• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

|

ಬೆಂಗಳೂರು, ಮಾರ್ಚ್ 25: ಕಳೆದ ಎರಡು ತಿಂಗಳಿನಿಂದ ಕೊರೊನಾವೈರಸ್ ಸೋಂಕು ತಗುಲಿದವರಿಗೆ ನೋವು ನಿವಾರಕವಾಗಿ ಹಾಗೂ ಕೊವಿಡ್19 ರೋಗಿಗಳಿಗೆ ಪ್ಯಾರಸಿಟಮಾಲ್ ಕೊಟ್ಟರೆ ಸಾಕು ಎಂಬ ಸುದ್ದಿ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಹರದಾಡುತ್ತಿದೆ. ಈ ಬಗ್ಗೆ ಮತ್ತೊಮ್ಮೆ ವೈದ್ಯಾಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿದ್ದು, ಕೋವಿಡ್19 ಕೊಲ್ಲಲು ಪ್ಯಾರಸಿಟಮಾಲ್ ಸಾಲಲ್ಲ. ಅಥವಾ ಕೊರೊನಾಗೆ ಇದು ಮದ್ದಲ್ಲ.

ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ ನ ವೈದ್ಯಾಧಿಕಾರಿ ಡಾ. ಕೆರಿ ಚಾಂಟ್ ಇತ್ತೀಚೆಗೆ ಈ ಬಗ್ಗೆ ಹರಡಿರುವ ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿ, ಪ್ಯಾರಸಿಟಮಾಲ್ ಎಂಬುದು ಅಸಿಟಮಿನೋಫಿನ್ ಯುಳ್ಳ ಮಾತ್ರೆ, ಸಾಮಾನ್ಯವಾಗಿ ನೋವು ನಿವಾರಕವಾಗಿ ಬಳಕೆಯಲ್ಲಿದ್ದು, ಜನಪ್ರಿಯವಾಗಿದೆ. ಇದು ನೋವು ನಿವಾರಕ ಮಾತ್ರ, ಕೊವಿಡ್19ಗೆ ಮದ್ದಲ್ಲ, ಈ ಬಗ್ಗೆ ಬಂದಿರುವ ಫಾರ್ವಡೆಡ್ ಸಂದೇಶಗಳನ್ನು ನಂಬಬೇಡಿ ಎಂದಿದ್ದಾರೆ.

ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?

ಈ ಮಾತ್ರೆಯನ್ನು ತಲೆ ನೋವು, ಬೆನ್ನು ನೋವು ಹಲ್ಲು ನೋವು, ಸಂಧಿವಾತ, ನೆಗಡಿ ಮತ್ತು ಜ್ವರವನ್ನು ವಾಸಿಮಾಡಲು ವೈದ್ಯರು ನೀಡುತ್ತಾರೆ. ಭಾರತದಲ್ಲಿ ಆಸ್ಪರಿನ್ ನಂತರ ಐಬುಪ್ರೊಫೇನ್ ಮತ್ತು ಪ್ಯಾರಸಿಟಮಾಲ್ ತಲೆ ನೋವಿಗೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಹೆಚ್ಚು ಬಳಕೆಯಲ್ಲಿದೆ. ಆದರೆ, ವೈದ್ಯರ ಸಲಹೆ ಇಲ್ಲದೆ ಇದನ್ನು ಸೇವಿಸುವ ಹಾಗಿಲ್ಲ.

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ. ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ. ಸದ್ಯಕ್ಕೆ ಕೋವಿಡ್19ಕ್ಕೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ, ಮಲೇರಿಯಾಕ್ಕೆ ಬಳಸಬಹುದಾದ ಎಚ್ ಸಿ ಕ್ಯೂ ನಿಯಮಿತವಾಗಿ ನೀಡಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ.

English summary
There is a claim being made on the social media that paracetamol can cure coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X