ರೈಲ್ವೆ ಟಿಕೆಟ್ ರದ್ದು ಈಗ ಸರಳ; ಬ್ಯಾಂಕ್ ಖಾತೆಗೆ ಹಣ ವಾಪಸ್

ಬೆಂಗಳೂರು, ಅಕ್ಟೋಬರ್ 30 : ಪ್ರಯಾಣಿಕ ಸ್ನೇಹಿಯಾಗಲು ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಇಟ್ಟಿದೆ. ಅಧಿಕೃತ ಏಜೆಂಟ್‌ಗಳ ಮೂಲಕ ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸುವುದವನ್ನು ಸರಳವಾಗಿಸಿದೆ.

ಒಟಿಪಿ ಆಧಾರಿತ ಸುಲಭ, ಪಾರದರ್ಶಕ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಜಾರಿಗೆ ತಂದಿದೆ. ಈ ಮೂಲಕ ಸುಲಭವಾಗಿ ಟಿಕೆಟ್ ರದ್ದು ಮಾಡಬಹುದು. ಟಿಕೆಟ್ ರದ್ದಾದ ತಕ್ಷಣ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಮರುಪಾವತಿಯಾಗುತ್ತದೆ.

ಪೂರ್ಣ ಪ್ರಮಾಣದ ವೈಟಿಂಗ್ ಲಿಸ್ಟ್​ನ ಟಿಕೆಟ್ ಮುಂಗಡ ಕಾಯ್ದಿರಿಸಿದರೆ ಅಥವಾ ಪ್ರಯಾಣಿರೇ ಟಿಕೆಟ್​ ರದ್ದುಗೊಳಿಸಿದರೆ ಅವರ ಮೊಬೈಲ್​ಗೆ ಒಂದು ಒಟಿಪಿ ರವಾನೆಯಾಗುತ್ತದೆ. ಅದನ್ನು ಏಜೆಂಟ್‌ಗೆ ನೀಡುವ ಮೂಲಕ ಟಿಕೆಟ್ ರದ್ದುಗೊಳಿಸಬಹುದು.

Now Its Easy To Cancel Railway Ticket By OTP

ಅಧಿಕೃತ ಏಜೆಂಟ್ ಟಿಕೆಟ್ ರದ್ದು ಮಾಡಿದ ತಕ್ಷಣ ಪ್ರಯಾಣಿಕರ ಮೊಬೈಲ್​ ನಂಬರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುತ್ತದೆ. ಈ ವ್ಯವಸ್ಥೆಯಿಂದ ಟಿಕೆಟ್ ರದ್ದು ಮಾಡುವುದು ಸರಳವಾದಂತಾಗಿದೆ.

ಐ. ಆರ್. ಸಿ. ಟಿ. ಸಿ ವೆಬ್‌ಸೈಟ್ ಮೂಲಕ ಎಲ್ಲಾ ದಿನ ಬೆಳಗ್ಗೆ 10 ರಿಂದ ರಾತ್ರಿ 11ರ ತನಕ ಟಿಕೆಟ್ ಬುಕ್ ಮಾಡಬಹುದು. ಈ ಹಿಂದೆ ಒಂದು ಐಡಿಯಲ್ಲಿ ಕೇವಲ 6 ಟಿಕೆಟ್ ಬುಕ್ ಮಾಡಬಹುದಿತ್ತು. ಈಗ ಅದನ್ನು 12ಕ್ಕೆ ಏರಿಕೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+