ಮತ್ತೆ ಚೀನಾ ತಕರಾರು; ಭಾರತೀಯ ಸೇನೆ ಗಸ್ತಿಗೆ ತಡೆ?

ನವದೆಹಲಿ, ಜೂನ್ 24 : ಪ್ಯಾಂಗಾಂಗ್, ಗಲ್ವಾನ್ ಬಳಿಕ ಚೀನಾ ಸೇನೆ ಮತ್ತೆ ಭಾರತದ ಸೇನೆಯ ಜೊತೆ ತಕರಾರು ತೆಗೆದಿದೆ. ಡಿಬಿಓ ಪ್ರದೇಶದಲ್ಲಿ ಭಾರತೀಯ ಸೇನೆ ಗಸ್ತು ತಿರುಗುವುದಕ್ಕೆ ಚೀನಾ ತಡೆಯೊಡ್ಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

      ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಾರಿ ಮಳೆ | Weather Forecast | KSNDMC | Oneindia Kannada

      ಬುಧವಾರ ಸಂಜೆ ರಾಷ್ಟ್ರೀಯ ಸುದ್ದಿ ವಾಹಿನಿ ಈ ಕುರಿತು ವರದಿ ಮಾಡಿದೆ. ಪೂರ್ವ ಲಡಾಖ್​ನ ದೌಲತ್ ಬೇಗ್ ಓಲ್ಡಿ (ಡಿಬಿಓ) ಪ್ರದೇಶದಲ್ಲಿ ಭಾರತೀಯ ಸೇನೆಯು ಗಸ್ತು ತಿರುಗುವುದಕ್ಕೆ ಚೀನಾ ತಡೆ ಹಾಕಿದೆ. 10 ಮತ್ತು 13ನೇ ಗಸ್ತು ಕೇಂದ್ರಕ್ಕೆ ಹೋಗದಂತೆ ತಡೆದಿದೆ.

      ಚೀನಾ ಕಾರಕೋರಂ ಪರ್ವತ ಶ್ರೇಣಿ ಪ್ರದೇಶದಲ್ಲಿನ ಭೂ ಭಾಗವನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಖಚಿತವಾಗಿದೆ. ಇದು ಬೃಹತ್‌ ಪರ್ವತ ಶ್ರೇಣಿಯಾಗಿದ್ದು ಪಾಕಿಸ್ತಾನ, ಚೀನಾ ಮತ್ತು ಭಾರತದ ಗಡಿಯನ್ನು ಹೊಂದಿದೆ.

      Now China Creating Trouble In Daulat Beg Oldi Area

      ಪಾಕಿಸ್ತಾನ ಭಾಗಕ್ಕೆ ಹೋಗುವ ಪ್ರದೇಶದಲ್ಲಿ ಚೀನಾ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ಭೂ ಭಾಗ ವಶಕ್ಕೆ ಪಡೆಯಲು ಮುಂದಾಗಿದ್ದು, ಈ ಪ್ರದೇಶ ಭಾರತದ ಗಡಿ ರೇಖೆಗಿಂತ ಮೇಲಿನ ಪ್ರದೇಶದಲ್ಲಿದೆ.

      ಡಿಬಿಓ ಪ್ರದೇಶದಲ್ಲಿ ನಾವು ಗಸ್ತು ಮಾಡುವುದಕ್ಕೆ ಚೀನಾ ತಡೆ ಹಾಕುತ್ತಿದೆ. ನಮ್ಮ 10 ಮತ್ತು 13ನೇ ಪಾಯಿಂಟ್‌ಗಳಿಗೆ ಹೋಗದಂತೆ ತಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ರಾಷ್ಟ್ರೀಯ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+