ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಸ್ ಸಿಒ ಸಮಾವೇಶದಲ್ಲೂ ಇಮ್ರಾನ್ ಖಾನ್ ಜತೆ ಮೋದಿ ಭೇಟಿ ಇಲ್ಲ'

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಜೂನ್ 6: ಕಿರ್ಗಿಸ್ತಾನದ ರಾಜಧಾನಿಯಾದ ಬಿಶ್ ಕೆಕ್ ನಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಕೋ ಆಪರೇಷನ್ ಅರ್ಗನೈಸೇಷನ್ (ಎಸ್ ಸಿಒ) ಸಮಾವೇಶದ ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಆಗುವ ಸಾಧ್ಯತೆ ಇಲ್ಲ.

"ನನಗೆ ಇರುವ ಮಾಹಿತಿ ಪ್ರಕಾರ ಮೋದಿ ಹಾಗೂ ಇಮ್ರಾನ್ ಖಾನ್ ಮಧ್ಯೆ ಎಸ್ ಸಿಒ ಸಮಾವೇಶದಲ್ಲಿ ಯಾವುದೇ ಭೇಟಿ ನಿಗದಿ ಆಗಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರಗಾಮಿ ಆತ್ಮಾಹುತಿ ದಾಳಿ ನಡೆದ ನಂತರ ಎರಡೂ ದೇಶಗಳ ಮಧ್ಯೆ ಸಂಧ ಹದಗೆಟ್ಟಿದೆ.

ಇಂಥ ಸನ್ನಿವೇಶವನ್ನು ತಿಳಿಗೊಳಿಸುವ ಸಲುವಾಗಿ ಮೇ ಇಪ್ಪತ್ತಾರನೇ ತಾರೀಕಿನಂದು ಇಮ್ರಾನ್ ಖಾನ್ ದೂರವಾಣಿ ಕರೆ ಮಾಡಿ, ದಕ್ಷಿಣ ಏಷ್ಯಾದಲ್ಲಿನ ಶಾಂತಿ ಸ್ಥಾಪನೆ ಹಾಗೂ ಶ್ರೀಮಂತಿಕೆಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಮೋದಿ ಅವರ ಜತೆ ಮಾತನಾಡಿದ್ದರು.

No meeting between PM Modi and Imran Khan in SCO at Kyrgistan next week

ಆ ವೇಳೆ ಮೋದಿ, ನಂಬಿಕೆ ಮೂಡಿಸುವಂಥ ಹಾಗೂ ಹಿಂಸೆ ಮತ್ತು ಭಯೋತ್ಪಾದನೆಮುಕ್ತ ವಾತಾವರಣವನ್ನು ನಿಮ್ಮ ಕಡೆಯಿಂದ ನಿರ್ಮಿಸಿದರೆ, ಶಾಂತಿ ಹಾಗೂ ಶ್ರೀಮಂತಿಕೆ ಕಾಣಲು ಸಾಧ್ಯ ಎಂದು ಹೇಳಿದ್ದರು. ಇನ್ನು ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿರಲಿಲ್ಲ.

English summary
No meeting between PM Modi and Imran Khan in Shanghai Co operation Oraganisation at Kyrgistan next week, said spokes person of foreign external ministry Raveesh Kumar on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X