ನಿತೀಶ್ ಕುಮಾರ್ ಮೇಲೆಯೂ ಕೊಲೆ ಆರೋಪವಿದೆ : ಲಾಲೂ ತಿರುಗೇಟು
ಪಾಟ್ನಾ, ಜುಲೈ 26: ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಅವರ ವಿರುದ್ಧ ಆರ್.ಜೆ.ಡಿಯ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಿರುಗಿ ಬಿದ್ದಿದ್ದಾರೆ.
"ನಿತೀಶ್ ಕುಮಾರ್ ಅವರಿಗೂ ಗೊತ್ತಿದೆ. ಅವರ ಮೇಲೆಯೂ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮತ್ತು ಶಸ್ತ್ರಾಸ್ತ್ರ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿ," ಎಂದು ಲಾಲೂ ತಿರುಗೇಟು ನೀಡಿದ್ದಾರೆ.

ಇನ್ನೂ, "ನಿತೀಶ್ ಕುಮಾರ್ ತಮ್ಮ ಬಳಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿರಲಿಲ್ಲ," ಎಂದೂ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
#WATCH Live from Bihar: Lalu Yadav addresses the media at his residence in Patna. https://t.co/kXXx0iWb9z
— ANI (@ANI_news) July 26, 2017
ನಾವು ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿದ್ದು ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದೇವೆ ಎಂದೂ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.












Click it and Unblock the Notifications