ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಗೆ ಟಿಎಂಸಿ ಕಾರ್ಯಕರ್ತರಿಂದ ಬೆಂಕಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಕೋಲ್ಕತ್ತಾ, ಜನವರಿ 4: ಪಶ್ಚಿಮ ಬಂಗಾಲದ ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರಪುರದಲ್ಲಿರುವ ಬಿಜೆಪಿಯ ನಾಯಕರ ಮನೆಗೆ ಟಿಎಂಸಿ ಕಾರ್ಯಕರ್ತರು ಬಾಂಬ್ ಹಾಕಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಟಿಎಂಸಿ ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಹಾಗೂ ತಪಸ್ ಪಾಲ್ ರನ್ನು ಮಂಗಳವಾರ ಬಂಧಿಸಲಾಯಿತು. ಆ ನಂತರ ಕೋಲ್ಕತ್ತಾದಲ್ಲಿರುವ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.[ಪಶ್ಚಿಮ ಬಂಗಾಲದ ಬಿಜೆಪಿ ನಾಯಕನ ಮನೆ ಮೇಲೆ ಬಾಂಬ್ ದಾಳಿ]

Now TMC burns BJP office in Hooghly, West Bengal

ಮೊದಲಿಗೆ ನೋಟು ನಿಷೇಧ ಮಾಡಿದ ಮೋದಿ, ಈಗ ತೃಣಮೂಲ ನಿಷೇಧಕ್ಕೆ ಮುಂದಾಗಿದ್ದಾರೆ ಎಂದಿದ್ದರು ಮಮತಾ. ಕೋಲ್ಕತ್ತಾದಲ್ಲಿರುವ ಪಕ್ಷದ ಕಚೇರಿ ಮೇಲೆ ದಾಳಿ ನಡೆಯುತ್ತಿರುವಾಗ ಪೊಲೀಸರು ಎಲ್ಲೋ ನೋಡುತ್ತಾ ನಿಂತಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಇದು ಸರಕಾರಿ ಪ್ರಾಯೋಜಿತ ದಾಳಿ ಎಂದು ಬಿಜೆಪಿ ಹೇಳಿದೆ. ಈ ಘಟನೆ ನಂತರ ಬಿಜೆಪಿ ಕಚೇರಿ ಹೊರಗೆ ಸಿಆರ್ ಪಿಎಫ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BJP's office in Hooghly, West Bengal was set on fire allegedly by TMC workers. The incident comes just a few hours after the house of a BJP leader was bombed in Uttarapura again by TMC workers.
Please Wait while comments are loading...