ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೋಡಿಗಳೇ ಹುಷಾರ್: 'OYO Room'ನಲ್ಲಿ ಬೆನ್ನಿಗೆ ಬೀಳುವರು ಕ್ಯಾಮರಾ ಕೀಚಕರು!

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಓಯೋ ರೂಮ್ ಬುಕ್ ಮಾಡುವುದೇ ನವಯುಗದ ಹೊಸ ಟ್ರೆಂಡ್ ರೀತಿ ಆಗಿ ಬಿಟ್ಟಿದೆ. ಏಕಾಂತ ಬಯಸುವ ನವಜೋಡಿಗಳು ಓಯೋ ರೂಮ್ ಕಡೆಗೆ ಮುಖ ಮಾಡುತ್ತಿರುವುದು ಗೊತ್ತಿರುವ ವಿಷಯ. ಆದರೆ ಈ ವಿಷಯದಲ್ಲಿ ಸ್ವಲ್ಪ ಯಾಮಾರಿದರೆ ಎಂಥಾ ಅನಾಹುತವಾಗಿತ್ತೆ ಎಂಬುದಕ್ಕೆ ನೋಯ್ಡಾದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.

ಉತ್ತರ ಪ್ರದೇಶದ ನೋಯ್ಡಾದಲ್ಲಿ ಓಯೋ ಹೋಟೆಲ್‌ಗಳ ರೂಮ್‌ನಲ್ಲಿ ಸೀಕ್ರೆಟ್ ಕ್ಯಾಮೆರಾಗಳನ್ನು ಇರಿಸುವ ಮೂಲಕ ದಂಪತಿಗಳು ಆಪ್ತವಾಗಿರುವ ಕ್ಷಣದ ದೃಶ್ಯಗಳನ್ನು ರೆಕಾರ್ಡ್ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಈ ಘಟನೆ ಕುರಿತು OYO ಇನ್ನೂ ಪ್ರತಿಕ್ರಿಯಿಸಿಲ್ಲ.

Lockdown Love Story: ಇದು ಬಾಲ್ಕನಿಯಲ್ಲಿ ಅರಳಿದ ಪ್ರೀತಿ!Lockdown Love Story: ಇದು ಬಾಲ್ಕನಿಯಲ್ಲಿ ಅರಳಿದ ಪ್ರೀತಿ!

ಓಯೋ ರೂಮ್‌ನಲ್ಲಿ ತಗ್ಗಿದ್ದ ಜೋಡಿಗಳ ದೃಶ್ಯವನ್ನು ಗೌಪ್ಯವಾಗಿ ಆರೋಪಿಗಳು ಸೆರೆ ಹಿಡಿಯುತ್ತಿದ್ದಿದ್ದು ಹೇಗೆ?, ಖಾಕಿ ಬಲೆಗೆ ಬಿದ್ದ ಆರೋಪಿಗಳ ಸೀಕ್ರೆಟ್ ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?, ಮುಗ್ಧ ಜೋಡಿಗಳು ಮುದ್ದಾಡುವ ದೃಶ್ಯಗಳು ಕೀಚಕರಿಗೆ ಹೇಗೆ ಕಾಸು ಕೊಡುತ್ತಿತ್ತು ಎಂಬುದನ್ನು ಪೊಲೀಸರು ತೆರೆದಿಟ್ಟಿದ್ದಾರೆ. ನೋಯ್ಡಾದ ಓಯೋ ರೂಮ್‌ನಲ್ಲಿ ಕ್ಯಾಮರಾ ಕೀಚಕರ ಕಾರ್ಯಾಚರಣೆೆ ಹೇಗಿರುತ್ತೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಓಯೋ ರೂಮ್‌ನಲ್ಲಿ ಕ್ಯಾಮರಾ ಕೀಚಕರ ಕಾರ್ಯಾಚರಣೆ

ಓಯೋ ರೂಮ್‌ನಲ್ಲಿ ಕ್ಯಾಮರಾ ಕೀಚಕರ ಕಾರ್ಯಾಚರಣೆ

ಈ ಕ್ಯಾಮರಾ ಕೀಚಕರು ಮೂಲತಃ ಓಯೋ ಹೋಟೆಲ್‌ಗೆ ಸಂಬಂಧಿಸಿದ ಸಿಬ್ಬಂದಿಯಲ್ಲ. ಓಯೋ ರೂಮ್ ಸಿಬ್ಬಂದಿಗೂ ಈ ದಂಧೆಕೋರರಿಗೂ ಯಾವುದೇ ನಂಟು ಇಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಹಾಗಿದ್ದರೆ ಈ ಕ್ಯಾಮರಾ ಕೀಚಕರ ರಹಸ್ಯ ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು ಎಂಬುದು ಬಲು ರೋಚಕವಾಗಿದೆ.

ಮೊದಲು ಓಯೋ ರೂಮ್ ಬುಕ್ ಮಾಡುವ ಆರೋಪಿಗಳು, ಅಲ್ಲಿ ಉಳಿದುಕೊಳ್ಳುವ ನೆಪದಲ್ಲಿ ರಹಸ್ಯ ಕ್ಯಾಮರಾಗಳನ್ನು ಇರಿಸುತ್ತಾರೆ. ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ಅದೇ ರೂಮ್ ಬುಕ್ ಮಾಡುವ ಆರೋಪಿಗಳನ್ನು ಸೆರೆಯಾಗಿರುವ ದೃಶ್ಯಗಳನ್ನು ಇಟ್ಟುಕೊಂಡು ಆಟ ಶುರುವಿಟ್ಟುಕೊಳ್ಳುತ್ತಾರೆ.

ದಂಪತಿ ಆ ದೃಶ್ಯಗಳೇ ಕ್ಯಾಮರಾ ಕೀಚಕರಿಗೆ ಕಾಸು!

ದಂಪತಿ ಆ ದೃಶ್ಯಗಳೇ ಕ್ಯಾಮರಾ ಕೀಚಕರಿಗೆ ಕಾಸು!

"ಓಯೋ ರೂಮ್‌ನಲ್ಲಿ ತಂಗುತ್ತಿದ್ದ ನವಜೋಡಿಗಳನ್ನೇ ಆರೋಪಿಗಳು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ನವಜೋಡಿ ಜೊತೆಯಾಗಿರುವ ವಿಡಿಯೋಗಳನ್ನು ರಹಸ್ಯ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪಿಗಳು ಅದನ್ನು ಇಟ್ಟುಕೊಂಡು ನವಜೋಡಿಯನ್ನು ಸಂಪರ್ಕಿಸುತ್ತಿದ್ದರು. ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಆರೋಪಿಗಳು, ಹಣ ನೀಡದಿದ್ದರೆ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು," ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ತಿಳಿಸಿದರು.

ಅರೆಸ್ಟ್ ಆಗಿರುವ ನಾಲ್ಕು ಕ್ಯಾಮರಾ ಕೀಚಕರು ಯಾರು?

ಅರೆಸ್ಟ್ ಆಗಿರುವ ನಾಲ್ಕು ಕ್ಯಾಮರಾ ಕೀಚಕರು ಯಾರು?

ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಗ್ಯಾಂಗ್‌ಗಳಲ್ಲಿ ಗುರುತಿಸಿಕೊಂಡಿದ್ದ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ ಮಾರಾಟ ಸೇರಿದಂತೆ ಅನಧಿಕೃತ ಚಟುವಟಿಕೆಳಲ್ಲಿ ಈ ಗುಂಪು ಭಾಗಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಬಂಧಿತರಿಂದ 11 ಲ್ಯಾಪ್‌ಟಾಪ್‌ಗಳು, 21 ಮೊಬೈಲ್‌ಗಳು ಮತ್ತು 22 ಎಟಿಎಂ ಕಾರ್ಡ್‌ಗಳನ್ನು ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆ. ಇದೇ ರೀತಿಯ ಗ್ಯಾಂಗ್ ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

ನಕಲಿ ಸಿಮ್, ನಕಲಿ ಬ್ಯಾಂಕ್ ಖಾತೆ!

ನಕಲಿ ಸಿಮ್, ನಕಲಿ ಬ್ಯಾಂಕ್ ಖಾತೆ!

"ಆರೋಪಿಗಳಾದ ವಿಷ್ಣು ಮತ್ತು ಅಬ್ದುಲ್ ದಂಪತಿಯ ಫೋನ್‌ಗೆ ಆತ್ಮೀಯ ಕ್ಷಣಗಳ ವೀಡಿಯೊಗಳನ್ನು ಕಳುಹಿಸುತ್ತಿದ್ದರು. ನಂತರ ಅವರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಮೂರನೇ ಆರೋಪಿ ಪಂಕಜ್, ನೋಂದಾಯಿಸಿದ ಸಿಮ್ ಮತ್ತು ಸುಲಿಗೆ ಹಣಕ್ಕಾಗಿ ಇತರ ವ್ಯಕ್ತಿಗಳ ಹೆಸರಿನಲ್ಲಿ ಖಾತೆಯನ್ನು ನೋಂದಾಯಿಸುತ್ತಿದ್ದನು, "ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ಗ್ಯಾಂಗ್‌ನ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.

English summary
Noida: 4 people Arrested In Noida for allegedly recording intimate moments of couples in OYO Rooms. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X