Nostradamus: 2025ರಲ್ಲಿ ಮತ್ತೊಂದು ಸಾಂಕ್ರಾಮಿಕ, ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ; ನಾಸ್ಟ್ರಾಡಾಮಸ್ ಭವಿಷ್ಯ
2024 ಇನ್ನೇನು ಮುಗಿಯುತ್ತಾ ಬಂದಿದೆ 2025 ರ ವರ್ಷವನ್ನು ಸ್ವಾಗತಿಸಲು ಜಗತ್ತು ಸಜ್ಜಾಗಿದ್ದು ಮುಂದಿನ ವರ್ಷವಾದರೂ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ನಿಂತು ಶಾಂತಿ ನೆಲೆಸಲು ಎಂದು ಹಾರೈಸಲಾಗುತ್ತಿದೆ. ವಿಶ್ವ ಪ್ರಸಿದ್ಧ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರು ಜಗತ್ತಿನ ಬಗ್ಗೆ ನುಡಿಯುವ ಭವಿಷ್ಯವನ್ನು ವ್ಯಾಪಕವಾಗಿ ನಂಬಲಾಗುತ್ತದೆ. 15-16ನೇ ಶತಮಾನದವರಾದ ನಾಸ್ಟ್ರಾಡಾಮಸ್ 1555 ರಲ್ಲಿ ಲೆಸ್ ಪ್ರೊಫೆಟಿಸ್ (ದಿ ಪ್ರೊಫೆಸೀಸ್) ಪುಸ್ತಕ ಬರೆದಿದ್ದು ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಬರೆದಿದ್ದಾರೆ.
ಸೆಪ್ಟೆಂಬರ್ 11ರ ದಾಲಿ, ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ನಾಸ್ಟ್ರಾಡಾಮಸ್ ನುಡಿದಿದ್ದ ಭವಿಷ್ಯ ನಿಜವಾಗಿದೆ. 2025ರ ಬಗ್ಗೆ ಕೂಡ ಭವಿಷ್ಯ ನುಡಿದಿದ್ದು ಹಲವು ಕಟ್ಟ ಘಟನೆಗಳು ನಡೆಯಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2025ರಲ್ಲಿ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಸೂಚನೆ ನೀಡಿದ್ದು, ಪ್ಲೇಗ್ ರೀತಿಯ ಸಾಂಕ್ರಾಮಿಕ ಯುಕೆಯಲ್ಲಿ ಕಾಣಸಿಕೊಳ್ಳಲಿದೆ ಎಂದಿದ್ದಾರೆ.

ರಷ್ಯಾ-ಉಕ್ರೇನ್ ಸುದೀರ್ಘ ಯುದ್ಧ ಮುಗಿಯುವ ಸೂಚನೆ
2024ರಲ್ಲಿ ಜಗತ್ತಿನಲ್ಲಿ ಹಲವು ಯುದ್ಧಗಳು ಮುಂದುವರೆಯುತ್ತವೆ ಎಂದು ಭವಿಷ್ಯ ನುಡಿದಿದ್ದ ಅವರು, 2025ರಲ್ಲಿ ದೀರ್ಘಾವಧಿಯ ಯುದ್ಧವೊಂದು ಕೊನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 2022ರಲ್ಲಿ ಆರಂಭವಾಗಿರುವ ರಷ್ಯಾ-ಉಕ್ರೇನ್ ಯುದ್ಧ 2025ರಲ್ಲಿ ಮುಗಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸುದೀರ್ಘ ಯುದ್ಧದಿಂದ ಎರಡೂ ಕಡೆಯ ಸೈನ್ಯಗಳು ಬಳಲಿದ್ದು, ಆರ್ಥಿಕ ಹೊರೆಯಿಂದಾಗಿ ಯುದ್ಧ ನಿಲ್ಲಬಹುದಹು ಎಂದಿದ್ದಾರೆ.
ಪ್ಲೇಗ್ ಮತ್ತು ಯುದ್ಧದ ಭೀತಿ
2025ರ ಹೊಸ ವರ್ಷ ಇಂಗ್ಲೆಂಡ್‌ಗೆ ಹೆಚ್ಚಿನ ಅಪಾಯ ಉಂಟುಮಾಡಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ತಿಳಿಸಿದೆ. ಪ್ಲೇಗ್ ಮಾದರಿಯ ಸಾಂಕ್ರಾಮಿಕ ದೇಶವನ್ನು ಬಾಧಿಸಲಿದೆ ಎಂದು ಹೇಳಲಾಗಿದೆ. ಕೋವಿಡ್ 19 ಸಾಂಕ್ರಾಮಿಕ ಭವಿಷ್ಯ ನಿಜವಾಗಿದ್ದು ಈ ಭವಿಷ್ಯ ಕೂಡ ಆತಂಕ ಮೂಡಿಸಿದೆ.
ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ?
ಸಾಂಕ್ರಾಮಿಕ, ಯುದ್ಧ ಭೀತಿಯ ಜೊತೆಗೆ ಭೂಮಿಗೆ ಕ್ಷುದ್ರಗ್ರಹದಿಂದ ಕೂಡ ಅಪಾಯ ಉಂಟಾಗಬಹುದು ಎಂದು ನಾಸ್ಟ್ರಾಡ್ರಾಮಸ್ ಭವಿಷ್ಯದಲ್ಲಿ ತಿಳಿಸಿದೆ. ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಬಹುದು ಅಥವಾ ಅಪಾಯಕಾರಿ ಮಟ್ಟದಲ್ಲಿ ಭೂಮಿಯ ಸಮೀಪ ಬರಬಹುದು ಎಂದು ಹೇಳಲಾಗಿದೆ. ಕ್ಷುದ್ರಗ್ರಹಗಳು ಭೂಮಿಯ ಸಮೀಪದಲ್ಲಿ ಹಾದುಹೋಗುವುದು ಪ್ರತಿ ವರ್ಷ ನಡೆಯುತ್ತದೆ. ಆದರೆ ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಸಮೀಪ ಬರುವುದು ಅಪಾಯಕಾರಿ.
ಬ್ರಜಿಲ್‌ನಲ್ಲಿ ನೈಸರ್ಗಿಕ ವಿಕೋಪ
ದಕ್ಷಿಣ ಅಮೆರಿಕಾದ ಬ್ರೆಜಿಲ್ ದೇಶದಲ್ಲಿ ಹವಾಮಾನ ಬದಲಾವಣೆ ಸಂಭವಿಸುವ ಸಾಧ್ಯತೆ ಇದ್ದು. ಪ್ರವಾಹ ಮತ್ತು ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.
ನಾಸ್ಟ್ರಾಡಾಮಸ್ ಭವಿಷ್ಯವನ್ನು ನಂಬುವ ಕೋಟ್ಯಂತರ ಮಂದಿ ಜಗತ್ತಿನಲ್ಲಿದ್ದಾರೆ. ಅಚ್ಚರಿ ಎನ್ನುವಂತೆ ಕೆಲವು ಘಟನೆಗಳು ಅವರು ನುಡಿದಂತೆ ನಡೆದಿದ್ದು, ಜನರನ್ನು ನಂಬುವಂತೆ ಮಾಡಿದೆ. 2025ರ ಬಗ್ಗೆ ಅವರು ನುಡಿದಿರುವ ಭವಿಷ್ಯ ಎಷ್ಟು ನಿಜವಾಗುತ್ತೆ ಎನ್ನುವುದನ್ನು ಕಾಲವೇ ತಿಳಿಸಿದೆ.












Click it and Unblock the Notifications