37ನೇ ಮದುವೆಯಾಗಿ ಶಾಕ್ ಕೊಟ್ಟಿದ್ದ ತಾತಪ್ಪ, ಒಂದೇ ವಿಡಿಯೋದಲ್ಲಿ ಶಾಕ್ ಮೇಲೆ ಶಾಕ್‌ ಕೊಟ್ಟಿದ್ದಾನೆ. ಈತನಿಗೆ ಇದು 37ನೇ ಮದುವೆ ಎಂಬ ವಿಚಾರ ಒಂದು ಕಡೆಯಾದರೆ, ಈಗಾಗಲೇ ತಾತಪ್ಪನಿಗೆ 135 ಮಕ್ಕಳಿದ್ದಾರಂತೆ. ಹಾಗೇ 126 ಮೊಮ್ಮಕ್ಕಳು ಕೂಡ ಮದುವೆ ಸಂದರ್ಭದಲ್ಲಿ ಹಾಜರಿದ್ದರು. ಆದ್ರೆ ವೃದ್ಧ ಮಾತ್ರ ಒಂದಷ್ಟೂ ನಾಚಿಕೆ ಪಡದೆ ಹೊಸ ಪತ್ನಿಯನ್ನ ತನ್ನ ಬಾಳಿಗೆ ಸ್ವಾಗತಿಸಿದ್ದಾನೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ಪ್ರೇಮಗೀತೆ ಹಾಡಲು, ಹನಿಮೂನ್‌ಗೆ ಹೊರಡಲು ತಾತಪ್ಪ ಸಿದ್ಧನಾಗಿದ್ದಾನೆ.

ತಾಳಿ ಕಟ್ಟುವ ಶುಭ ವೇಳೆ..!
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ 45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಅತ್ತ ಅಜ್ಜ ಮದುವೆ ಆಗುತ್ತಿದ್ದರೆ ಸುತ್ತಲೂ ನಿಂತಿದ್ದ ಮಕ್ಕಳು ಹಾಗೂ ಮೊಮ್ಮಕ್ಕಳು ವೃದ್ಧನನ್ನ ಹುರಿದುಂಬಿಸಿದ್ದಾರೆ. 37ನೇ ಮದುವೆಯಾಗುತ್ತಿರುವ ನೀನೇ ಗ್ರೇಟ್ ಎನ್ನುತ್ತಾ ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲ ಕೆಲವು ತರಲೆ ಡೈಲಾಗ್‌ಗಳು ಕೂಡ ವಿಡಿಯೋದಲ್ಲಿ ಕೇಳಿಬಂದಿವೆ. ನಮ್ಮ ಕೈಯಲ್ಲಿ ಒಬ್ಬರನ್ನೇ ಸುಧಾರಿಸಲು ಆಗ್ತಿಲ್ಲ, ಅಂಥದ್ರಲ್ಲಿ ನೀನು 37ನೇ ಮದುವೆ ಆಗ್ತಿರೋದು ಗ್ರೇಟ್ ತಾತಾ ಅಂತೆಲ್ಲಾ ಡೈಲಾಗ್ ಹೊಡೆದಿದ್ದಾರೆ. ಕೊರೊನಾ ಟೈಮಲ್ಲಿ ಈ ಮದುವೆ ನೋಡಿ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ..!

English summary
A marriage video of a old man viral on internet, the voice in the video saying it is 37th marriage of him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X