ತೈಲ ಬೆಲೆ ಏರಿಕೆ; ಸಾಮಾಜಿಕ ತಾಣದಲ್ಲಿ ಫುಲ್ ಟ್ರೋಲ್
ಬೆಂಗಳೂರು, ಮಾರ್ಚ್ 07: ಪಂಚ ರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದೆ. ಸೋಮವಾರ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಆದರೆ 5 ರಾಜ್ಯಗಳಲ್ಲಿ ಯಾರು ಅಧಿಕಾರಕ್ಕೆ ಬರಬಹುದು?, ಯಾವ ಪಕ್ಷಕ್ಕೆ ಎಷ್ಟು ಸೀಟು ಬರಬಹುದು? ಎಂಬುದಕ್ಕಿಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟು ಏರಿಕೆಯಾಗಲಿವೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಐದು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಬೆಲೆ ಏರಿಕೆ ಮಾಡಲಾಗುತ್ತದೆ ಎಂಬ ಚರ್ಚೆಗಳು ಜೋರಾಗಿವೆ.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, "ಪಂಚ ರಾಜ್ಯಗಳ ಚುನಾವಣೆಗಾಗಿ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆಯನ್ನು ತಡೆಹಿಡಿದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ತೈಲ ಬೆಲೆ ಏರಿಕೆ ಅಂತರಾಷ್ಟ್ರೀಯ ದರಗಳಿಗೆ ಸಂಬಂಧಿಸಿದ್ದು. ನಾವು ಸೂಕ್ತ ಸಮಯದಲ್ಲಿ ಜನ ಹಿತದ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ನಡುವಿನ ಯುದ್ದದ ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಟ್ವಿಟರ್‌ನಲ್ಲಿ ಕಂಡುಬಂದ ಕೆಲವು ಆಸಕ್ತಿಕರ ಅಂಶಗಳು ಇಲ್ಲಿವೆ ನೋಡಿ...
|
ಪ್ಯಾಕೇಟ್‌ನಲ್ಲಿ ಬರಲಿದೆ ಪೆಟ್ರೋಲ್
ಈ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾದ ಬಳಿಕ ಪೆಟ್ರೋಲ್ ಶ್ಯಾಂಪೂಗಳ ಮಾದರಿಯಲ್ಲಿ ಪ್ಯಾಕೇಟ್‌ನಲ್ಲಿ ಸಿಗಲಿದೆ ಎಂದು ಟ್ವೀಟ್‌ನಲ್ಲಿ ವ್ಯಂಗ್ಯ ಮಾಡಲಾಗಿದೆ. Coming soon ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
|
ಮಾರ್ಚ್ 10ರ ಬಳಿಕ ಬೆಲೆ ಬದಲು
ನಟ ಧನುಷ್ ಹಾಡಿರುವ ಕೊಲವೆರಿಡಿ ಹಾಡನ್ನು ನಕಲು ಮಾಡಿ ಮಾರ್ಚ್ 10ರ ಬಳಿಕ ಪೆಟ್ರೋಲ್ ಬೆಲೆ ಏರಿಕೆಯಾಗಲಿ ಎಂದು ಟ್ವೀಟ್ ಮಾಡಲಾಗಿದೆ. after 10th march be like ಎಂಬ ಬರಹ ಗಮನಸೆಳೆಯುತ್ತಿದೆ.
|
ಮಾರ್ಚ್ 10ರ ಬಳಿಕ ಬೆಲೆ ಏರಿಕೆ ಖಚಿತ
ಕೋವಿಡ್, ವಾರ್ ನಡುವೆ ಮಧ್ಯಮ ವರ್ಗದ ಪರಿಸ್ಥಿತಿ ಏನಾಗಲಿದೆ? ಎಂಬುದನ್ನು ಟ್ವೀಟ್ ಮಾಡಲಾಗಿದೆ. ಮಾರ್ಚ್ 10ರ ಬಳಿಕ ಪೆಟ್ರೋಲ್ ಬೆಲೆ ಏರಿಕೆಯಾಗಲಿದೆ ಎಂದು ವ್ಯಂಗ್ಯ ಮಾಡಲಾಗಿದೆ.
|
ಗರ್ಲ್ ಫ್ರೆಂಡ್ ಜೊತೆ ಬೈಕ್ ರೈಡ್
ಪೆಟ್ರೋಲ್ ಬೆಲೆ ಏರಿಕೆಯಾದ ಬಳಿಕ ಗರ್ಲ್ ಫ್ರೆಂಡ್ ಬೈಕ್ ರೈಡ್ ಹೋಗಲು ಕರೆದರೆ ಎಂತಹ ಪರಿಸ್ಥಿತಿ ಬರಲಿದೆ ಎಂದು ಚಿತ್ರದ ಮೂಲಕ ವಿವರಿಸಲಾಗಿದೆ.
|
ಪೆಟ್ರೋಲ್, ಡೀಸೆಲ್, ಗ್ಯಾಸ್
ಮಾರ್ಚ್ 10ರ ಬಳಿಕ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳು ಗಗನಕ್ಕೆ ಏರಲಿವೆ.












Click it and Unblock the Notifications