ಸ್ವಹಿತಾಸಕ್ತಿ ಕಾಪಾಡಲು ನಿತೀಶ್ ಏನು ಬೇಕಾದ್ರೂ ಮಾಡ್ತಾರೆ: ರಾಹುಲ್

Posted By:
Subscribe to Oneindia Kannada

ನವದೆಹಲಿ, ಜುಲೈ 27: ಬಿಹಾರದಲ್ಲಿ ಲಾಲೂ ಅವರ ನಂಟನ್ನು ಕಳೆದುಕೊಂಡು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದ ನಿತೀಶ್ ಕುಮಾರ್, ತಮ್ಮ ಸ್ವ ಹಿತಾಸಕ್ತಿಗಾಗಿ ಏನನ್ನು ಮಾಡಲೂ ಸಿದ್ಧವಾಗಿರುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

6ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ

ಬುಧವಾರ (ಜುಲೈ 26) ಸಂಜೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದ ನಿತೀಶ್ ಕುಮಾರ್, ದಿನಬೆಳಗಾಗುತ್ತಲೇ ಬಿಜೆಪಿ ಜತೆಗೆ ಕೈ ಜೋಡಿಸಿ ಹೊಸ ಸರ್ಕಾರ ರಚಿಸಿದರಲ್ಲದೆ, ಬಿಹಾರದ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ.

Nitish can do anything for self-interest, says Rahul

ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ''ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲೆಂದೇ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಜತೆ ಕೈ ಜೋಡಿಸಿದ್ದರು. ಇದೀಗ, ತಮ್ಮ ಸ್ವಂತ ರಾಜಕಾರಣಕ್ಕಾಗಿ ಕೋಮುವಾದಿಗಳೊಂದಿಗೆ ಜತೆಯಾಗಿದ್ದಾರೆ. ಅವರು ರಾಜಿನಾಮೆ ನೀಡುತ್ತಾರೆಂದು ನಾನು ಮೊದಲೇ ಊಹಿಸಿದ್ದೆ'' ಎಂದು ತಿಳಿಸಿದ್ದಾರೆ.

ನಿತೀಶ್ - ಲಾಲೂ ಅಪವಿತ್ರ ಮೈತ್ರಿಕೂಟದ ಟೈಮ್ ಲೈನ್

''ಬಿಹಾರ ರಾಜಕೀಯದಲ್ಲಿ ಬುಧವಾರ (ಜುಲೈ 26) ಸಂಜೆ ನಡೆದ ನಾಟಕೀಯ ಬದಲಾವಣೆಗಳು ಎಲ್ಲವೂ ಒಂದೇ ದಿನದಲ್ಲಿ ನಡೆದ ವಿದ್ಯಮಾನವಲ್ಲ. ಸುಮಾರು 3-4 ತಿಂಗಳುಗಳ ಹಿಂದೆಯೇ ಇದರ ಪ್ಲಾನ್ ಸಿದ್ಧವಾಗಿತ್ತು'' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಜತೆಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಸಂಯುಕ್ತ ಜನತಾ ದಳದ ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲೂ ಅವರೊಂದಿಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.

ತಿರುಗುಬಾಣವಾಯ್ತು ಆರ್ ಜೆಡಿ ಹೂಡಿದ್ದ ನಯವಂಚನೆಯ ಸಂಚು!

ಆನಂತರ, ರಾತ್ರೋ ರಾತ್ರಿ ನಡೆದ ಬೆಳವಣಿಗೆಯಲ್ಲಿ ನಿತೀಶ್ ಅವರು ಬಿಜೆಪಿಯ ಬೆಂಬಲ ಪಡೆದು ಹೊಸ ಸಮ್ಮಿಶ್ರ ಸರ್ಕಾರ ರಚಿಸಿದರಲ್ಲದೆ, ಜುಲೈ 27ರ ಬೆಳಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress Vice-President Rahul Gandhi on Thursday hit out at Bihar Chief Minister Nitish Kumar for joining hands with the Bharatiya Janata Party (BJP), alleging that he had returned to the "communal forces" for his selfish political motives.
Please Wait while comments are loading...