ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ-ಬೆಸ ಯಾರಿಗೆ ಲಾಭ? ಕೇಜ್ರಿಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

|
Google Oneindia Kannada News

ನವದೆಹಲಿ, ಜನವರಿ , 06: ಮಾಲಿನ್ಯ ತಡೆ ಉದ್ದೇಶದಿಂದ ಸಮ-ಬೆಸ ವಾಹನ ಪದ್ಧತಿಯನ್ನು ಜಾರಿಗೆ ತಂದಿದ್ದ ನವದೆಹಲಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಇದೀಗ ವಿವರಣೆ ಕೇಳಿದೆ. ಜನವರಿ 8 ರೊಳಗೆ ವರದಿ ಸಲ್ಲಿಕೆ ಮಾಡಲು ತಿಳಿಸಿದೆ.

ಒಂದು ವಾರದಲ್ಲಿ ಕಡಿಮೆ ಆದ ಮಾಲಿನ್ಯದ ಪ್ರಮಾಣ ಎಷ್ಟು? ಜನರಿಗೆ ಇದರಿಂದ ಯಾವ ಲಾಭವಾಗಿದೆ ಎಂಬುದನ್ನು ತಿಳಿಸಬೇಕು. ಪ್ರಾಯೋಗಿಕ ಲೆಕ್ಕ ಮಾಡಲು ನಿಮಗೆ ಒಂದು ವಾರ ಸಾಕಲ್ಲವೇ ಎಂದು ಪ್ರಶ್ನೆ ಮಾಡಿದೆ.[ದೆಹಲಿ ಸಮ-ಬೆಸ ಸಂಚಾರ ನಿಯಮದ ಪ್ರಮುಖ ಅಂಶಗಳು]

Odd-even scheme work, Delhi Court questions Kejriwal

ಆದರೆ ಕೇಜ್ರಿ ಸರ್ಕಾರ ಯೋಜನೆಯನ್ನು 15 ದಿನ ವಿಸ್ತರಣೆಗೆ ಅವಕಾಶ ನೀಡಬೇಕು. ಆಗ ಮಾತ್ರ ಪರಿಣಾಮ ಲೆಕ್ಕ ಹಾಕಲು ಸಾಧ್ಯ ಎಂಬ ವಾದ ಮುಂದಿಟ್ಟಿದೆ. ದೆಹಲಿ ಸರ್ಕಾರದ ಸಮ ಬೆಸ ವಾಹನ ಪದ್ಧತಿ ವಿರೋಧಿಸಿ ದೆಹಲಿ ಹೈ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.[ದಿಲ್ಲಿಯಲ್ಲಿ ಐಷಾರಾಮಿ ಕಾರು ಕೊಳ್ಳಲು ಸಾಧ್ಯವೇ ಇಲ್ಲ]

ಜನವರಿ 1 ರಿಂದ ಯೋಜನೆ ಜಾರಿಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆದಿತ್ತು. ಯೋಜನೆಯನ್ನು ಇನ್ನು ಕೆಲ ದಿನ ಕಾಲ ವಿಸ್ತರಣೆ ಮಾಡಿದರೆ ಮಾತ್ರ ಸಕಾರಾತ್ಮಕ ಪರಿಣಾಮ ಕಾಣಲು ಸಾಧ್ಯವಿದೆ ಎಂಬುದು ದೆಹಲಿ ಸರ್ಕಾರದ ವಾದ.

English summary
The Delhi High Court questioned AAP government over its ambitious odd-even plan. The court has asked Kejriwal-led AAP government to evaluate the impact of odd-even formula on the National capital's air pollution and reply by January 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X