ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬಂಕ್ ನಲ್ಲೂ ಹಣ ವಿಥ್ ಡ್ರಾಗೆ ಅವಕಾಶ

|
Google Oneindia Kannada News

ನವದೆಹಲಿ, ನವೆಂಬರ್ 18: ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ದೊಡ್ಡ ದೊಡ್ಡ ಸರತಿಯಲ್ಲಿ ನಿಂತು ರೋಸಿ ಹೋಗಿದ್ದಿರಾ? ಈಗ ನಗದು ಪಡೆಯುವುದಕ್ಕೆ ಹೊಸ ಸೇರ್ಪಡೆಯಾಗಿದೆ. ಪೆಟ್ರೋಲ್ ಬಂಕ್ ಗಳಲ್ಲೂ ದಿನಕ್ಕೆ ವ್ಯಕ್ತಿಯೊಬ್ಬರು 2 ಸಾವಿರ ರುಪಾಯಿ ಪಡೆಯಬಹುದು. ಈ ಬಗ್ಗೆ ದೂರದರ್ಶನ್ ಗುರುವಾರ ಟ್ವೀಟ್ ಮೂಲಕ ಘೋಷಣೆ ಮಾಡಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್ (ಪಿಒಎಸ್)ಮಶೀನ್ ನಲ್ಲಿ ಸ್ವೈಪ್ ಮಾಡಿ ಹಣ ಪಡೆಯಬಹುದು.['3 ದಿನದಲ್ಲಿ ಸಮಸ್ಯೆ ಸರಿಪಡಿಸಿ, ಇಲ್ಲದಿದ್ದರೆ ಸುಮ್ನೆ ಬಿಡಲ್ಲ']

ನವೆಂಬರ್ 8ರಂದು ನೋಟು ರದ್ದು ಮಾಡಿದ ನಂತರ ಹಣ ಬದಲಾವಣೆ ಹಾಗೂ ವಿಥ್ ಡ್ರಾಗೆ ಕೆಲವು ನಿಯಮಗಳನ್ನು ಪರಿಚಯಿಸಲಾಗಿತ್ತು. ಅದರಿಂದ ದೇಶದಾದ್ಯಂತ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಜನಸಂದಣಿ ವಿಪರೀತವಾಗಿದೆ.

Petrol pump

ಸಾರ್ವಜನಿಕ ಉದ್ದಿಮೆಯ ತೈಲ ಕಂಪೆನಿಗಳಾದ ಐಒಸಿಎಲ್, ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಅನುಕೂಲ ಮಾಡಿಕೊಡಲು ನಿರ್ಧರಿಸಿವೆ. ಈ ವ್ಯವಸ್ಥೆ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ, ಎಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಿಒಎಸ್ ಮಶೀನ್ ಗಳು ಎಲ್ಲಿವೆಯೋ ಅಲ್ಲಿ ದೊರೆಯುತ್ತದೆ.

English summary
Now petrol pumps will also dispense 2,000 cash per person per day, state-run Doordarshan announced in a tweet on Thursday.Cash to be dispensed at 2,500 petrol pumps; Cash to be given by swiping of debit/credit card via POS (Point of Sale) machine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X