Lok Sabha: ಒಂದು ರಾಷ್ಟ್ರ, ಒಂದು ಚುನಾವಣೆ ಎಫೆಕ್ಟ್: ಲೋಕಸಭೆಗೆ ಅವಧಿಪೂರ್ವ ಚುನಾವಣೆಗೆ ಫಿಕ್ಸ್?

ದೇಶದಲ್ಲಿ ಇದೀಗ ಲೋಕಸಭೆ ಚುನಾವಣೆ ಸದ್ದು ಮೊಳಗಿದೆ. ಸತತ 3ನೇ ಬಾರಿಗೆ ಗೆಲುವು ಸಾಧಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಜ್ಜಾಗಿದೆ. ಆದ್ರೆ ವಿರೋಧ ಪಕ್ಷಗಳು ಒಕ್ಕೂಟ ರಚಿಸಿ, ಎನ್‌ಡಿಎ ವಿರುದ್ಧ ರಣಕಹಳೆ ಮೊಳಗಿಸಿವೆ. ಹೀಗೆ 2024ರ ಲೋಕಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಈ ಸಂದರ್ಭದಲ್ಲಿ ಬಿಹಾರ ಸಿಎಂ & ವಿಪಕ್ಷಗಳ ಒಕ್ಕೂಟದ ಹಿರಿಯ ನಾಯಕ ನಿತೀಶ್ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಅಂದಹಾಗೆ ಕೇಂದ್ರದ ಎನ್‌ಡಿಎ ಸರ್ಕಾರ ಮುಂಚಿತವಾಗಿ ಲೋಕಸಭೆ ಚುನಾವಣೆ ನಡೆಸಲು ಯೋಜಿಸುತ್ತಿದೆ ಎಂದು ಬಿಹಾರ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ನಿತೀಶ್ ಕುಮಾರ್, ಬಿಜೆಪಿ ಸರ್ಕಾರ ಮುಂಚಿತವಾಗಿ ಲೋಕಸಭಾ ಚುನಾವಣೆ ನಡೆಸಲು ಯೋಜಿಸುತ್ತಿದೆ & ನಾವು ಯಾವ ಸಮಯದಲ್ಲಾದರೂ ಸಿದ್ಧ ಎಂದಿದ್ದಾರೆ. ಹೀಗೆ ಕೇಂದ್ರ ಸರ್ಕಾರಕ್ಕೆ ನಿತೀಶ್ ಸವಾಲು ಹಾಕಿದ್ದು, 2024ರ ಲೋಕಸಭೆ ಚುನಾವಣೆ ವಿಚಾರ ಈಗ ಮತ್ತೊಮ್ಮೆ ಸಂಚಲನ ಸೃಷ್ಟಿಮಾಡಿದೆ.

nitish-kumar-said-that-early-election-possible

ನಿತೀಶ್ ಕುಮಾರ್ ಯಾರ ಪರ?

ಹೌದು, ಈ ಪ್ರಶ್ನೆ ಪದೇ ಪದೆ ಕಾಡುತ್ತದೆ. ಏಕೆಂದರೆ ಒಂದೊಂದು ಚುನಾವಣೆ ವೇಳೆಯು ನಿತೀಶ್ ಒಂದೊಂದು ಪಕ್ಷದ ಪರ ನಿಂತಂತೆ ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ಅವರ ಪಕ್ಷ ಪರ್ಯಟನೆ. ಅಷ್ಟಕ್ಕೂ ಈ ಮೊದಲಿನಿಂದ ಬಿಜೆಪಿ ಜತೆ ಇದ್ದ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ದೂರ ಆಗಿದ್ದರು. ಆದರೆ ಆ ನಂತರ ಮತ್ತೆ ಬಿಜೆಪಿ ಜೊತೆ ಕೈಜೋಡಿಸಿ ಬಿಹಾರದಲ್ಲಿ ಸರ್ಕಾರ ರಚಿಸಿದರು. ಹೀಗಾಗಿ ಬಿಜೆಪಿ ಜೊತೆ ನಿತೀಶ್ ಬಾಂಧವ್ಯ ಮುಂದುವರಿಯುತ್ತೆ ಎನ್ನಲಾಗಿತ್ತು. ಆದರೆ ಕಳೆದ ವರ್ಷ ಬಿಜೆಪಿ ಜೊತೆಗಿನ ಮುನಿಸು ಹೊರಹಾಕಿ ಮತ್ತೆ ಎನ್‌ಡಿಎ ತೊರೆದಿದ್ದರು.

ಹೀಗೆ ಎನ್‌ಡಿಎ ಬಿಟ್ಟು ಬಂದ ನಿತೀಶ್ ಕುಮಾರ್ ಇದೀಗ ಎನ್‌ಡಿಎ ವಿರೋಧಿ ಪಡೆಯಲ್ಲಿ ಹಿರಿಯ ನಾಯಕ. ಹಾಗೇ ಎನ್‌ಡಿಎ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಈ ಹೊತ್ತಲ್ಲೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಮ್ಮೆ ಕೇಂದ್ರಕ್ಕೆ ಸವಾಲು ಎಸೆದಿರುವ ನಿತೀಶ್ ಕುಮಾರ್ ಅವರು, ಅವಧಿಗೆ ಮೊದಲೇ ಎಲೆಕ್ಷನ್ ನಡೆದರೆ ನಾವು ರೆಡಿ ಅಂತಿದ್ದಾರೆ. ಅಲ್ಲದೆ ವಿಪಕ್ಷಗಳ INDIA ಮೈತ್ರಿಕೂಟದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂಬ ಅರೋಪ ತಳ್ಳಿ ಹಾಕಿದ್ದಾರೆ. INDIA ಮೈತ್ರಿಕೂಟ ಒಗ್ಗಟ್ಟಾಗಿದೆ ಎಂದು ನಿತೀಶ್ ಕುಮಾರ್ ಸಮರ್ಥಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

nitish-kumar-said-that-early-election-possible

ಒಂದು ರಾಷ್ಟ್ರ, ಒಂದು ಚುನಾವಣೆ ಎಫೆಕ್ಟ್?

ಹಾಗೇ ಇನ್ನೊಂದು ಕಡೆ ನಿತೀಶ್ ಕುಮಾರ್ ಈಗ ನೀಡಿರುವ ಹೇಳಿಕೆ ಗಮನಿಸಿದರೆ ಒಂದು ರಾಷ್ಟ್ರ ಒಂದು ಚುನಾವಣೆ ಎಫೆಕ್ಟ್ ಕೂಡ ಇದರ ಮೇಲಿದೆಯಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಕೇಂದ್ರದ ಮಹತ್ವದ ನಿರ್ಧಾರ ಹೊರಬಿದ್ದರೆ ಅವಧಿಪೂರ್ವ ಚುನಾವಣೆ ನಡೆಯಬಹುದು. ಹೀಗಾಗಿ ನಿತೀಶ್ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಯುತ್ತೆ ಅಂದ್ರಾ? ಗೊತ್ತಿಲ್ಲ.

ಯಾವೆಲ್ಲಾ ಪಕ್ಷಗಳು 'ಇಂಡಿಯಾ' ಒಕ್ಕೂಟಕ್ಕೆ?

ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಿವೆ.

ಒಟ್ನಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ಆರೋಪ ಹಾಗೂ ಪ್ರತ್ಯಾರೋಪ ಜೋರಾಗಿದೆ. ಹಾಗೇ ಅವಧಿಗೆ ಮೊದಲೇ ಚುನಾವಣೆ ನಡೆಯುತ್ತಾ? ಎಂಬ ಪ್ರಶ್ನೆ ಬೇರೆ ಉದ್ಭವಿಸಿದೆ. ಹಾಗೇ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆಯೂ ಚರ್ಚೆ ಜೋರಾಗಿದೆ. ಹೀಗಾಗಿ ವಿಶೇಷ ಅಧಿವೇಶನ ಮುಗಿಯುವ ತನಕ ಕಾದು ಈ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+