ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗದ ಹಿನ್ನೆಲೆ: ನಿಧಾನವಾಗಿ ಎಲ್ಲವೂ ಅರ್ಥವಾಗುತ್ತದೆ: ನಿತೀಶ್ ಕುಮಾರ್
ಬಹುನಿರೀಕ್ಷೆತ ಕೇಂದ್ರ ಬಜೆಟ್ ಮಂಡಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಬಹಳ ವಿಶೇಷತೆಗಳಿಂದ ಕೂಡಿರುವ ಈ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಗಳಿಗೆ ಬಂಪರ್ ಘೋಷಿಸಲಾಗಿದೆ. ಅಲ್ಲದೆ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ಸರ್ಕಾರ ನೀಡದೇ ಇರಬಹುದು. ಆದರೆ ಬಿಹಾರಕ್ಕೆ ಭರಪೂರ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ ತಾವು ಇಟ್ಟಿದ್ದ ಬೇಡಿಕೆ ಈಡೇರಲಿಲ್ಲ ಎಂಬ ಕೊರಗು ಇದ್ದೇ ಇದೆ. ಬಿಹಾರ ಅಭಿವೃದ್ಧಿಗೆ ಕೇಂದ್ರ ಹಣದ ಹೊಳೆಯನ್ನೇ ಹರಿಸಿದೆ.

ಬಜೆಟ್ ವೇಳೆ ಕೇಂದ್ರ ಸರ್ಕಾರ ತನ್ನ ಮೈತ್ರಿ ಪಕ್ಷಗಳನ್ನು ಸಮಾಧಾನ ಮಾಡಿಸುವಲ್ಲಿ ಭರ್ಜರಿ ಯಶಸ್ವಿಯಾಗಿದೆ. ಆದರೆ ಈ ಬಜೆಟ್ ಮಂಡನೆಗಿಂತಲೂ ಮುಂಚಿತವಾಗಿ, ಸರ್ವಪಕ್ಷ ಸಭೆಯಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಆದರೆ ಈ ತೀರ್ಮಾನದಿಂದ ಹಿಂದೆ ಸರೆದಿದ್ದಾಗಿ ಸರ್ಕಾರ ತಿಳಿಸಿತ್ತು.
ಈ ನಿರ್ಧಾರದ ಬೆನ್ನಲ್ಲೆ ಇನ್ನೇನು ಬಜೆಟ್ ಮಂಡನೆ ಆಗುವ ಮೊದಲ ನಿತೀಶ್ ಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ರಾಜಕೀಯ ತಂತ್ರಗಾರಿಕೆ ಹಾಗೂ ಹೇಳಿಕೆಗಳನ್ನು ನೀಡುವಲ್ಲಿ ಮಹತ್ವ ಉಳಿಸಿಕೊಂಡಿರುವ ನಿತೀಶ್ ಕುಮಾರ್, ಮತ್ತೊಮ್ಮೆ ಎಲ್ಲರ ಚಿತ್ತ ಕದ್ದರು. ಅಲ್ಲದೆ ಇವರ ಉತ್ತರಗಳು ಶಾರ್ಟ್ ಆಗಿ ಇರುತ್ತವೆ. ಈ ಬಾರಿಯೂ ಇದೇ ಧಾಟಿಯಲ್ಲೇ ಉತ್ತರ ನೀಡಿದ್ದಾರೆ.
ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗದಿದ್ದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ, "ಹಂತಹಂತವಾಗಿ ಎಲ್ಲವೂ ಗೊತ್ತಾಗಲಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದ ಪೀರ್ ಪಯಂತಿಯಲ್ಲಿ 2400 ಮೆಗಾವ್ಯಾಟ್ ವಿದ್ಯುತ್ ಯೋಜನೆಯನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 21,400 ಕೋಟಿ ರೂ. ಇದರೊಂದಿಗೆ ರಾಜ್ಯದಲ್ಲಿ ವೈದ್ಯಕೀಯ ಸೇವೆಗಳು ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಯ ಬಗ್ಗೆಯೂ ಹಣಕಾಸು ಸಚಿವರು ಹಣ ನೀಡಿದ್ದಾರೆ.












Click it and Unblock the Notifications