ಮಹಿಳೆಯರ ಶಬರಿ ಮಲೆ ಪ್ರವೇಶ ವಿರೋಧಿಸುವವರಿಗೆ ಸ್ವಾಮಿ ಖಡಕ್ ಪ್ರಶ್ನೆ
ನವದೆಹಲಿ, ಅಕ್ಟೋಬರ್ 17: ಮಹಿಳೆಯರಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಲಾಯಕ್ಕೆ ಪ್ರವೇಶ ಮುಕ್ತಗೊಳಿಸಿರುವ ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸುತ್ತಿರುವವರ ವಿರುದ್ಧ ಬಿಜೆಪಿ ವಕ್ತಾರ ಸುಬ್ರಹ್ಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಸುಪ್ರಿಂ ತೀರ್ಪು ಸಂಪ್ರದಾಯಕ್ಕೆ ವಿರೋಧ ಎನ್ನುತ್ತಿರುವ ನೀವು, ತ್ರಿವಳಿ ತಲಾಖ್ ನಿಷೇಧಿಸಿದಾಗ ಏಕೆ ಬೆಂಬಲ ನೀಡಿದ್ದಿರಿ. ಅದೂ ಸಂಪ್ರದಾಯವೇ ಅಲ್ಲವೆ ಎಂದು ಮರ್ಮಕ್ಕೆ ತಾಗುವಂತಹಾ ಪ್ರಶ್ನೆಯನ್ನೇ ಕೇಳಿದ್ದಾರೆ.
'ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಿದಾಗ ಹಿಂದುಗಳು ಬೆಂಬಲ ನೀಡಿದ್ದರು. ಅದೊಂದು ಕೆಟ್ಟ ಸಂಪ್ರದಾಯ ಎಂದಿದ್ದರು. ಆದರೆ ಈಗ ಅವರೇ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಸಂಪ್ರದಾಯದ ಉಲ್ಲಂಘನೆ ಎನ್ನುತ್ತಿದ್ದಾರೆ' ಎಂದು ಸುಬ್ರಹ್ಮಣಿಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರಿಂಕೋರ್ಟ್‌ನ ಆದೇಶಕ್ಕೆ ವಿರುದ್ಧ ಹೋಗುವುದು ಒಳಿತಲ್ಲ ಎಂದೂ ಸಹ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications