
ಭಾರತದ ಮೇಲೆ ಕಣ್ಣು ಹಾಕುವ ಧೈರ್ಯ ಯಾರಿಗೂ ಇಲ್ಲ; ಸಚಿವ
ನವದೆಹಲಿ, ನ.02: "ಭಾರತವು ತಕ್ಷಣವೇ ತಿರುಗೇಟು ನೀಡಲು ಸಮರ್ಥವಾಗಿರುವುದರಿಂದ ಭಾರತದ ಮೇಲೆ ದುಷ್ಟ ಕಣ್ಣು ಹಾಕುವ ಧೈರ್ಯ ಯಾರಿಗೂ ಇಲ್ಲ" ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಬುಧವಾರ ಹೇಳಿದರು.
ಲಡಾಖ್‌ನಲ್ಲಿ ಚೀನಾದ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಸಚಿವ ಅಜಯ್ ಭಟ್ ಅವರು ಪ್ರತಿಕ್ರಿಯಿಸಿದ್ದಾರೆ. "ಯಾರಿಗೂ ನಮ್ಮ ಮೇಲೆ ದುಷ್ಟ ಕಣ್ಣು ಹಾಕುವ ಧೈರ್ಯವಿಲ್ಲ. ಏಕೆಂದರೆ ಯಾರಾದರೂ ಅಂತಹ ಧೈರ್ಯ ಮಾಡಿದರೆ, ನಾವು ತಕ್ಷಣದ ಪ್ರತಿಕ್ರಿಯೆಯನ್ನು ನೀಡಲು ಸಮರ್ಥರಾಗಿದ್ದೇವೆ" ಎಂದಿದ್ದಾರೆ.
Breaking: ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ
ಆದರೂ ಕೂಡ ಚೀನಾ ಕುರಿತ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿಲ್ಲ. ಬದಲಿಗೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ತನಗೆ ಅಧಿಕಾರವಿಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ.
ಈ ವೇಳೆ ಪ್ರಧಾನಿ ನರಂದ್ರ ಮೋದಿಯನ್ನು ಶ್ಲಾಘಿಸಿರುವ ಅವರು, "ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಭಾರತವು ಜಲ, ನೆಲ ಮತ್ತು ವಾಯು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕನಾಗಿ ಹೊರಹೊಮ್ಮಿದೆ" ಎಂದು ಹೇಳಿದ್ದಾರೆ.
SIPRI (ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಪ್ರಕಾರ, ಭಾರತವು ಮೊದಲ ಬಾರಿಗೆ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಅಗ್ರ 25 ದೇಶಗಳ ಪಟ್ಟಿಯಲ್ಲಿದೆ.
"ನಾವು ಉಪಕರಣಗಳು, ರಾಕೆಟ್‌ಗಳು, ಕ್ಷಿಪಣಿಗಳು, ಫೈಟರ್ ಜೆಟ್‌ಗಳು, ಟ್ಯಾಂಕ್‌ಗಳು, ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿದ್ದೇವೆ. ನಾವು ಈ ಮೊದಲು ರಕ್ಷಣಾ ಉತ್ಪನ್ನಗಳಿಗಾಗಿ ಇತರ ದೇಶಗಳ ಬಳಿ ಬೇಡಿಕೆಯಿಡುತ್ತಿದ್ದೇವು. ಆದರೆ. ಇಂದು, ನಾವು ಇದನ್ನು ಇತರರಿಗೆ ನೀಡುತ್ತಿರುವುದು ಜಗತ್ತಿಗೆ ಆಶ್ಚರ್ಯವಾಗಿದೆ" ಎಂದಿದ್ದಾರೆ.