ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರೇ ಭಯ ಬಿಡಿ: ನಮ್ಮಲ್ಲಿ ಇಲ್ಲ ಒಂದೇ ಒಂದು ಮಂಕಿಪಾಕ್ಸ್ ಪ್ರಕರಣ

|
Google Oneindia Kannada News

ನವದೆಹಲಿ, ಮೇ 29: ಜಗತ್ತಿನಾದ್ಯಂತ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ಜನರಲ್ಲಿ ಆತಂಕವನ್ನು ಹುಟ್ಟಿಸುತ್ತಿವೆ, ಆದರೆ ಭಾರತದಲ್ಲಿ ಇದುವರೆಗೂ ಯಾವುದೇ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ಕೆಲವು ಪ್ರದೇಶದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಎಚ್ಚರಿಕೆಯ ಬಗ್ಗೆ ದೇಶವು ನಿಗಾ ವಹಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೊನಾ ಹೋಯ್ತು, ಮಂಕಿಫಾಕ್ಸ್ ಬಂತು; ಎರಡು ರೋಗಗಳ ಮಧ್ಯೆ ಏನಿದು ನಂಟು!? ಕೊರೊನಾ ಹೋಯ್ತು, ಮಂಕಿಫಾಕ್ಸ್ ಬಂತು; ಎರಡು ರೋಗಗಳ ಮಧ್ಯೆ ಏನಿದು ನಂಟು!?

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಇಲ್ಲ ಎನ್ನುವುದು ಮುನ್ನಚ್ಚರಿಕೆ ವಹಿಸದಿರಲು ಕಾರಣವಾಗಬಾರದು ಎಂದು ಪುಣೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಪ್ರಜ್ಞಾ ಯಾದವ್ ತಿಳಿಸಿದ್ದಾರೆ.

ಬೇರೆ ಪ್ರದೇಶದಲ್ಲಿನ ಅಪಾಯವನ್ನು ನೋಡಿ ಕಲಿಯಬೇಕಿದೆ

ಬೇರೆ ಪ್ರದೇಶದಲ್ಲಿನ ಅಪಾಯವನ್ನು ನೋಡಿ ಕಲಿಯಬೇಕಿದೆ

ದೇಹದ ಪ್ರತಿಕಾಯ ಶಕ್ತಿಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಈ ರೋಗಕಾರವು ಎಷ್ಟು ಅಪಾಯಕಾರಿಯಾಗಿದೆ ಎನ್ನುವುದನ್ನು ನಾವು ಮೊದಲ ಅರ್ಥ ಮಾಡಿಕೊಳ್ಳಬೇಕಿದೆ. ಬೇರೆ ದೇಶದಲ್ಲಿ ಮಂಕಿಪಾಕ್ಸ್ ಇರುವಿಕೆಯನ್ನು ನಾವು ಅರಿತುಕೊಳ್ಳಬೇಕಾಗಿದೆ. ಕೆಲವು ಪ್ರದೇಶದಲ್ಲಿ ಪ್ರಯಾಣಿಕರ ಮೂಲಕ ಸೋಂಕು ಹರಡಿದರೆ, ಇನ್ನೂ ಕೆಲವು ದೇಶಗಳಲ್ಲಿ ನಿಗದಿತ ಸಮುದಾಯದ ಮಟ್ಟದಲ್ಲಿ ಮಂಕಿಪಾಕ್ಸ್ ಸೋಂಕು ಹರಡುತ್ತಿದೆ ಎಂದು ಪ್ರಜ್ಞಾ ಯಾದವ್ ಹೇಳಿದ್ದಾರೆ.

ಜಗತ್ತಿನಲ್ಲಿ ಒಟ್ಟು 200ಕ್ಕೂ ಹೆಚ್ಚು ಪ್ರಕರಣ ವರದಿ

ಜಗತ್ತಿನಲ್ಲಿ ಒಟ್ಟು 200ಕ್ಕೂ ಹೆಚ್ಚು ಪ್ರಕರಣ ವರದಿ

ವಿಶ್ವದ 20ಕ್ಕೂ ಹೆಚ್ಚು ದೇಶಗಳಲ್ಲಿ 200ಕ್ಕೂ ಹೆಚ್ಚು ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆಫ್ರಿಕಾದ ಹೊರಗೆ ಮಂಕಿಪಾಕ್ಸ್ ಪರಿಸ್ಥಿತಿ ಹೇಗಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಇನ್ನೂ ಸಾಕಷ್ಟು ಉತ್ತರ ಸಿಗದ ಪ್ರಶ್ನೆಗಳಿವೆ.

"ವೈರಸ್‌ನ ಮೊದಲ ಅನುಕ್ರಮವು ಸ್ಥಳೀಯ ದೇಶಗಳಲ್ಲಿ ನಾವು ಕಂಡುಕೊಳ್ಳಬಹುದಾದ ತಳಿಗಳಿಗಿಂತ ಭಿನ್ನವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಬಹುಶಃ ಸೋಂಕಿತ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆ ಆಗಿರಬಹುದು," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ನಿರ್ದೇಶಕ ಸಿಲ್ವಿ ಬ್ರಿಯಾಂಡ್ ಹೇಳಿದ್ದಾರೆ.

"ಭಾರತದ ಮನುಷ್ಯರಲ್ಲಿ ಹಸು ಮತ್ತು ಎಮ್ಮೆ ಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದೆ, ಇದು ಪ್ರಾಣಿಯಿಂದ ಮನುಷ್ಯನಿಗೆ ಹರಡುತ್ತದೆ ಎಂದು ಸೂಚಿಸುತ್ತದೆ. ಮಂಕಿಪಾಕ್ಸ್ ನಮಗೆ ವಿಲಕ್ಷಣ ರೋಗಕಾರಕವಾಗಿದೆ, ಏಕೆಂದರೆ ನಾವು ಅದಕ್ಕೆ ಒಡ್ಡಿಕೊಳ್ಳಲಿಲ್ಲ,'' ಎಂದು ಡಾ.ಯಾದವ್ ಎಚ್ಚರಿಸಿದ್ದಾರೆ.

ವಿಶ್ವದ 650 ಮಕ್ಕಳಲ್ಲಿ ಸೋಂಕು ಪತ್ತೆ ಬಗ್ಗೆ WHO ಮಾಹಿತಿ

ವಿಶ್ವದ 650 ಮಕ್ಕಳಲ್ಲಿ ಸೋಂಕು ಪತ್ತೆ ಬಗ್ಗೆ WHO ಮಾಹಿತಿ

ಕಳೆದ ಏಪ್ರಿಲ್ 5ರಿಂದ ಮೇ 26ರ ನಡುವೆ ಜಗತ್ತಿನ 33 ದೇಶಗಳಲ್ಲಿ ಒಟ್ಟು 650 ಮಕ್ಕಳಲ್ಲಿ ಎಟಿಯಾಲಜಿಯ ತೀವ್ರವಾದ ಹೆಪಟೈಟಿಸ್‌ನ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಯುರೋಪ್ ಖಂಡದ ಆರೋಗ್ಯ ಸಂಸ್ಥೆಗಳು ಯಾವ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ತಿಳಿಸಿವೆ. ಯುಕೆ, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲೆಂಡ್, ಇಟಲಿ ಮತ್ತು ಸ್ವೀಡನ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬಗ್ಗೆ ದೃಢಪಡಿಸಲಾಗಿದೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸೋಂಕು ಪಕ್ಕಾ ಆಗಿದೆ.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು, ಇಲಿಗಳು ಮತ್ತು ಅಳಿಲುಗಳಂತಹ ದಂಶಕಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.

ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.

English summary
No monkeypox cases reported in India say officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X