ಜೀನ್ಸ್, ಲೆಗ್ಗಿಂಗ್, ಟಿ ಶರ್ಟ್ ಬೇಡ: ಅಸ್ಸಾಂ ಶಾಲಾ ಶಿಕ್ಷಕರಿಗೆ ಹೊಸ ಡ್ರೆಸ್ ಕೋಡ್

ಗುವಾಹಟಿ, ಮೇ. 21: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿಗಳನ್ನು ಜಾರಿಗೊಳಿಸುವ ಶಾಲಾ ಕಾಲೇಜುಗಳಿವೆ. ಆದರೆ, ಅಸ್ಸಾಂ ಸರ್ಕಾರವು ಶನಿವಾರ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ನೀಡಿರುವ ಕಾರಣ ಕೂಡ 'ಅಸಾಧಾರಣ'ವಾಗಿದೆ.

ಡ್ರೆಸ್ ಕೋಡ್ ಬಿಡುಗಡೆ ಮಾಡಿ ಮಾಹಿತಿ ನೀಡಿರುವ ಶಿಕ್ಷಣ ಇಲಾಖೆ, ಕೆಲವು ಶಿಕ್ಷಕರು "ಕೆಲವು ಶಿಕ್ಷಕರು ಧರಿಸುವ ಬಟ್ಟೆಯು ಸಾರ್ವಜನಿಕ ವಲಯ ಒಪ್ಪಿಕೊಳ್ಳುವಂತಿಲ್ಲ. ಹೀಗಾಗಿ ಅವರ ಡ್ರೆಸ್ಸಿಂಗ್ ಮಾಡುವ ಅಭ್ಯಾಸವನದನು ಬದಲಿಸಬೇಕಾಗಿದೆ. ಈ ಡ್ರೆಸ್ ಕೋಡ್ "ಅಗತ್ಯವಾಗಿದೆ" ಎಂದು ಹೇಳಿದೆ.

No jeans, no leggings, no t-shirts: Assam govt issued a dress code for school teachers

ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ನಿಷೇಧಿತ ಬಟ್ಟೆಗಳಲ್ಲಿ ಪುರುಷ ಮತ್ತು ಮಹಿಳಾ ಶಿಕ್ಷಕರಿಗೆ ಟೀ ಶರ್ಟ್ ಮತ್ತು ಜೀನ್ಸ್ ಮತ್ತು ಮಹಿಳಾ ಶಿಕ್ಷಕರಿಗೆ ಲೆಗ್ಗಿಂಗ್ಸ್ ಸೇರಿವೆ.

ಈ ಮಾಹಿತಿಯನ್ನು ಶಿಕ್ಷಣ ಮತ್ತು ಬಯಲು ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ರನೋಜ್ ಪೆಗು ಹಂಚಿಕೊಂಡಿದ್ದು, "ಶಾಲಾ ಶಿಕ್ಷಕರಿಗೆ ಸೂಚಿಸಲಾದ ಡ್ರೆಸ್ ಕೋಡ್ ಬಗ್ಗೆ ಕೆಲವು ಅನುಮಾನಗಳಿವೆ. ಸ್ಪಷ್ಟತೆಗಾಗಿ ನಾನು ಅಧಿಸೂಚನೆಯನ್ನು ಹಂಚಿಕೊಳ್ಳುತ್ತಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.

ಎಲ್ಲಾ ಶಾಲಾ ಶಿಕ್ಷಕರು "ಶುದ್ಧ, ಸಾಧಾರಣ ಮತ್ತು ಸಭ್ಯವಾದ ಬಟ್ಟೆಗಳನ್ನು ಸಮಚಿತ್ತದ ಬಣ್ಣಗಳಲ್ಲಿ ಧರಿಸಬೇಕು. ತಾವು ಧರಿಸುವ ಬಟ್ಟೆಗಳ ಬಣ್ಣ ಆಕರ್ಷಕವಾಗಿ ಕಾಣಬಾರದು" ಎಂದು ಅಧಿಸೂಚನೆಯು ಹೇಳುತ್ತದೆ. "ಸಾಂದರ್ಭಿಕ ಮತ್ತು ಪಾರ್ಟಿ ಉಡುಪುಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

No jeans, no leggings, no t-shirts: Assam govt issued a dress code for school teachers

ಪುರುಷ ಶಿಕ್ಷಕರಿಗೆ ಸರ್ಕಾರವು ಸೂಚಿಸಿದ ಬಟ್ಟೆಗಳು ಔಪಚಾರಿಕ (ಕ್ಯಾಷುವಲ್) ಶರ್ಟ್ ಮತ್ತು ಪ್ಯಾಂಟ್‌ಗಳು ಮಾತ್ರ. ಆದರೆ ಮಹಿಳಾ ಶಿಕ್ಷಕರಿಗೆ "ಯೋಗ್ಯ" ಸಲ್ವಾರ್ ಸೂಟ್‌ಗಳು, ಸೀರೆಗಳು ಮತ್ತು ಮೇಖೇಲಾ ಚಾದರ್‌ಗಳನ್ನು (ಅಸ್ಸಾಂನ ಸ್ಥಳೀಯ ಬಟ್ಟೆ) ಧರಿಸಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

"ಶಿಕ್ಷಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ವಿಶೇಷವಾಗಿ ಎಲ್ಲಾ ರೀತಿಯ ಸಭ್ಯತೆಗೆ ಉದಾಹರಣೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೆಲಸದ ಸ್ಥಳದಲ್ಲಿ ಸಭ್ಯತೆ, ಶಿಸ್ತು, ವೃತ್ತಿಪರತೆ ಮತ್ತು ಉದ್ದೇಶದ ಗಂಭೀರತೆಯನ್ನು ಪ್ರತಿಬಿಂಬಿಸುವ ಡ್ರೆಸ್ ಕೋಡ್ ಅನ್ನು ಅನುಸರಿಸುವುದು ಅವಶ್ಯಕವಾಗಿದೆ" ಎಂದು ಸರ್ಕಾರದ ಅಧಿಸೂಚನೆಯನ್ನು ತಿಳಿಸುತ್ತದೆ.

ಇನ್ನು, ಅಸ್ಸಾಂ ಸರ್ಕಾರ ಚಹಾ ತೋಟಗಳಲ್ಲಿ ಶಾಲಾ ಶಿಕ್ಷಣವನ್ನು ಸುಧಾರಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ತೋಟಗಳಲ್ಲಿ ವಿಭಿನ್ನ ಕೆಲಸದ ವೇಳಾಪಟ್ಟಿಯನ್ನು ಪರಿಗಣಿಸಿ 2016 ರಲ್ಲಿ ಟಿಜಿ ಶಾಲೆಗಳಿಗೆ ವಿಭಿನ್ನ ಸಮಯದ ವೇಳಾಪಟ್ಟಿಯನ್ನು ಸೂಚಿಸಲಾಗಿತ್ತು. ಆದರೆ ಅದಿ ಸರಿಯಾಗಿಲ್ಲ ಎಂದು, ಮತ್ತೊಂದು ಅಧಿಸೂಚನೆಯ ಮೂಲಕ ಸಮಯದ ವೇಳಾಪಟ್ಟಿಯನ್ನು ಬದಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+