ನಿವೃತ್ತ ನೌಕರರ ಜೀವನ ಮಟ್ಟ: ಭಾರತಕ್ಕೆ ಕಡೇ ಸ್ಥಾನ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 9: ಸೇವೆಯಿಂದ ನಿವೃತ್ತಿಗೊಳ್ಳುವ ನೌಕರರಿಗೆ (ಖಾಸಗಿ ಅಥವಾ ಸರ್ಕಾರಿ) ನಾನಾ ದೇಶಗಳಲ್ಲಿ ಸಿಗುವ ಸೌಲಭ್ಯಗಳು ಹಾಗೂ ಜೀವನ ಮಟ್ಟದ ಆಧಾರದಲ್ಲಿ ಅಧ್ಯಯನವೊಂದನ್ನು ನಡೆಸಲಾಗಿದ್ದು, ಇದರಲ್ಲಿ ಭಾರತ ಕಡೆಯ ಸ್ಥಾನ ಪಡೆದುಕೊಂಡಿದೆ.

ಫ್ರಾನ್ಸ್ ನ ಆರ್ಥಿಕ ನಿರ್ವಹಣಾ ಸಂಸ್ಥೆಯಾದ ನ್ಯಾಟಿಕ್ಸಿಸ್ ಗ್ಲೋಬಲ್ ಎಂಬ ಸಂಸ್ಥೆಯು ಸುಮಾರು 43 ರಾಷ್ಟ್ರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿ, ಅದರ ಫಲಿತಾಂಶದ ಆಧಾರದ ಮೇಲೆ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

No country for old men: French index says India worst for retirement now

ನಿವೃತ್ತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು, ಅವರ ಉಳಿತಾಯದ ಹಣವನ್ನು ಕಾಪಾಡುವಂಥ ಗುಣಮಟ್ಟದ ಆರ್ಥಿಕ ಸೇವೆಗಳು, ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಸ್ವಚ್ಛ, ಸುರಕ್ಷಿತವಾದ ಪರಿಸರ - ಈ ನಾಲ್ಕು ಮಾನದಂಡಗಳನ್ನು ಇಟ್ಟುಕೊಂಡು ಸಂಸ್ಥೆಯು ಸಮೀಕ್ಷೆ ನಡೆಸಿದೆ. ಬೇಸರದ ವಿಚಾರವೆಂದರೆ, ಈ ನಾಲ್ಕೂ ಮಾನದಂಡಗಳಲ್ಲಿ ಭಾರತ ಕಡೆಯ ಸ್ಥಾನ ಗಳಿಸಿದೆ.

ಅಂದಹಾಗೆ, ಈ ಪಟ್ಟಿಯಲ್ಲಿ ಸ್ವಿಜರ್ಲೆಂಡ್, ನಾರ್ವೆ ಹಾಗೂ ಐಸ್ ಲ್ಯಾಂಡ್ ದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಈ ಪಟ್ಟಿಯ ಟಾಪ್ 10 ರಾಷ್ಟ್ರಗಳು ಹೀಗಿವೆ:

1. ನಾರ್ವೆ

2. ಸ್ವಿಜರ್ಲೆಂಡ್

3. ಐಸ್ ಲ್ಯಾಂಡ್

4. ಸ್ವೀಡನ್

5. ನ್ಯೂಜಿಲೆಂಡ್

6. ಆಸ್ಟ್ರೇಲಿಯಾ

7. ಜರ್ಮನಿ

8. ಡೆನ್ಮಾರ್ಕ್

9. ಹಾಲೆಂಡ್

IBM India says "No Job Cuts"

10. ಲಕ್ಸೆಂಬರ್ಗ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India is not the best place to retire. In a global retirement index of 43 countries, India has ranked the lowest. This index prepared by French asset management company Natixis Global.
Please Wait while comments are loading...