Get Updates
Get notified of breaking news, exclusive insights, and must-see stories!

ಬಾಲಸೋರ್‌ ರೈಲು ದುರಂತಕ್ಕೆ ಮೂಲ ಕಾರಣ ಪತ್ತೆ; ರೈಲ್ವೆ ಸಚಿವ

ನವದೆಹಲಿ, ಜೂನ್ 04: ಒಡಿಶಾ ರಾಜ್ಯದ ಬಾಲಸೋರ್‌ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಮೂಲ ಕಾರಣ ಪತ್ತೆಯಾಗಿದೆ. ಮತ್ತೊಂದು ಕಡೆ ಹಳಿಗಳ ಮೇಲಿಂದ ಅವಶೇಷಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

ಭಾನುವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಎಎನ್‌ಐ ಜೊತೆ ಅಪಘಾತ ಸ್ಥಳದಲ್ಲಿ ಮಾತನಾಡಿದರು. ಹಳಿಗಳ ಮೇಲಿಂದ ಅವಶೇಷ ತೆರವುಗೊಳಿಸುವ ಕಾರ್ಯವನ್ನು ಸಚಿವರು ಪರಿಶೀಲಿಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.

Odisha Balasore Train Accident Root Cause Identified Says Ashwini Vaishnaw

ರೈಲು ದುರಂತಕ್ಕೆ ಕಾರಣವೇನು?; ಸಚಿವರು ಮಾತನಾಡಿ, "ರೈಲ್ವೆ ಸುರಕ್ಷತಾ ಆಯುಕ್ತರು ಈಗಾಗಲೇ ಈ ರೈಲು ದುರಂತದ ಬಗ್ಗೆ ತನಿಖೆ ನಡೆಸಿದ್ದಾರೆ. ತನಿಖಾ ವರದಿ ಇನ್ನೂ ಕೈ ಸೇರಬೇಕಿದೆ. ಆದರೆ ಮೂಲ ಕಾರಣವನ್ನು ನಾವು ಪತ್ತೆ ಮಾಡಿದ್ದೇವೆ" ಎಂದು ಸಚಿವರು ಹೇಳಿದರು.

"ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆಯಿಂದ ಈ ಘಟನೆ ನಡೆದಿದೆ. ರೈಲ್ವೆ ಸುರಕ್ಷತಾ ಆಯುಕ್ತರು ತಮ್ಮ ವರದಿಯಲ್ಲಿ ಇದಕ್ಕೆ ಕಾರಣ ಯಾರು? ಎಂದು ಹೇಳಲಿದ್ದಾರೆ. ವರದಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.

"ಈ ದುರಂತ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆಯಿಂದ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದಂತೆ ಏನೂ ಆಗಿಲ್ಲ. ಈಗ ನಮ್ಮ ಗಮನ ಅವಶೇಷ ತೆರವುಗೊಳಿಸಿ, ಹಳಿಯನ್ನು ಸಂಚಾರಕ್ಕೆ ಮುಕ್ತವಾಗಿಸುವತ್ತ ಇದೆ" ಎಂದು ಸಚಿವರು ಸ್ಪಷ್ಟಪಡಿಸಿದರು.

Odisha Balasore Train Accident Root Cause Identified Says Ashwini Vaishnaw

"ಘಟನೆಗೆ ಮೂಲ ಕಾರಣ ಪತ್ತೆ ಹಚ್ಚಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದಾರೆ. ಇಂದು ನಾವು ಹಳಿಯನ್ನು ಪುನರ್ ಸ್ಥಾಪನೆ ಮಾಡುತ್ತೇವೆ. ಬೋಗಿಯಲ್ಲಿ ಸಿಲುಕಿದ್ದ ಎಲ್ಲಾ ಶವಗಳನ್ನು ತೆರವು ಮಾಡಲಾಗಿದೆ. ಬುಧವಾರದ ಹೊತ್ತಿಗೆ ಹಳಿಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿಸುವ ಗುರಿ ನಮ್ಮದು" ಎಂದು ರೈಲ್ವೆ ಸಚಿವರು ಹೇಳಿದರು.

ಮೂರು ರೈಲುಗಳ ಡಿಕ್ಕಿ; ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಿಂತಿದ್ದ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಪರಿಣಾಮ 20 ಬೋಗಿಗಳು ಹಳಿ ತಪ್ಪಿದ್ದವು. ಅಕ್ಕಪಕ್ಕದ ಹಳಿಗಳ ಮೇಲೆ ಬೋಗಿಗಳು ಉರುಳಿ ಬಿದಿದ್ದವು. ಕೇವಲ 6 ನಿಮಿಷಗಳ ಅಂತರದಲ್ಲಿ ಇದೇ ಮಾರ್ಗದಲ್ಲಿ ಬಂದ ಹೌರಾ ಸೂಪರ್ ಫಾಸ್ಟ್‌ ರೈಲು ಸಹ ಹಳಿಗಳಿಗೆ ಡಿಕ್ಕಿಯಾಗಿ ಇದರ ಸುಮಾರು 3 ಬೋಗಿ ಹಳಿ ತಪ್ಪಿತ್ತು.

288 ಜನರು ಸಾವನ್ನಪ್ಪಿದ ಈ ದುರಂತದ ಬಳಿಕ ರೈಲ್ವೆ ಅಪಘಾತ ತಡೆಯವ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ಕವಚದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕವಚದಿಂದ ಏನೂ ಮಾಡಲು ಸಾಧ್ಯವಿಲ್ಲ. ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಬದಲಾವಣೆಯಿಂದ ಈ ದುರಂತ ನಡೆದಿದೆ ಎಂದು ಹೇಳಿದ್ದಾರೆ.

ಬಾಲಸೋರ್‌ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಶವಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಇಡಲಾಗಿದೆ. ಶವಗಳನ್ನು ಗುರುತಿಸಿ ಅವುಗಳಿಗೆ ಕುಟುಂಬದವರಿಗೆ ಹಸ್ತಾಂತರ ಮಾಡುವುದು ಸವಾಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡವರು ನೀಡುವ ಮಾಹಿತಿ ಅನ್ವಯ ಶವಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ಅಪಘಾತಗೊಂಡ ರೈಲಿನಲ್ಲಿದ್ದವರು ಪ್ರಯಾಣ ಮುಂದುವರೆಸಲು ಅನುಕೂಲವಾಗುವಂತೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಒಂದೇ ರಾಜ್ಯದ ಹಲವಾರು ಮಂದಿ ಮೃತಪಟ್ಟಿದ್ದರೆ ಶವಗಳನ್ನು ರೈಲಿನ ಮೂಲಕವೇ ಕಳಿಸಿಕೊಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಇದಕ್ಕಾಗಿಯೇ ಪ್ರತ್ಯೇಕ ಬೋಗಿ ಅಳವಡಿಕೆ ಮಾಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+