ಅಂದು ಇದು ಕುಡುಕರ ಹಳ್ಳಿ, ಇಂದು ರಾಷ್ಟ್ರೀಯ ಪ್ರಶಸ್ತಿ
ಭುವನೇಶ್ವರ, ಜೂನ್ 26: ಈ ಕಥೆ ಒಡಿಶಾದ ಸಣ್ಣ ಬುಡಕಟ್ಟು ಹಳ್ಳಿ ಲರಿಯಪಲ್ಲಿಯದು. ಒಂದು ಕಾಲದಲ್ಲಿ ಇಲ್ಲಿ ಶೇಕಡಾ 90 ಜನರು ಮದ್ಯ ಸೇವಿಸುತ್ತಿದ್ದರು. ಇದೀಗ ಇದೇ ಹಳ್ಳಿ ಮದ್ಯ ಮತ್ತು ಮಾದಕ ವಸ್ತು ಪ್ರತಿಬಂಧಕ 2018ರಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ್ದಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
ಒಂದು ಕಾಲದಲ್ಲಿ ಮೂರು ವರ್ಷಗಳ ಹಿಂದೆ ಈ ಗ್ರಾಮ ಪಂಚಾಯತ್ ನಲ್ಲಿ ದಿನ ನಿತ್ಯ 240 ಲೀಟರ್ ಮದ್ಯ ಖರ್ಚಾಗುತ್ತಿತ್ತು. ಅದೇ ಇಂದು ಇಲ್ಲಿ ಶೂನ್ಯ ಮದ್ಯ ಬಳಕೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಆರ್ಟ್ ಆಫ್ ಲಿವಿಂಗ್ ಮತ್ತು ಒಡಿಶಾ ಸರಕಾರದ ಜಂಟಿ ಸುಧಾರಣಾ ಕ್ರಮ.
ಆರ್ಟ್ ಆಫ್ ಲಿವಿಂಗ್ ನ ಸಾಮಾಜಿಕ ಸಮಸ್ಯೆಗಳ ವಿಭಾಗದ ನಿರ್ದೇಶಕರಾದ ಭೋಲಾ ನಾಥ್ ಅವರು ಇಲ್ಲಿ ಸಮುದಾಯಗಳನ್ನು ಒಂದುಗೂಡಿಸುವುದು, ಅವರಲ್ಲಿ ಜಾಗೃತಿ ಮೂಡಿಸುವುದು ಜೊತೆಗೆ ನಡವಳಿಕೆ ಬದಲಾವಣೆ ಮಾಡುವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರು.

ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಇಲ್ಲಿನ ಜನರಿಗೆ ಅವರು ಕಲಿಸಿಕೊಟ್ಟಿದ್ದರು. ಅದರ ಪರಿಣಾಮಗಳು ಇವತ್ತು ಕಾಣಿಸುತ್ತಿವೆ. ಇಲ್ಲಿನ ಜನರು ಇಂದು ಮದ್ಯ ವ್ಯಸನವನ್ನು ತೊರೆದು ಹೊರ ಬಂದಿದ್ದಾರೆ.
2016 - 17ರಲ್ಲಿ ಇಲ್ಲಿ ಕಳ್ಳಭಟ್ಟಿ ಮಾರಾಟದ 6 ಪ್ರಕರಣಗಳು ದಾಖಲಾಗಿದ್ದವು. 2017-18ರಲ್ಲಿ ಈ ಪ್ರಮಾಣ ಮೂರಕ್ಕೆ ಇಳಿಕೆಯಾಗಿತ್ತು. ಈ ವರ್ಷವಂತೂ ಇಲ್ಲಿಯವರೆಗೆ ಯಾವ ಪ್ರಕರಣಗಳೂ ದಾಖಲಾಗಿಲ್ಲ.
ಒಂದು ಕಾಲದಲ್ಲಿ ಇಲ್ಲಿ ಕಳ್ಳಭಟ್ಟಿ, ಮದ್ಯ ಮಾರುತ್ತಿದ್ದವರಿಗೆ ಪರ್ಯಾಯವಾಗಿ ನರೇಗಾ ಯೋಜನೆಯಡಿ ಉದ್ಯೋಗಗಳನ್ನು ನೀಡಿ ಮುಖ್ಯವಾಹಿನಿಗೆ ಅವರನ್ನು ಕರೆ ತರಲಾಗಿದೆ. ಹೀಗಿದ್ದು ಕೆಲವರು ಮದ್ಯ ಸೇವಿಸುತ್ತಿದ್ದುದು ಮನೆ ಮನೆಯ ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು. ಇವರನ್ನು ಸಾಮಾಜಿಕ ಕೆಲಸಗಳಲ್ಲಿ ಜೊತೆಗೆ ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಅವರನ್ನು ಮದ್ಯ ವ್ಯಸನದಿಂದ ಹೊರ ತರಲಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications