ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆಗೆ 167 ವರ್ಷ: ಮೊದಲ ಬಾರಿಗೆ ಪ್ರಯಾಣಿಕರಿಲ್ಲದೆ ಆಚರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಭಾರತೀಯ ರೈಲ್ವೆ 167 ವರ್ಷ ತುಂಬಿದ್ದು, ಮೊದಲ ಬಾರಿಗೆ ಪ್ರಯಾಣಿಕರಿಲ್ಲದೆ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

167 ವರ್ಷಗಳ ಹಿಂದೆ 1853 ರಲ್ಲಿ ಈ ದಿನದಂದು ದೇಶದ ಮೊದಲ ಪ್ಯಾಸೆಂಜರ್ ರೈಲು ಮುಂಬಯಿಯ ಬೋರಿ ಬಂಡರ್‌ನಿಂದ ಥಾಣೆಗೆ ಪ್ರಯಾಣಿಸಿತ್ತು. ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ.

ಮೊದಲ ಭಾರತೀಯ ರೈಲ್ವೆ ಪ್ರಯಾಣಿಕರ ರೈಲನ್ನು ಏಪ್ರಿಲ್ 16, 1853 ರಂದು ಮುಂಬೈನಿಂದ ಹತ್ತಿರದ ಥಾಣೆಗೆ ಸಂಚಾರ ನಡೆಸಲು ಅನುವು ಮಾಡಲಾಗಿತ್ತು.

train

ಭಾರತೀಯರು 1974 ರಲ್ಲಿ ಮೊದಲ ಬಾರಿಗೆ ರೈಲು ಸಂಚಾರ ಸ್ಥಗಿತದ ಸಮಸ್ಯೆ ಅನುಭವಿಸಿದ್ದರು. ಮೇ 1974 ರಲ್ಲಿ, ಸುಮಾರು ಮೂರು ವಾರಗಳ ಕಾಲ ನಡೆದ ರೈಲ್ವೆ ಮುಷ್ಕರದಲ್ಲಿ, ಚಾಲಕರು, ಸ್ಟೇಷನ್ ಮಾಸ್ಟರ್ಸ್, ಗಾರ್ಡ್, ಟ್ರ್ಯಾಕ್ ಸಿಬ್ಬಂದಿ ಮತ್ತು ಇನ್ನೂ ಅನೇಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆ ದಿನಗಳು ಸ್ಪಷ್ಟವಾಗಿ ನೆನಪಿದೆ. ನಮ್ಮ ನಾಯಕ ಜಾರ್ಜ್ ಫರ್ನಾಂಡಿಸ್ ಅಂದಿನ ರೈಲ್ವೆ ಸಚಿವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

ಆದರೆ ಅದನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಬಳಿ ಹೇಳುವಾಗ ಆ ಒಪ್ಪಂದ ಮುರಿದು ಬಿದ್ದಿತ್ತು ಅಖಿಲ ಭಾರತ ರೈಲ್ವೆಮೆನ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ.

ಫರ್ನಾಂಡಿಸ್ ಅವರನ್ನು ಲಕ್ನೋನಲ್ಲಿ ಜೈಲಿಗೆ ಹಾಕಲಾಗಿದ್ದು ಆ ವೇಳೆ ಕಾರ್ಮಿಕರು ಸಾಕಷ್ಟು ಉಗ್ರ ಹೋರಾಟ ನಡೆಸಿದ್ದರು.

ಇಂದಿನಂತೆಯೇ ಅಂದೂ ಸಹ ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಸರಕು ರೈಲುಗಳನ್ನು ಓಡಿಸಲಾಯಿತು ಮತ್ತು ಹೌರಾದಿಂದ ದೆಹಲಿಗೆ ಕಲ್ಕಾ ಮಾರ್ಗಗಳಲ್ಲಿ ಕೆಲವು ಪ್ರಯಾಣಿಕ ರೈಲುಗಳನ್ನು ಓಡಿಸಲು ಒಕ್ಕೂಟಗಳು ಒಪ್ಪಿಗೆ ಕೊಟ್ಟಿದ್ದವು ಎಂದು ಮಾಹಿತಿ ನೀಡಿದರು.

ಕೊರೋನಾವೈರಸ್ ಹಾವಳಿಯ ಕಾರಣ ರೈಲ್ವೆ ಮಾರ್ಚ್ 25 ರಿಂದ ಮೇ 3 ರವರೆಗೆ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕೊರೋನಾವೈರಸ್ ‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 414 ಕ್ಕೆ ಏರಿದೆ ಮತ್ತು ದೇಶದಲ್ಲಿ ಗುರುವಾರ ಪ್ರಕರಣಗಳ ಸಂಖ್ಯೆ 12,380 ಕ್ಕೆ ತಲುಪಿದೆ.

English summary
It was exactly at 3.35pm on April 16, 1853 that the first passenger train of the Great Indian Peninsular Railway chugged out on its journey from Bori Bunder Station to Thana, running into history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X