ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ಜೆಡಿಯು ಸ್ವತಂತ್ರ ಸ್ಪರ್ಧೆ, ಬಿಜೆಪಿಗೆ ಹಿನ್ನಡೆ

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 25: ಬಿಜೆಪಿ ಮಿತ್ರ ಪಕ್ಷವಾಗಿದ್ದರೂ ಗುಜರಾತ್ ನಲ್ಲಿ ಜೆಡಿಯು ಸ್ವತಂತ್ರವಾಗಿ ಕಣಕ್ಕಿಳಿಯಲಿದೆ.

ಶರದ್ ಯಾದವ್ ಕೈಯಿಂದ ಜೆಡಿಯು 'ಬಾಣ' ಕಸಿದ ನಿತೀಶ್ ಕುಮಾರ್ಶರದ್ ಯಾದವ್ ಕೈಯಿಂದ ಜೆಡಿಯು 'ಬಾಣ' ಕಸಿದ ನಿತೀಶ್ ಕುಮಾರ್

182ರಲ್ಲಿ 50 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಯು ನಿರ್ಧರಿಸಿದೆ. ಒಟ್ಟು 20 ಸ್ಟಾರ್ ಪ್ರಚಾರಕರು ಜೆಡಿಯು ಪರ ಗುಜರಾತ್ ನಲ್ಲಿ ಪ್ರಚಾರ ಮಾಡಲಿದ್ದಾರೆ. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಪ್ರಚಾರದಿಂದ ದೂರ ಉಳಿಯಲಿದ್ದಾರೆ.

 Nitish Kumar won't campaign for Gujarat election

ಜೆಡಿಯು ರಾಜ್ಯಸಭಾ ಸದಸ್ಯ ಆರ್.ಸಿ.ಪಿ ಸಿಂಗ್, ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಬಿಹಾರ ಸಚಿವ ಲಾಲನ್ ಸಿಂಗ್, ಮಾಜಿ ಸಚಿವ ಶ್ಯಾಮ್ ರಝಾಕ್ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.

ಈ ವರ್ಷದ ಜುಲೈನಲ್ಲಿ ಆರ್.ಜೆ.ಡಿ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಂಡು ನಿತೀಶ್ ಕುಮಾರ್ ಬಿಜೆಪಿ ಜತೆ ಕೈಜೋಡಿಸಿದ್ದರು. ಹೀಗಿದ್ದೂ ಗುಜರಾತ್ ನಲ್ಲಿ ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ಡಿಸೆಂಬರ್ 9 ಮತ್ತು 14ರಂದು ಗುಜರಾತ್ ನಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ 18ರಂದು ಮತದಾನ ನಡೆಯಲಿದೆ.

English summary
Bihar chief minister Nitish Kumar will not campaign for his party's candidates in the Gujarat Assembly polls. Though the BJP is a alliance, the JDU will field its candidates independently in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X