ಅವಿಶ್ವಾಸ ಮಂಡನೆ: ಕಾಂಗ್ರೆಸ್ ನಿಂದ ಸಂಸದರಿಗೆ ವಿಪ್ ಜಾರಿ
ನವದೆಹಲಿ, ಮಾರ್ಚ್ 27: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಿರುವ ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿಮಾಡಿದೆ.
ಟಿಡಿಪಿ ಮತ್ತು ವೈ ಎಸ್ ಆರ್ ಕಾಂಗ್ರೆಸ್ ಕಳೆದ ವಾರವಷ್ಟೇ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿತ್ತು. ಕಾಂಗ್ರೆಸ್ ನಂತರ ತಾನೂ ಕೇಮದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡುವುದಾಗಿ ಸಿಪಿಐ(ಎಂ) ಸಹ ನೋಟೀಸ್ ನೀಡಿದೆ.
ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್)ಯೂ ತಾನು ಅವಿಶ್ವಾಸ ಮಂಡನೆಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ.

ಇದೇ ಶುಕ್ರವಾರ(ಮಾ.30) ಕಾಂಗ್ರೆಸ್ ಅವಿಶ್ವಾಸ ಮಂಡನೆ ಮಾಡಲಿದ್ದು, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಿರುವ ಮೂರನೇ ಪಕ್ಷವಾಗಲಿದೆ.











Click it and Unblock the Notifications