ಶುಕ್ರವಾರದಿಂದ ಓಲಾ ಶೇರ್, ಉಬರ್ ಪೂಲ್ ರಸ್ತೆ ಮೇಲೆ ಓಡಲ್ಲ

Subscribe to Oneindia Kannada

ಬೆಂಗಳೂರು, ಜನವರಿ 31: ಶೇರ್ ಕ್ಯಾಬ್ ಗಳನ್ನು ಬಳಸುತ್ತಿದ್ದವರಿಗೆ ಇದು ಕಹಿ ಸುದ್ದಿ. ಶುಕ್ರವಾರದಿಂದ ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್ ಕಂಪೆನಿಗಳು ತಮ್ಮ ಶೇರ್ ಕ್ಯಾಬ್ ಸೇವೆಯನ್ನು ಸ್ಥಗಿತಗೊಳಿಸಲಿವೆ.

ಓಲಾ ಶೇರ್ ಮತ್ತು ಉಬರ್ ಪೂಲ್ ಸೇವೆಗಳು ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಸೋಮವಾರ ಸಾರಿಗೆ ಆಯುಕ್ತ ಎಂ. ಕೆ ಅಯ್ಯಪ್ಪ ಜತೆಗಿನ ಎರಡು ಗಂಟೆಗಳ ದೀರ್ಘ ಸಮಾಲೋಚನೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

Ola Share and UberPOOL service stops from Friday

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಓಲಾ ಮತ್ತು ಉಬರ್ ಕಂಪೆನಿಗಳ ಶೇರಿಂಗ್ ಸೌಲಭ್ಯ ಉಪಯೋಗಿಸುತ್ತಿದ್ದ ಸಾವಿರಾರು ಬೆಂಗಳೂರಿಗರು ಈಗ ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಇನ್ನೇನಿದ್ದರೂ ಪೂರ್ತಿ ಕ್ಯಾಬ್ ಬುಕ್ ಮಾಡಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

"ಕಂಪನಿಗಳು ತಮ್ಮ ಸಾಫ್ಟ್ವೇರ್ ಅಪ್ಡೇಟ್ ಮಾಡಲು ಮೂರು ದಿನಗಳ ಕಾಲಾವಕಾಶ ಕೇಳಿವೆ. ಒಂದೊಮ್ಮೆ ಕಂಪೆನಿಗಳು ತಮ್ಮ ಸೇವೆ ನಿಲ್ಲಿಸದಿದ್ದರೆ ನಾವು ಕ್ರಮ ಕೈಗೊಳ್ಳಲಿದ್ದೇವೆ,' ಎಂದು ಸಾರಿಗೆ ಆಯುಕ್ತ ಎಂ.ಕೆ ಅಯ್ಯಪ್ಪ ತಿಳಿಸಿದ್ದಾರೆ.

'ರೈಡ್ ಶೇರಿಂಗ್ ಸೇವೆಯಿಂದ ರಸ್ತೆಗಳ ಮೇಲೆ ಕಾರು ಸಂಖ್ಯೆಯೂ ಕಡಿಮೆಯಾಗುತ್ತದೆ. ಮಾತ್ರವಲ್ಲ ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ. ಒಂದೊಮ್ಮೆ ಕಂಪೆನಿಗಳು ಶೇರಿಂಗ್ ಸೇವೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ನಾವು ಸರಕಾರಕ್ಕೆ ಆ ಅರ್ಜಿಯನ್ನು ಕಳುಹಿಸಿಕೊಡಲಿದ್ದೇವೆ ," ಎಂದು ಆಯುಕ್ತರು ತಿಳಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ದಾರಿ ಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿ ಇಳಿಸುವ ಅವಕಾಶ ಬಿಎಂಟಿಸಿಗೆ ಮಾತ್ರ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ola and Uber companies decided to stop their cab sharing facility as it is violating the transport regulations.
Please Wait while comments are loading...