Old Coin ನಿಮ್ಮನೆ ಡಬ್ಬದಲ್ಲಿರುವ ಹಳೆ ನಾಣ್ಯಗಳೇ ನಿಮ್ಮನ್ನು ಶ್ರೀಮಂತರನ್ನಾಗಿಸಬಹುದು!ಒಂದೊಂದು ಕಾಯಿನ್‌ಗಿದೆ ಲಕ್ಷ ಲಕ್ಷ ಬೆಲೆ

Old Coin Significance: ಅನೇಕರಿಗೆ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಹಳೆಯ ನಾಣ್ಯಗಳು ಕೇವಲ ಹಳೆಯ ನೆನಪುಗಳಲ್ಲ. ಇತ್ತೀಚಿನ ದಿನಗಳಲ್ಲಿ ಅದು ಹಣ ಗಳಿಸಲು ಇರುವ ಮಾರ್ಗವೂ ಹೌದು. ಆದರೆ ಅದೆಷ್ಟೋ ಮಂದಿಗೆ ಅವರು ತೆಗೆದಿಟ್ಟುಕೊಂಡಿರುವ ಹಳೆ ನಾಣ್ಯಗಳು ಲಕ್ಷಗಟ್ಟಲೆ ರೂಪಾಯಿಗೆ ಮಾರಾಟವಾಗುತ್ತಿವೆ ಎನ್ನುವ ಸತ್ಯವೇ ಗೊತ್ತಿರುವುದಿಲ್ಲ. ಭಾರತದಾದ್ಯಂತ, ಅಪರೂಪದ ಮತ್ತು ವಿಂಟೇಜ್ ನಾಣ್ಯಗಳಿಗೆ ಹೆಚ್ಚು ಬೆಲೆ ಸಿಗುತ್ತಿದೆ. ಈ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸವೇ ನಿಮ್ಮ ಅದೃಷ್ಟವನ್ನು ಬದಲಿಸಬಹುದು. ನಾಣ್ಯವು ಹಳೆಯದಾಗುತ್ತಾ ಹೋದಂತೆ, ಅಪರೂಪವಾಗುತ್ತಾ ಇದ್ದಂತೆ ಅದರ ಬೇಡಿಕೆಯೂ ಹೆಚ್ಚಾಗುತ್ತದೆ. ವಿಶೇಷವಾಗಿ ಐತಿಹಾಸಿಕ ಯುಗಗಳು, ಐಕಾನಿಕ್ ಆಡಳಿತಗಾರರು ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನಾಣ್ಯಗಳಿಗೆ ವಿಶೇಷವಾಗಿ ಬೆಲೆ ನಿಗದಿ ಮಾಡಲಾಗುತ್ತದೆ.

Old coin

ಯಾವ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ?:

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಮುದ್ರಿಸಲಾದ ನಾಣ್ಯಗಳಿಗೆ ಹೆಚ್ಚು ಬೇಡಿಕೆಯಿದೆ. 1950ರ ದಶಕದ ಸ್ವಾತಂತ್ರ್ಯಾನಂತರದ ನಾಣ್ಯಗಳು ಸಹ ಹೆಚ್ಚು ಗಮನ ಸೆಳೆಯುತ್ತಿವೆ. ಅದರಲ್ಲಿಯೂ ತಪ್ಪು ದಿನಾಂಕಗಳು ಅಥವಾ ವಿನ್ಯಾಸ ದೋಷಗಳಂತಹ ಟಂಕಸಾಲೆ ದೋಷಗಳನ್ನು ಹೊಂದಿರುವ ನಾಣ್ಯಗಳು ಅತ್ಯಂತ ಅಪರೂಪವಾಗಿರುತ್ತದೆ. ಸೀಮಿತ ಆವೃತ್ತಿಯ ಸ್ಮರಣಾರ್ಥ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಇದೆ.

ಕೆಲವು ನಾಣ್ಯಗಳು ಲಕ್ಷಗಳವರೆಗೆ ಮಾರಾಟವಾಗುತ್ತಿವೆ:

ಅದರಲ್ಲಿಯೂ ಕೆಲವು ನಾಣ್ಯಗಳ ಬೆಲೆಯು ಆಶ್ಚರ್ಯಗೊಳಿಸುವ ಮಟ್ಟಿಗೆ ಇದೆ. ಉದಾಹರಣೆಗೆ, 1939ರ ಒಂದು ರೂಪಾಯಿ ಬೆಳ್ಳಿ ನಾಣ್ಯವು ಆನ್‌ಲೈನ್ ಹರಾಜಿನಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗಿದೆ. ಅಪರೂಪ ಅಥವಾ ಐತಿಹಾಸಿಕವಾಗಿ ಮಹತ್ವದ್ದಾಗಿರುವ ನಾಣ್ಯಗಳು ರಾತ್ರೋರಾತ್ರಿ ಸಂಗ್ರಾಹಕರ ನಿಧಿಯಾಗಿ ರೂಪಾಂತರಗೊಳ್ಳಬಹುದು.ಈ ನಾಣ್ಯಗಳು ನೋಡುವುದಕ್ಕೆ ಸಾಮಾನ್ಯ ಎನ್ನುವಂತೆಯೇ ಕಾಣಬಹುದು. ಆದರೆ ಅದು ಕೈ ತುಂಬಾ ಹಣ ಗಳಿಸಿ ಕೊಡುವುದು ಕೂಡಾ ಸುಳ್ಳಲ್ಲ.

ಹಳೆಯ ನಾಣ್ಯಗಳನ್ನು ಎಲ್ಲಿ ಮತ್ತು ಹೇಗೆ ಮಾರಾಟ ಮಾಡಬೇಕು ?:

ನಿಮ್ಮಲ್ಲಿ ಕೂಡಾ ಹಳೆಯ ನಾಣ್ಯಗಳಿದ್ದರೆ ಅವುಗಳನ್ನು ಮಾರಾಟ ಮಾಡುವಾಗ ಎಚ್ಚರಿಕೆ ಅಗತ್ಯ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ನಾಣ್ಯಗಳನ್ನು ಮಾರಾಟ ಮಾಡಬೇಕು. ಅಪರೂಪದ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ ಎನ್ನುವುದೇನು ನಿಜ, ಆದರೆ ವಂಚಕರ ಜಾಲ ಕೂಡಾ ಅದೇ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಕೂಡಾ ಸುಳ್ಳಲ್ಲ. ಹಾಗಾಗಿ ಆಗಬಹುದಾದ ವಂಚನೆಯಿಂದ ತಪ್ಪಿಸಲು ಅಪರಿಚಿತ ವೆಬ್‌ಸೈಟ್‌ಗಳಲ್ಲಿ ವಹಿವಾಟು ನಡೆಸದಿರುವುದೇ ಬುದ್ದಿವಂತಿಕೆ.

ನಾಣ್ಯಗಳನ್ನು ಮಾರಾಟ ಮಾಡುವ ಮೊದಲು ಅನುಸರಿಸಬೇಕಾದ ಸಲಹೆಗಳು :

ನಾಣ್ಯದ ಸ್ಥಿತಿಯು ಅದರ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸ್ವಚ್ಛವಾದ, ಹಾನಿಯಾಗದ ನಾಣ್ಯಗಳು ಯಾವಾಗಲೂ ಹೆಚ್ಚಿನ ಮೌಲ್ಯವನ್ನು ಪಡೆಯುತ್ತವೆ. ನಾಣ್ಯವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕೂ ಮೊದಲು ಲೋಹದ ಪ್ರಕಾರ, ತೂಕ ಮತ್ತು ಬಿಡುಗಡೆಯ ವರ್ಷವನ್ನು ಪರಿಶೀಲಿಸಿ. ನಿಮ್ಮ ನಾಣ್ಯಗಳನ್ನು ತಜ್ಞರಿಂದ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ. ಇದು ನಾಣ್ಯದ ನಿಜವಾದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ಬೆಲೆಯನ್ನು ಪಡೆಯಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

ನಾಣ್ಯಕ್ಕೆ ಸಿಗುವುದು ಅತ್ಯುನ್ನತ ಬೆಲೆ :

ನೀವು ಅದಾವುದೋ ಹಳೆಯ ಡಬ್ಬದಲ್ಲಿ ಬಚ್ಚಿಟ್ಟ ಹಳೆಯ ನಾಣ್ಯಗಳು ಧೂಳು ಹಿಡಿಯುತ್ತಿರಬಹುದು. ಆದರೆ ಸರಿಯಾದ ಮಾರ್ಗದರ್ಶನದಿಂದ ಅದನ್ನು ಬಳಸಿದರೆ ಕೋಟ್ಯಾಧಿಪತಿಯಾಗಲೂ ಬಹುದು. ಅದು ವಿಂಟೇಜ್ ಬ್ರಿಟಿಷ್ ಇಂಡಿಯಾ ನಾಣ್ಯವಾಗಿರಲಿ ಅಥವಾ ಅಪರೂಪದ ಸ್ಮರಣಾರ್ಥ ನಾಣ್ಯವಾಗಿರಲಿ, ಕಾಯಿನ್‌ ಕಲೆಕ್ಟ್‌ ಮಾಡುವವರು ನಿಮ್ಮ ಕೈಯಲ್ಲಿರುವ ಇತಿಹಾಸಕ್ಕಾಗಿ ಅತ್ಯುನ್ನತ ಬೆಲೆಯನ್ನು ನೀಡೊದಕ್ಕೆ ತಯಾರಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+