ಈಶಾನ್ಯ ರಾಜ್ಯಗಳ ಗೆಲುವಿಗೆ 'ವಾಸ್ತು' ಟಚ್ ನೀಡಿದ ಪ್ರಧಾನಿ ಮೋದಿ
Recommended Video

ಒಂದು ವಿಚಾರವನ್ನು ಇಟ್ಟುಕೊಂಡು ಅದಕ್ಕೆ ಇನ್ನೊಂದು ವಿಚಾರವನ್ನು ಬೆರೆಸುತ್ತಾ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ ಗೆಲುವಿಗೆ ವಾಸ್ತು ಟಚ್ ನೀಡಿದ್ದಾರೆ.
ಈಶಾನ್ಯ ರಾಜ್ಯಗಳ ಗೆಲುವಿಗೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆ ಹೇಗೆ ಮುಖ್ಯವೋ, ಹಾಗೇ ಭಾರತಕ್ಕೆ ಈಶಾನ್ಯ ರಾಜ್ಯಗಳು ಎಂದಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಾ ಮೋದಿ, ಮನೆ ಅಥವಾ ಕಚೇರಿಯನ್ನು ವಾಸ್ತು ನಿಯಮಗಳನ್ನು ಪಾಲಿಸಿ ವಿನ್ಯಾಸಗೊಳಿಸಬೇಕು. ಇದರಿಂದ ಎಲ್ಲಾ ರೀತಿಯಲ್ಲಿ ಶ್ರೇಯಸ್ಸು ಲಭಿಸುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.

ದೇವರ ಕೋಣೆ ಈಶಾನ್ಯ ಮೂಲೆಯಲ್ಲಿದ್ದರೆ ಅತ್ಯುತ್ತಮ. ಈಶಾನ್ಯ ಮೂಲೆ ಅಂದವಾಗಿದ್ದರೆ, ಹಣದ ವಿಚಾರ ಸೇರಿ ಎಲ್ಲಾ ವಿಚಾರದಲ್ಲೂ ಅಭಿವೃದ್ಧಿಯಾಗುತ್ತದೆ. ಈಗ ದೇಶದ ಈಶಾನ್ಯ ಮೂಲೆಗೆ ನಾವು ಬಂದಿದ್ದೇವೆ, ಇನ್ನು ಈಶಾನ್ಯ ರಾಜ್ಯಗಳು ಅಭಿವೃದ್ದಿ ಕಾಣಲಿದೆ ಎಂದು ಮೋದಿ ಹೇಳಿದ್ದಾರೆ.
ಮನೆ ಕಚೇರಿಯಲ್ಲಿ ಈಶಾನ್ಯ ಮೂಲೆ ಎಷ್ಟು ಮುಖ್ಯನೋ, ಅಷ್ಟೇ ಮುಖ್ಯ ನಮಗೆ ಈಶಾನ್ಯ ರಾಜ್ಯಗಳು. ನಾವು ಚುನಾವಣೆಯ ವೇಳೆ ಕೊಟ್ಟ ಭರವಸೆಯಂತೆ, ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಅಭಿವೃದ್ದಿಗೆ ಬದ್ದರಾಗಿದ್ದೇವೆ ಎಂದು ಪ್ರಧಾನಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.
ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆ ಎಂದರೆ ದೇವರ ಮೂಲೆ ಎಂದೇ ಕರೆಲಾಗುತ್ತದೆ. ಈಶಾನ್ಯ ದಿಕ್ಕನ್ನು ಶಕ್ತಿಯುತ, ಧನಾತ್ಮಕ ಅಂಶಗಳನ್ನು ಹೊಂದಿರುವ ದಿಕ್ಕು ಎಂದು ವಾಸ್ತುಶಾಸ್ತ್ರದಲ್ಲಿ ವ್ಯಾಖ್ಯಾನಿಸಲಾಗಿದೆ.












Click it and Unblock the Notifications