• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಿರುದ್ಧದ ಹೋರಾಟ; ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನ

|

ನವದೆಹಲಿ, ಏಪ್ರಿಲ್ 10 : ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ವೆಂಟಿಲೇಟರ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಸೆಪ್ಟೆಂಬರ್ 30ರ ತನಕ ರದ್ದುಗೊಳಿಸಿದೆ.

ವೆಂಟಿಲೇಟರ್, ಕೊರೊನಾ ಸೋಂಕು ಪತ್ತೆ ಕಿಟ್ ಮತ್ತು ಇತರ ವೈದ್ಯಕೀಯ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರ ಆರೋಗ್ಯ ಸೆಸ್ ಮತ್ತು ಕಸ್ಟಮ್ ಡ್ಯೂಟಿಯನ್ನು ರದ್ದುಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.

ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?

ಕೇಂದ್ರ ಸರ್ಕಾರದ ಈ ತೀರ್ಮಾನದಿಂದಾಗಿ ವೈದ್ಯಕೀಯ ಉಪಕರಣಗಳಾದ ಪಿಪಿಇ ಕಿಟ್, ಫೇಸ್ ಮಾಸ್ಕ್, ಸರ್ಜಿಕಲ್ ಮಾಸ್ಕ್ ಮುಂತಾದವುಗಳ ಬೆಲೆಗಳು ಇಳಿಕೆಯಾಗಲಿದೆ. ಇದರಿಂದಾಗಿ ಕೊರೊನಾ ವಿರುದ್ಧದ ಹೋರಾಟಕ್ಕೂ ಸಹಾಯಕವಾಗಲಿದೆ.

ಬಡವರ ಜೀವ ಉಳಿಸಲು ಬರಲಿದೆ ಕಡಿಮೆ ವೆಚ್ಚದ ವೆಂಟಿಲೇಟರ್

ಕಂದಾಯ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. "ದೇಶದಲ್ಲಿನ ಕೊರೊನಾ ವಿರುದ್ಧದ ಹೋರಾಟ. ವೆಂಟಿಲೇಟರ್ ಸೇರಿದಂತೆ ಇತರ ಉಪಕರಣಗಳಿಗೆ ಇರುವ ಬೇಡಿಕೆಯನ್ನು ಪರಿಗಣಿಸಿ ವಿನಾಯಿತಿ ನೀಡಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ" ಎಂದು ಪ್ರಕಟಣೆಯಲ್ಲಿ ಹೇಳಿದೆ.

ಪ್ರತಿನಿತ್ಯ 20,000 ಮಾಸ್ಕ್ ಉತ್ಪಾದಿಸಿದರೆ ಕೊರೊನಾದಿಂದ ಬಚಾವ್ ಆಗುತ್ತಾ ಭಾರತ?

ವೆಂಟಿಲೇಟರ್ ಮತ್ತು ಪರೀಕ್ಷೆ ಕಿಟ್‌ಗಳ ಮೇಲೆ ಶೇ 10, ಫೇಸ್ ಮತ್ತು ಸರ್ಜಿಕಲ್ ಮಾಸ್ಕ್ ಮೇಲೆ ಶೇ 7.5, ಪಿಪಿಇ ಕಿಟ್‌ಗಳ ಮೇಲೆ 7.5 ರಿಂದ ಶೇ 10 ಕಸ್ಟಮ್ ಡ್ಯೂಟಿ ವಿಧಿಸಲಾಗುತ್ತಿತ್ತು. ಆರೋಗ್ಯ ಸೆಸ್ ಶೇ 5ರಷ್ಟು ಪಾವತಿ ಮಾಡಬೇಕಿತ್ತು.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರ ಮುಟ್ಟಿದ್ದು ಈ ವೈದ್ಯಕೀಯ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಲವು ದಿನಗಳ ಹಿಂದೆ ಸರ್ಕಾರ ಎಲ್ಲಾ ಮಾದರಿ ವೆಂಟಿಲೇಟರ್, ಸ್ಯಾನಿಟೈಸರ್‌ಗಳ ರಫ್ತನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

English summary
Union government removed customs duty and health cess till September 30 on ventilators, coronavirus testing kits and other medical supplies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X