ಡೆಲ್ಟಾ ಪ್ಲಸ್ ಬಗ್ಗೆ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದ ವೈದ್ಯರು

ನವದೆಹಲಿ, ಜೂನ್ 23: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ಪ್ರಕರಣಗಳು ಏಕಾಏಕಿ ಏರಿಕೆಯಾಗಿರುವುದು ಹೊಸ ಆತಂಕ ಸೃಷ್ಟಿಸಿದೆ.

ಇದುವರೆಗೂ 42 ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿದ್ದು, ಈ ರೂಪಾಂತರದಿಂದ ಕೊರೊನಾ ಮೂರನೇ ಅಲೆ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಆದರೆ ಡೆಲ್ಟಾ ಪ್ಲಸ್ ಕುರಿತು ಕಳವಳ ಪಡುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಭಾರತದ ಉನ್ನತ ವೈದ್ಯರು ಹಾಗೂ ಜಿನೋಮ್ ಸೀಕ್ವೆನ್ಸರ್ ಡಾ. ಅನುರಾಗ್ ಅಗರ್‌ವಾಲ್.

ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟೆಗ್ರೇಟಿವ್ ಬಯೋಲಜಿ ನಿರ್ದೇಶಕರಾದ ಅನುರಾಗ್ ಅಗರ್‌ವಾಲ್‌ ಡೆಲ್ಟಾ ಪ್ಲಸ್ ರೂಪಾಂತರದ ಕುರಿತು ಹೇಳಿಕೆ ನೀಡಿದ್ದು, "ಡೆಲ್ಟಾ ಪ್ಲಸ್ ಮೂರನೇ ಅಲೆಗೆ ಕಾರಣವಾಗುತ್ತದೆ ಎನ್ನಲು ಯಾವುದೇ ಸಾಕ್ಷ್ಯಗಳು ಇಲ್ಲ" ಎಂದಿದ್ದಾರೆ.

 No Evidence Delta Plus Will Cause 3rd Wave In India Says Genome Sequencer

"ಮಹಾರಾಷ್ಟ್ರದಿಂದ ಸುಮಾರು 3500 ಮಾದರಿಗಳ ಪರೀಕ್ಷೆಯನ್ನು ನಮ್ಮ ಸಂಸ್ಥೆಯಲ್ಲಿ ಜೂನ್ ತಿಂಗಳಿನಲ್ಲಿ ಮಾಡಲಾಗಿದೆ. ಅವುಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಕಂಡುಬಂದಿದೆ. ಆದರೆ ಅದರ ಪ್ರಮಾಣ ಸದ್ಯಕ್ಕೆ ಶೇಕಡಾ ಒಂದರಷ್ಟಿದೆ. ಇದರಿಂದ ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ದೇಶದಲ್ಲಿ ಈ ರೂಪಾಂತರ ಪ್ರಕರಣಗಳ ಏರಿಕೆಯಾಗಿದೆ ಎಂದು ಕೊರೊನಾ ಮೂರನೇ ಅಲೆ ಬಗ್ಗೆ ಆತಂಕಪಡುವ ಅವಶ್ಯಕತೆಯಲ್ಲ. ಪ್ರಕರಣಗಳು ಸ್ಥಿರವಾಗಿವೆ ಎಂದಿದ್ದಾರೆ.

"ಎರಡನೇ ಅಲೆಯೇ ಅಂತ್ಯವಾಗದಿರುವಾಗ ಮೂರನೇ ಅಲೆ ಕುರಿತು ಏಕೆ ಮಾತನಾಡುತ್ತೀರಿ ಎಂಬುದು ನನ್ನ ಪ್ರಶ್ನೆಯಾಗಿದೆ. ಎರಡನೇ ಅಲೆ ಅಂತ್ಯ ಮಾಡುವುದನ್ನು ಮೊದಲು ಯೋಚಿಸಬೇಕಿದೆ. ಡೆಲ್ಟಾ ಪ್ಲಸ್ ಬಗ್ಗೆ ಜನರು ಆತಂಕಗೊಳ್ಳಲು ಯಾವುದೇ ಕಾರಣಗಳು ಇಲ್ಲ. ಇದಕ್ಕೆ ಯಾವುದೇ ಪುರಾವೆಗಳು ಇಲ್ಲ" ಎಂದು ಹೇಳಿದ್ದಾರೆ.

ಭಾರತದಲ್ಲಿ ಮೊದಲು ಡೆಲ್ಟಾ (B.1.617.2) ರೂಪಾಂತರ ಪತ್ತೆಯಾಗಿ, ದೇಶದಲ್ಲಿ ಕಳವಳಕಾರಿ ಪರಿಸ್ಥಿತಿಗೆ ಕಾರಣವಾಯಿತು. ಕೊರೊನಾ ಎರಡನೇ ಅಲೆಯಲ್ಲಿ ಏರಿದ ಸಾವು ನೋವಿಗೂ ಈ ರೂಪಾಂತರವೇ ಕಾರಣವಾಗಿತ್ತು. ಇದೀಗ ಇದೇ ರೂಪಾಂತರದಿಂದ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ. ಅದೇ ಡೆಲ್ಟಾ ಪ್ಲಸ್ (B.1.617.2.1/(AY.1). ಈ ಸೋಂಕು ಪತ್ತೆಯಾದ ಆರಂಭಿಕ ದಿನಗಳಲ್ಲಿ ಇದು ಕಳವಳಕಾರಿ ಸೋಂಕು ಎಂದು ಪರಿಗಣಿಸಿರಲಿಲ್ಲ. ಆದರೆ ಕೆಲವೇ ದಿನಗಳ ಅಂತರದಲ್ಲಿ ದೇಶದಲ್ಲಿ 42 ಪ್ರಕರಣಗಳು ಪತ್ತೆಯಾಗಿದ್ದು, ಇದು ಮುಂದೆ ಅಪಾಯಕಾರಿ ರೂಪ ಪಡೆಯಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಜಮ್ಮು, ಪಂಜಾಬ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+