ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್‌ ಮೇಲಿನ 1.4 ಲಕ್ಷ ರೂ. ಮನೆ ತೆರಿಗೆ ಪಾವತಿಸುವಂತೆ ನೋಟೀಸ್

|
Google Oneindia Kannada News

ಆಗ್ರಾ, ಡಿಸೆಂಬರ್‌ 19: ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಆಗ್ರಾದ ನಾಗರಿಕ ಸಂಸ್ಥೆಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿ ಜಗತ್ಪ್ರಸಿದ್ಧ ಸ್ಮಾರಕ ತಾಜ್ ಮಹಲ್‌ ಮೇಲಿನ ಮನೆ ತೆರಿಗೆಯಾಗಿ 1.47 ಲಕ್ಷ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ.

ಎಎಸ್‌ಐ ಅಧಿಕಾರಿಗಳ ಪ್ರಕಾರ, ತಾಜ್‌ಮಹಲ್‌ಗೆ ಬಾಕಿ ಉಳಿದಿರುವ ಮನೆ ತೆರಿಗೆಯನ್ನು ಪಾವತಿಸಲು ಕಳೆದ ತಿಂಗಳ ನೋಟಿಸ್ ಕೆಲವು ದಿನಗಳ ಹಿಂದೆ ಬಂದಿದೆ. ಬಾಕಿ ಪಾವತಿಸಲು ಎಎಸ್‌ಐಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಸಮಯದೊಳಗೆ ತೆರಿಗೆಯನ್ನು ಪಾವತಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ಹೇಳಿದೆ ಎಂದು ತಿಳಿಸಿದ್ದಾರೆ.

ತಾಜ್ ಮಹಲ್ ಇತಿಹಾಸದ ಮೇಲಿನ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ತಾಜ್ ಮಹಲ್ ಇತಿಹಾಸದ ಮೇಲಿನ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮನೆ ತೆರಿಗೆ ಮೊತ್ತವು 47,000 ರೂ.ಗಿಂತ ಹೆಚ್ಚಿನ ಬಾಕಿಯ ಮೇಲಿನ ಬಡ್ಡಿಯನ್ನು ಸಹ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ತಾಜ್‌ ಮಹಲ್ ಸ್ಮಾರಕದ ಮೇಲಿನ ವಾರ್ಷಿಕ ಮನೆ ತೆರಿಗೆ 11,098 ರೂ. ಆಗಿದೆ. 1920ರಲ್ಲಿ ತಾಜ್ ಮಹಲ್ ಅನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಈ ಸ್ಮಾರಕಕ್ಕೆ ಮನೆ ತೆರಿಗೆ ವಿಧಿಸಿರಲಿಲ್ಲ ಎಂದು ಎಎಸ್ ಐ ಅಧಿಕಾರಿಗಳು ತಿಳಿಸಿದ್ದಾರೆ.

Notice issued ASI to pay 1.4 lakhs house tax on the Taj Mahal.

ಸಂರಕ್ಷಿತ ಸ್ಮಾರಕವಾಗಿರುವ ಆಗ್ರಾದ ಮೊಘಲ್ ಸಮಾಧಿಯಾದ ಇತ್ಮಾದ್-ಉದ್-ದೌಲಾ ಸಮಾಧಿಗೆ ಬಾಕಿ ಇರುವ ಮನೆ ತೆರಿಗೆ ಪಾವತಿಗೆ ಇದೇ ರೀತಿಯ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಬಿ ತಾಜ್ ಎಂದೂ ಕರೆಯಲ್ಪಡುವ ಈ ಸಮಾಧಿಯನ್ನು ಮೊಘಲ್ ಚಕ್ರವರ್ತಿ ಜಹಾಂಗೀರನ ಪತ್ನಿ ನೂರ್ ಜಹಾನ್ ತನ್ನ ತಂದೆಗಾಗಿ ನಿಯೋಜಿಸಿದಳು.

ರಾಷ್ಟ್ರೀಯ ಸ್ಮಾರಕಗಳಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ಅನ್ನು 'ತಪ್ಪಾಗಿ' ಕಳುಹಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಲಿಕೆ ಅಧಿಕಾರಿಗಳು, ಪಟ್ಟಣದಲ್ಲಿ ಮನೆ ತೆರಿಗೆ ಹಾಗೂ ತಪ್ಪು ಎಸಗಿದ್ದರೆ ಅದನ್ನು ಅರಿತುಕೊಳ್ಳುವ ಜವಾಬ್ದಾರಿಯನ್ನು ಖಾಸಗಿ ಕಂಪನಿಯೊಂದಕ್ಕೆ ವಹಿಸಲಾಗಿದೆ ಎಂದು ತಿಳಿಸಿದರು.

ತೆರಿಗೆಯನ್ನು ಠೇವಣಿ ಮಾಡಲು ಎಎಂಸಿಯು ಎಎಸ್‌ಐಗೆ 15 ದಿನಗಳ ಗಡುವನ್ನು ನಿಗದಿಪಡಿಸಿದೆ. 25 ನವೆಂಬರ್ 2022 ರಂದು ಆಗ್ರಾ ಮುನ್ಸಿಪಲ್ ಕಾರ್ಪೊರೇಶನ್‌ನ ತೆರಿಗೆ ಮೌಲ್ಯಮಾಪನ ಅಧಿಕಾರಿಯಿಂದ ನೋಟಿಸ್ ನೀಡಲಾಗಿದೆ. ಆದರೆ, ಇತ್ತೀಚೆಗಷ್ಟೇ ಎಎಸ್‌ಐಗೆ ನೋಟಿಸ್‌ ಬಂದಿದೆ. ತಾಜ್ ಜೊತೆಗೆ, ಯಮುನಾ ನದಿಗೆ ಅಡ್ಡಲಾಗಿರುವ ಸ್ಮಾರಕವಾದ ಇತ್ಮಾದ್-ಉದ್-ದೌಲಾಗೆ ಸಹ ಮನೆ ತೆರಿಗೆ ನೋಟಿಸ್ ನೀಡಲಾಗಿದೆ.

Notice issued ASI to pay 1.4 lakhs house tax on the Taj Mahal.

ಆದರೆ, ಎಎಸ್‌ಐ ಅಧಿಕಾರಿಗಳು ನೋಟಿಸ್‌ನಿಂದ ಆಶ್ಚರ್ಯಗೊಂಡಿದ್ದು, ಶತಮಾನದ ನಂತರ ಮೊದಲ ಬಾರಿಗೆ ಇಂತಹ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ 31, 2022 ರವರೆಗೆ ಎಎಂಸಿ ಹೊರಡಿಸಿದ ನೋಟೀಸ್ ಪ್ರಕಾರ, ಬಾಕಿ ಉಳಿದಿರುವ ಭೂ ತೆರಿಗೆಯು 88,784 ರೂ ಆಗಿರುತ್ತದೆ ಮತ್ತು ಅದರ ಮೇಲೆ ಸಂಗ್ರಹವಾದ 47,943 ರೂ ಬಡ್ಡಿಯಾಗಿದೆ.

2022-23ನೇ ಹಣಕಾಸು ವರ್ಷದ ಮನೆ ತೆರಿಗೆಯನ್ನು 11,098 ರೂ ಎಂದು ತೋರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮ್ಯಾಪಿಂಗ್ ಮೂಲಕ ಮನೆ ತೆರಿಗೆಗಾಗಿ ಸಾಯಿ ಕನ್‌ಸ್ಟ್ರಕ್ಷನ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ ಎಂದು ಸಹಾಯಕ ಮುನ್ಸಿಪಲ್ ಕಮಿಷನರ್ ಮತ್ತು ತಾಜ್‌ಗಂಜ್ ವಲಯ ಉಸ್ತುವಾರಿ ಸರಿತಾ ಸಿಂಗ್ ಹೇಳಿದ್ದಾರೆ. ತಾಜ್ ಮಹಲ್ ಸೇರಿದಂತೆ ಎಲ್ಲಾ ಸ್ಮಾರಕಗಳನ್ನು ಮಾತ್ರ ಇಲಾಖೆ ನೋಡಿಕೊಳ್ಳುತ್ತಿದೆ ಎಂದು ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಸರ್ಕಾರ್ ಹೇಳಿದ್ದಾರೆ.

English summary
This is the first time that the civic body of Agra in Uttar Pradesh has issued a notice to the Archaeological Survey of India and directed them to pay Rs 1.47 lakh as house tax on the world famous monument Taj Mahal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X