ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವಾ; ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಹುಲ್ ಪ್ರಶ್ನೆ

ನವದೆಹಲಿ, ಜುಲೈ 08: ಬುಧವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಂತರ ನೂತನ ಆರೋಗ್ಯ ಸಚಿವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

"ಇನ್ನು ಮುಂದೆ ಕೊರೊನಾ ಲಸಿಕೆ ಕೊರತೆಯಾಗುವುದಿಲ್ಲವೇ?" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಸಂಪುಟ ವಿಸ್ತರಣೆ ನಂತರ ಕೇಂದ್ರ ಆರೋಗ್ಯ ಸಚಿವರಾಗಿ ಡಾ. ಹರ್ಷವರ್ಧನ್ ಅವರ ಸ್ಥಾನಕ್ಕೆ ಇದೀಗ ಮನ್ಸುಖ್ ಮಾಂಡವಿಯಾ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "#change" ಎಂಬ ಹ್ಯಾಶ್ ಟ್ಯಾಗ್ ಬಳಸಿ, "ಇದರ ಅರ್ಥ ಇನ್ನು ಮುಂದೆ ದೇಶದಲ್ಲಿ ಲಸಿಕೆ ಕೊರತೆ ಇರುವುದಿಲ್ಲವೆಂಬುದೇ" ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಈಗಲಾದರೂ ಲಸಿಕೆ ಕೊರತೆಯನ್ನು ನೀಗಿಸಲು ಸಾಧ್ಯವೇ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ.

No More Vaccine Shortage Questions Rahul Gandhi As New Health Minister Took Charge

ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ಕೇಂದ್ರ ಸರ್ಕಾರ ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಿದೆ ಎಂದು ಬುಧವಾರ ಕಾಂಗ್ರೆಸ್ ಟೀಕಿಸಿತ್ತು.

ಈ ಹಿಂದೆಯೂ ಹಲವು ಬಾರಿ ಕೊರೊನಾ ಲಸಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ರಾಹುಲ್ ಗಾಂಧಿ ಟೀಕಿಸಿದ್ದರು. ಕೇಂದ್ರದ ಲಸಿಕಾ ನೀತಿಯನ್ನು ಖಂಡಿಸಿದ್ದರು. ಕಳೆದ ವಾರವಷ್ಟೇ, ಸರ್ಕಾರ ಹಾಕಿಕೊಂಡ ಲಸಿಕಾ ಗುರಿಗಿಂತ 27% ಕಡಿಮೆಯಿದೆ. ಜುಲೈ ಬಂದರೂ ಏಕೆ ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+