• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್‌ ಛೀಮಾರಿ

|
Google Oneindia Kannada News

ನವದೆಹಲಿ, ಜುಲೈ1: ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, ಇಡೀ ದೇಶದ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದೆ.

ಪ್ರವಾದಿ ಮಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಭಾರತ ಸೇರಿದಂತೆ ವಿಶ್ವದಾದ್ಯಂತ ಭಾರಿ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಗಲ್ಫ್‌ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ನೂಪುರ್ ಶರ್ಮಾ ವಿರುದ್ಧ ಕ್ರಮ ಕೋರಿ ಹೈಕೋರ್ಟ್‌ಗೆ ಪಿಐಎಲ್ನೂಪುರ್ ಶರ್ಮಾ ವಿರುದ್ಧ ಕ್ರಮ ಕೋರಿ ಹೈಕೋರ್ಟ್‌ಗೆ ಪಿಐಎಲ್

"ವಾಹಿನಿಯಲ್ಲಿ ನಡೆದ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ನೂಪುರ್ ಶರ್ಮಾ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನೂಪುರ್ ಇಡೀ ದೇಶದ ಕ್ಷಮೆಯಾಚಿಸಬೇಕು" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ನೂಪುರ್ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿತು. ನೂಪುರ್ ಶರ್ಮಾಗೆ ಬೆದರಿಕೆ ಇದೆ ಎಂದು ಆಕೆಯ ಪರ ವಕೀಲರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್‌ "ಆಕೆಗೆ ಬೆದರಿಕೆ ಇದೆಯಾ ಅಥವಾ ಆಕೆಯೆ ಭದ್ರೆತೆಗೆ ಬೆದರಿಕೆಯಾಗಿದ್ದಾಳ?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದೆ. "ಆಕೆ ದೇಶಾದ್ಯಂತ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾಳೆ, ಇಂದು ದೇಶದಲ್ಲಿ ಆಗುತ್ತಿರುವ ಘಟನೆಗಳಿಗೆ ನೂಪುರ್ ಶರ್ಮಾ ಸಂಪೂರ್ಣ ಜವಾಬ್ದಾರಳು" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ನ್ಯಾಯಮೂರ್ತಿ ಸೂರ್ಯಕಾಂತ್ ಗರಂ

ನೂಪರ್‍‌ ಶರ್ಮಾ ಹೇಳಿಕೆಗಳು ಆಕೆಯ "ಹಠಮಾರಿ ಮತ್ತು ಸೊಕ್ಕಿನ ಸ್ವಭಾವ"ವನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

Nupur Sharma Should Apologise To The Whole Country: Supreme Court


"ಅವರು ಪಕ್ಷದ ವಕ್ತಾರರಾಗಿದ್ದರೆ ಏನು, ಆಕೆಗೆ ಅಧಿಕಾರದ ಬೆಂಬಲವಿದ್ದ ಮಾತ್ರಕ್ಕೆ ನೆಲದ ಕಾನೂನಿಗೂ ಬೆಲೆ ಕೊಡದೆ ಯಾವ ಹೇಳಿಕೆಯನ್ನಾದರೂ ನೀಡಬಹುದು ಎಂದು ಆಕೆ ಭಾವಿಸಿದ್ದಾಳ?" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಶ್ನಿಸಿದರು.

ಟಿವಿ ಚರ್ಚೆಯ ಸಂದರ್ಭದಲ್ಲಿ ಆಂಕರ್ ಕೇಳಿದ ಪ್ರಶ್ನೆಗೆ ಮಾತ್ರ ಅವರು ಪ್ರತಿಕ್ರಿಯಿಸಿದ್ದಾರೆ ಎಂದು ನೂಪುರ್ ಶರ್ಮಾ ಪರ ವಕೀಲರು ಉತ್ತರಿಸಿದರು.

"ಆಗ ಆಂಕರ್ ವಿರುದ್ಧವೂ ಪ್ರಕರಣ ಇರಬೇಕಿತ್ತು" ಎಂದು ನ್ಯಾಯಾಲಯ ಹೇಳಿದೆ. ಆ ರೀತಿಯಾದರೆ ನಾಗರಿಕರಿಗೆ ಮಾತನಾಡುವ ಯಾವ ಹಕ್ಕು ಇರುವುದಿಲ್ಲ ಎಂದು ವಕೀಲರು ವಾದಿಸಿದರು.

"ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ, ಪ್ರಜಾಪ್ರಭುತ್ವದಲ್ಲಿ ಹುಲ್ಲು ಬೆಳೆಯುವ ಹಕ್ಕಿದೆ ಮತ್ತು ಕತ್ತೆಗೆ ತಿನ್ನುವ ಹಕ್ಕಿದೆ" ಎಂದು ನ್ಯಾಯಾಧೀಶರು ಖಾರವಾಗಿ ಉತ್ತರಿಸಿದರು. ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವ ಆದೇಶವನ್ನು ಉಲ್ಲೇಖಿಸಿ ನೂಪುರ್ ಶರ್ಮಾ ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಲಿಲ್ಲ.

"ಅವಳನ್ನು ಪತ್ರಕರ್ತೆಯ ಪೀಠದಲ್ಲಿ ಕೂರಿಸಲು ಸಾಧ್ಯವಿಲ್ಲ. ಅವಳು ಟಿವಿ ಚರ್ಚೆಗೆ ಹೋದಾಗ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದಾಗ ಅದು ಸಮಾಜದ ರಚನೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗಿತ್ತು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Recommended Video

   ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡದ ನಟಿ | *India | OneIndia Kannada
   English summary
   Supreme Court said, Suspended BJP leader Nupur Sharma single-handedly responsible for what is happening in the country. she should apologise to the whole country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X