ನಿಮಗೊಂದೇ ಮಗುವಿದ್ದರೆ ಮಾತ್ರ ಆ ಮಗುವಿಗೆ ಶಾಲೆಗೆ ದಾಖಲಾತಿ!

Posted By:
Subscribe to Oneindia Kannada

ನವದೆಹಲಿ, ಜನವರಿ 15: ನಿಮಗೊಂದೇ ಮಗುವಿದ್ದರೆ ಮಾತ್ರ ಆ ಮಗುವಿಗೆ ಶಾಲೆಗೆ ದಾಖಲಾತಿ. ಎರಡು ಅಥವಾ ಅದಕ್ಕಿಂತ ಹೆಚ್ಚು ಸಹೋದರ, ಸಹೋದರಿ ಇರುವ ಮಗುವಿಗೆ ಶಾಲೆಗೆ ದಾಖಲಾತಿ ಇಲ್ಲ!

..... ಗಾಬರಿ ಪಡಬೇಡಿ. ಇದು ಸರ್ಕಾರದ ಆದೇಶವಲ್ಲ. ದೆಹಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಸಾಲ್ವಾನ್, ತನ್ನಲ್ಲಿಅಳವಡಿಸಿಕೊಂಡಿರುವ ಹೊಸ ನಿಯಮ.

ಸಾಲ್ವಾನ್ ಮಾಂಟೆಸ್ಸರಿ ಹಾಗೂ ಜೆಡಿ ಸಾಲ್ವಾನ್ ಶಾಲೆಗಳಲ್ಲಿ ಈ ನಿಯಮ ಜಾರಿಗೆ ಬಂದಿದ್ದು, ಈ ಶಾಲೆಗಳಲ್ಲಿ ದಾಖಲಾತಿಗೆ ಬರುವ ಪೋಷಕರು, ತಮ್ಮ ಒಟ್ಟು ಮಕ್ಕಳ ಬಗ್ಗೆ ಮಾಹಿತಿ ಒದಗಿಸಬೇಕು. ಎರಡು ಅಥವಾ ಹೆಚ್ಚು ಮಕ್ಕಳಿರುವ ಪೋಷಕರ ಮಕ್ಕಳಿಗೆ ಈ ಶಾಲೆಗಳಲ್ಲಿ ದಾಖಲಾತಿಯಿಲ್ಲ ಎಂದು ಸಂಸ್ಥೆ ಹೇಳಿದೆ.

ತನ್ನ ನಿಯಮವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆ, ಜನಸಂಖ್ಯಾ ಸ್ಫೋಟವನ್ನು ತಪ್ಪಿಸುವ ನಿಟ್ಟಿನಲ್ಲಿ ತಾನು ಇಟ್ಟಿರುವ ಹೆಜ್ಜೆ ಇದೆಂದು ಹೇಳಿಕೊಂಡಿದೆ.

ಶಿಕ್ಷಕರಿಗೂ ನಿಯಮ ಅನ್ವಯ: ಅಂದಹಾಗೆ, ಈ ನಿಯಮ ಕೇವಲ ಮಕ್ಕಳಿಗಷ್ಟೇ ಅಲ್ಲ, ಆ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕ, ಶಿಕ್ಷಕಿಯರಿಗೂ ಅನ್ವಯಿಸುತ್ತದಂತೆ. ಅಲ್ಲಿನ ಶಿಕ್ಷಕರು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅಂಥವರಿಗೆ ಆ ಶಾಲೆಗಳ ಸೇವೆಯಿಂದ ತೆರವುಗೊಳಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

ನವದೆಹಲಿಯಲ್ಲಿ ಜನವರಿ 2ರಿಂದಲೇ ಮಾಂಟೆಸ್ಸರಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, 298 ಶಾಲೆಗಳಲ್ಲಿ ಜನವರಿಗೆ 10ರಿಂದಲೇ ಸೀಟು ಹಂಚಿಕೆ ಪ್ರಾರಂಭಗೊಂಡಿದೆ. ಖಾಸಗಿ ಶಾಲೆಗಳಲ್ಲಿ ಜನವರಿ 23ವರೆಗೆಗೂ ದಾಖಲಾತಿ ನಡೆಯಲಿವೆ.

ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಮಾರ್ಚ್ 15ರಿಂದ 31ರವರೆಗೆ ಆಯಾ ಶಾಲೆಗಳು ಪ್ರಕಟಿಸಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a move to motivate people to have less children, a prominent Delhi school said parents with more than two kids would be barred from seeking admission for their children.
Please Wait while comments are loading...