ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಯಿಂದ ಸೂರತ್ ನಗರ ಪ್ರದಕ್ಷಿಣೆ, ಭರ್ಜರಿ ಪ್ರಚಾರ

By Sachhidananda Acharya
|
Google Oneindia Kannada News

ಸೂರತ್, ನವೆಂಬರ್ 8: ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಸೂರತ್ ನಗರ ಪ್ರದಕ್ಷಿಣೆ ನಡೆಸಿದರು.

ಮೋದಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಏನಿದೆ ?ಮೋದಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಏನಿದೆ ?

ಈ ವೇಳೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಅಪನಗದೀಕರಣ ಮತ್ತು ಜಿಎಸ್ಟಿ ಸೂರತ್ ಉದ್ಯಮದ ಕಾಲುಗಳನ್ನೇ ಮುರಿದು ಹಾಕಿದೆ ಎಂದು ಕಿಡಿಕಾರಿದ್ದಾರೆ. ಇಂದು ಅವರು ದೇಶದ ಜವಳಿ ಮತ್ತು ವಜ್ರ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಸೂರತ್ ನಲ್ಲಿ 'ಬ್ಲ್ಯಾಕ್ ಡೇ' ಆಚರಿಸಿದರು.

ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?

ದೇಶದ ಆರ್ಥಿಕತೆ ಮೇಲೆ ವರ್ಷದ ಹಿಂದೆ ದಾಳಿ ನಡೆಸಲಾಗಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಉದ್ಯಮ ನಾಶ ಮಾಡಿದ ಆ ಎರಡು ಹೊಡೆತ

"ನಾನು ಇಲ್ಲಿಯ ಜನರ ಜತೆ ಸಮಾಲೋಚನೆ ನಡೆಸಿದೆ. ಅವರೆಲ್ಲಾ ಅಪನಗದೀಕರಣ ಮತ್ತು ಜಿಎಸ್ಟಿ ಸೂರತ್ ನ ಕಾಲುಗಳನ್ನೇ ಮುರಿದಿವೆ ಎಂದು ಹೇಳಿದ್ದಾರೆ. ಈ ಎರಡು ಹೊಡೆತಗಳು ಇಲ್ಲಿನ ಉದ್ಯಮವನ್ನೇ ನಾಶ ಮಾಡಿವೆ," ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಶಕ್ತಿ ಕುಗ್ಗಿಸಿದ ಸರ್ಕಾರ

ಸೂರತ್ ನ ಜನರನ್ನು ಬೆದರಿಸಲಾಗಿದೆ. ಆದರೆ ಸತ್ಯ ಹೊರ ಬಂದೇ ಬರುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, "ಸೂರತ್ ಜನರು ಚೀನಾದ ಜತೆ ಸ್ಪರ್ಧೆ ನಡೆಸುತ್ತಿದ್ದಾರೆ. ಇವರಿಗೆ ಸರಕಾರ ಬೆಂಬಲ ನೀಡುವ ಬದಲು ಅವರ ಶಕ್ತಿಯನ್ನೇ ಕುಗ್ಗಿಸಿದೆ," ಎಂದು ಆಪಾದಿಸಿದರು. ನಾವು ಈ ರೀತಿ ಜಿಎಸ್ಟಿ ಜಾರಿ ಮಾಡದಂತೆ ಪ್ರಧಾನಿ ಮತ್ತು ಹಣಕಾಸು ಸಚಿವರ ಬಳಿ ಕೇಳಿಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ.

ಚೀನಾದ ಜತೆ ಸ್ಪರ್ಧೆಯೊಂದೇ ಮಾರ್ಗ

"ಇಲ್ಲಿ ರಾಜಕೀಯ ಏನಿಲ್ಲ. ನಾವು ಚೀನಾದ ಜತೆ ಸ್ಪರ್ಧಿಸಲೇಬೇಕಾಗಿದೆ. ದಯವಿಟ್ಟು ಇಲ್ಲಿನ ಕೈಗಾರಿಕೆ ಮತ್ತು ಉದ್ಯಮಗಳನ್ನು ನಾಶ ಮಾಡಬೇಡಿ," ಎಂದು ರಾಹುಲ್ ಮನವಿ ಮಾಡಿದರು. ನಾವು ಸೂರತ್ ಮತ್ತು ಈ ದೇಶವನ್ನು ರಕ್ಷಿಸಲು ಜಿಎಸ್ಟಿ ಜಾರಿಗೆ ತಂದಿರಲಿಲ್ಲ ಎಂದು ಅವರು ವಿವರ ನೀಡಿದರು.

5 ಸ್ಥರಗಳ ಟ್ಯಾಕ್ಸ್ ಸರಿಯಲ್ಲ

ಐದು ಸ್ಥರಗಳ ತೆರಿಗೆ ಪದ್ದತಿ ಸರಿಯಲ್ಲ. ಅತೀ ಹೆಚ್ಚು ಅಂದರೆ ಶೇಕಡಾ 18 ಮಾತ್ರ ತೆರಿಗೆ ತರಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಇದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಸರಕಾರ ನಮ್ಮ ಧ್ವನಿಯನ್ನು ಕೇಳಿಲ್ಲ ಎಂದು ರಾಹುಲ್ ಆಪಾದಿಸಿದರು.

ರಾಹುಲ್ ಸೂರತ್ ರೌಂಡ್ಸ್

ಸೂರತ್ ಭೇಟಿ ವೇಳೆ ರಾಹುಲ್ ಗಾಂಧಿ ಇಲ್ಲಿನ ಕೈಮಗ್ಗದ ಕಾರ್ಮಿಕರು, ವಜ್ರಕ್ಕೆ ಪಾಲಿಷ್ ನೀಡುವ ಕುಶಲಕರ್ಮಿಗಳ ಜತೆ ಸಮಾಲೋಚನೆ ನಡೆಸಿದರು. ಸಂಜೆ ಅಡಜಾನ್ ಪ್ರದೇಶದಲ್ಲಿ ವ್ಯಾಪಾರಿಗಳ ಜತೆ ಸಮಾಲೋಚನೆಯನ್ನೂ ನಡೆಸಿದರು.

ಭರ್ಜರಿ ಪ್ರವಾಸ

ಈ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಗೆಲ್ಲುವ ಆಶಾಭಾವನೆ ಇದೆ. ಈ ಕಾರಣಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತವರ ತಂಡ ಬಿರುಸಿನ ಪ್ರಚಾರದಲ್ಲಿ ನಿರತವಾಗಿದೆ. ಹೋದಲ್ಲಿ ಬಂದಲ್ಲೆಲ್ಲಾ ಯುವತಿಯರು ರಾಹುಲ್ ಜತೆ ಸೆಲ್ಫಿ ತೆಗೆಯಲು ಮುಗಿಬೀಳುತ್ತಿದ್ದಾರೆ.

ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು 182 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು 18ರಂದು ಮತಎಣಿಕೆ ನಡೆಯಲಿದೆ.

English summary
Lashing out at the Centre, Congress vice president Rahul Gandhi today said note ban and GST rollout have broken the legs of Surat as he observed a "black day" in the country's textile and diamond hub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X