ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ಮುಂದುವರಿದ ಸೇನಾ ಬಿಕ್ಕಟ್ಟು: ಸೇನೆ ಹಿಂತೆಗೆತ ಇಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಪೂರ್ವ ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತೀಯ ಮತ್ತು ಚೀನೀ ಪಡೆಗಳು ನಿಯೋಜನೆಯನ್ನು ಸದ್ಯದಲ್ಲಿ ಹಿಂದಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದಿಂದ ಯಾವುದೇ ಒತ್ತಡವಿಲ್ಲದ ಕಾರಣ ಎರಡೂ ಸೇನೆಗಳು ಆ ಜಾಗದಲ್ಲಿಯೇ ಬೀಡುಬಿಟ್ಟಿರಲಿವೆ ಎಂದು ರಕ್ಷಣಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಎಲ್‌ಎಸಿಯುದ್ದಕ್ಕೂ ಸುಮಾರು 50 ಸಾವಿರ ಪಡೆಗಳು ಶಸ್ತ್ರಾಸ್ತ್ರಗಳು ಮತ್ತು ಸಾಧನಗಳು, ಶಸ್ತ್ರಸಜ್ಜಿತ ವಾಹನಗಳು, ಬಂದೂಕು ಮತ್ತು ಕ್ಷಿಪಣಿಗಳೊಂದಿಗೆ ಸಿದ್ಧವಾಗಿ ನಿಂತಿವೆ. 'ತಾವು ಆತುರದಲ್ಲಿ ಇಲ್ಲ ಎಂದು ತೋರಿಸಲು ಚೀನಾ ಕಡೆಯಿಂದ ಯಾವುದೇ ಸಂದೇಶ ಬಂದಿಲ್ಲ ಎನಿಸುತ್ತದೆ' ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಹೇಳಿದ್ದಾರೆ.

ಚೀನಾದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ: ರಾಹುಲ್ ಗಾಂಧಿಚೀನಾದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ: ರಾಹುಲ್ ಗಾಂಧಿ

ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಎರಡೂ ಪಡೆಗಳು ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಉಭಯ ದೇಶಗಳು ಬೇರೆ ಚಟುವಟಿಕೆಗಳಿಗೆ ಮುಂದಾಗಿಲ್ಲ. 2020ರ ಜೂನ್ 27ರಂದು ಭಾರತೀಯ ಪಡೆಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಕೈಲಾಶ್ ರೇಂಜ್ ಪರ್ವತ ಪ್ರದೇಶಗಳಿಂದ ಕೂಡ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.

No Disengagement At LAC In Eastern Ladakh As India And China Deploys Huge Troops

ಇಲ್ಲಿಯವರೆಗೂ ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆ. ವರ್ಷದ ಈ ತಿಂಗಳಿನಲ್ಲಿ ಸೇನಾಪಡೆಗಳು ಬೀಡು ಬಿಡುವುದು ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಎರಡೂ ಪಡೆಗಳು ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತವೆ. ಯಾವ ಭಾಗವೂ ತೊಂದರೆಗೆ ಒಳಗಾಗಲು ಬಯಸುವುದಿಲ್ಲ ಎಂದು ನಿವೃತ್ತ ಮೇಜರ್ ಜನರಲ್ ಎಸ್‌ಬಿ ಆಸ್ಥಾನಾ ಹೇಳಿದ್ದಾರೆ.

English summary
No disengagement likely to ease standoff at LAC in Eastern Ladakh as India and China deployed huge troops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X