ಲೋಕಸಭೆ ಚುನಾವಣೆ ನಿತೀಶ್ ಕುಮಾರ್ ಎಲ್ಲಿ ಸ್ಪರ್ಧಿಸಿದರೂ ಸೋಲುತ್ತಾರೆ: ಬಿಹಾರ ಬಿಜೆಪಿ

ಪಾಟ್ನಾ, ಆಗಸ್ಟ್. 03: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಸಿಎಮ ವಿರುದ್ಧ ಕಿಡಿಕಾರಿದ್ದು, ಅವರು ಲೋಕಸಭೆ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಿದರೂ ಸೋಲುತ್ತಾರೆ ಎಂದು ಗುರುವಾರ ಭವಿಷ್ಯ ನುಡಿದಿದ್ದಾರೆ.

ಬಿಹಾರದ ಯಾವುದೇ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿತೀಶ್ ಕುಮಾರ್ ಅವರಿಗೆ ಧೈರ್ಯವಿಲ್ಲ ಎಂದು ಹೇಳಿರುವ ವಿಜಯ್ ಕುಮಾರ್ ಸಿನ್ಹಾ, ಸಿಎಂಗೆ ತಮ್ಮ ತವರು ಕ್ಷೇತ್ರ ನಳಂದಾ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸವಾಲು ಹಾಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಿತೀಶ್ ಕುಮಾರ್ ಹೀನಾಯವಾಗಿ ಸೋಲುವುದು ನಿಶ್ಚಿತ ಎಂದು ವ್ಯಂಗ್ಯವಾಡಿದ್ದಾರೆ.

nitish-kumar-will-lose-lok-sabha-election

"ಬಿಹಾರ ಬಿಜೆಪಿ ಕಾರ್ಯಕರ್ತರು ಮಹಾಮೈತ್ರಿ ಸರ್ಕಾರದ ಬಂಡವಾಳವನ್ನು ಜನರ ಮುಂದೆ ಬಹಿರಂಗಪಡಿಸಲಿದ್ದಾರೆ. ತತ್ವ ಸಿದ್ಧಾಂತಗಳಿಲ್ಲದ ಜನರು ಬಿಹಾರದಲ್ಲಿ ಜಂಗಲ್ ರಾಜ್ ಅನ್ನು ಮರಳಿ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಆರೋಪಿಸಿದ್ದಾರೆ.

ನಿತೀಶ್ ಕುಮಾರ್ ಉತ್ತರ ಪ್ರದೇಶದಿಂದ, ಪಾಟ್ನಾ ಸಾಹಿಬ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವದಂತಿಗಳಿವೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಅವರು ಪಾಟ್ನಾ ಸಾಹಿಬ್‌ನಿಂದ ಸ್ಪರ್ಧಿಸುವ ಧೈರ್ಯ ಮಾಡಲಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಅವರು ಇಲ್ಲಿಂದ ಚುನಾವಣೆಯಲ್ಲಿ ನಿಂತರೇ, ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಸಿಎಂ ನಿತೀಶ್ ಕುಮಾರ್ ಬಿಹಾರದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಘೋಷಿಸಿದ್ದಾರೆ.

ಇದಲ್ಲದೆ ಜೆಡಿ (ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್( ಲಲನ್ ಸಿಂಗ್) ಅವರು ಮುಂಗೇರ್‌ನಿಂದ ಲೋಕಸಭಾ ಚುನಾವಣೆಯಲ್ಲಿ ನಿಂತರೇ ಸೋಲುತ್ತಾರೆ ಎಂದು ಹೇಳಿದ್ದಾರೆ. ಇತ್ತ, ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಉತ್ತರ ಪ್ರದೇಶ ಜೆಡಿಯು ಉಸ್ತುವಾರಿ ಶ್ರವಣ್ ಕುಮಾರ್ ಅವರು ನಿತೀಶ್ ಕುಮಾರ್ ಅವರು ಯುಪಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷದ ನಾಯಕರು ಮತ್ತು ಉತ್ತರ ಪ್ರದೇಶದ ಜನರು ಬಯಸಿದ್ದಾರೆ ಎಂದು ಹೇಳಿದ್ದಾರೆ.

nitish-kumar-will-lose-lok-sabha-election

ಉತ್ತರ ಪ್ರದೇಶದ ಜನರು ತಮ್ಮ ಭಾವನೆಗಳನ್ನು ತಿಳಿಸಲು ಮತ್ತು ತಮ್ಮ ರಾಜ್ಯದಿಂದ ಚುನಾವಣೆಯಲ್ಲಿ ನಿಲ್ಲುವಂತೆ ಕೋರಲು ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಶ್ರವಣ್ ಕುಮಾರ್ ಹೇಳಿದ್ದಾರೆ. ಸಚಿವ ಶ್ರವಣ್ ಕುಮಾರ್ ಜುಲೈ 31 ಮತ್ತು ಆಗಸ್ಟ್ 1 ರಂದು ಉತ್ತರ ಪ್ರದೇಶಕ್ಕೆ ಎರಡು ದಿನಗಳ ಪ್ರವಾಹಕ್ಕೆ ತೆರಳಿದ್ದರು.

ಉತ್ತರಪ್ರದೇಶದಿಂದ ಮರಳಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ಉತ್ತರ ಪ್ರದೇಶದ ನಿಯೋಗವೊಂದು ಬಿಹಾರ ಸಿಎಂ ಅವರನ್ನು ಭೇಟಿ ಮಾಡಿ ಈ ವಿಚಾರದ ಬಗ್ಗೆ ಅವರ ಅಭಿಪ್ರಾಯವನ್ನು ತಿಳಿಯಲಿದೆ ಎಂದು ತಿಳಿಸಿದರು. ಯುಪಿ ಜೆಡಿಯು (ಯು) ಉಸ್ತುವಾರಿ ವಹಿಸಿಕೊಂಡಿರುವ ಅವರು ಯುಪಿ ಪ್ರವಾಸದಲ್ಲಿದ್ದಾಗ ಜನರು ನಿತೀಶ್ ಕುಮಾರ್ ಅವರನ್ನು ಫುಲ್‌ಪುರ, ಪ್ರತಾಪುರ್, ಜಾನ್‌ಪುರ, ಅಂಬೇಡ್ಕರ್ ನಗರ ಅಥವಾ ಅವರ ಯಾವುದೇ ಕ್ಷೇತ್ರದಿಂದಲಾದರೂ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸಿದ್ದಾರೆ ಎಂದು ಜೆಡಿಯು (ಯು) ಹಿರಿಯ ಸಚಿವರು ಹೇಳಿದ್ದಾರೆ.

ಇನ್ನು, ಮುಂಬೈನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ನಾಯಕರ ಮೂರನೇ ಸುತ್ತಿನ ಸಭೆಗೆ ಮುನ್ನ ಜೆಡಿಯು ನಾಯಕರು ಮತ್ತು ಸಂಸದರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಬೇಡಿಕೆಯನ್ನು ಮತ್ತೊಮ್ಮೆ ವಿಪಕ್ಷಗಳ ಮುಂದಿಟ್ಟಿದೆ. ಹಲವಾರು ಜೆಡಿ (ಯು) ಮಾಜಿ ಸಂಸದರು ಮತ್ತು ಶಾಸಕರು ವಿರೋಧ ಪಕ್ಷದ ಮೈತ್ರಿ 'ಇಂಡಿಯಾ' (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ನಲ್ಲಿ ನಿತೀಶ್‌ಗಿಂತ ಉತ್ತಮ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+