ಇದು ಚುನಾವಣೆ, ಕೊಟ್ಟಿದ್ದು ಇಸ್ಕಳ್ಳಿ, ಸಿಕ್ಕಿದ್ದು ತಿನ್ಕಳ್ಳಿ

ಮುಂಬೈ, ಅ. 7 : 'ಚುನಾವಣೆ ಬಂದಿದೆ, ನಿಮಗೆ ಮುಂದಿನ ದಿನಗಳಲ್ಲಿ ಲಕ್ಷ್ಮೀ ದರ್ಶನವಾಗಲಿದೆ, ರಾಜಕೀಯ ಪಕ್ಷಗಳು ನೀಡುವ ಉಡುಗೊರೆ ಮತ್ತಿತರ ಪ್ಯಾಕೇಜ್‌ಗಳನ್ನು ಸ್ವೀಕರಿಸಿ' ಇದು ಯಾವುದೋ ಲೋಕಲ್‌ ರಾಜಕಾರಣಿ ಮಾತಲ್ಲ. ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಬಂದರು ಸಚಿವ ನಿತಿನ್‌ ಗಡ್ಕರಿ ಬಾಯಿಂದ ಹೊರಡಿದ ಅಣಿಮುತ್ತುಗಳು!

ಹೌದು. ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಸೋಮವಾರ ಇಂಥದ್ದೊಂದು ಹೇಳಿಕೆ ನೀಡಿರುವ ಕೇಂದ್ರ ಸಚಿವರು ಚುನಾವಣಾ ಆಯೋಗದಿಂದ ನೋಟಿಸ್‌ ಕೂಡಾ ಪಡೆದುಕೊಂಡಿದ್ದಾರೆ.[ಮಹಾರಾಷ್ಟ್ರ ಚುನಾವಣೆಗೆ ಸಿದ್ದು, ಖರ್ಗೆ ಸ್ಟಾರ್ ಪ್ರಚಾರಕರು]

nitinin gadkari

ಮಹಾರಾಷ್ಟ್ರದ ಸಾವಂತ್‌ ವಾಡಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಗಡ್ಕರಿ, ಮುಂದಿನ 10-12 ದಿನಗಳ ಕಾಲ ನಿಮಗೆ ಹಬ್ಬವಿದ್ದಂತೆ, ದೀಪಾವಳಿಯೂ ಹತ್ತಿರ ಬರುತ್ತಿದೆ. ಪತ್ರಿಕಾ ವರದಿಗಾರರಿಗೆ ಸಂಪಾದಕರಿಗೆ ಮತ್ತು ಮಾಲೀಕರಿಗೆ ಉಡುಗೊರೆಗಳ ಮಹಾಪೂರ ಹರಿಯಲಿದೆ. ಎಲ್ಲವನ್ನು ಸ್ವೀಕರಿಸಿ, ಏನು ಸಾಧ್ಯವೋ ಅದೆಲ್ಲವನ್ನು ಸೇವಿಸಿ, ಎನ್ನುವ ಮೂಲಕ ಪತ್ರಕರ್ತರು ಮತ್ತು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.[ಎಎಪಿಗೆ ಭಾರಿ ಹೊಡೆತ, ಅಂಜಲಿ ದಮಾನಿಯಾ ಹೊರಕ್ಕೆ]

ವಿವಾದಾತ್ಮಕ ಹೇಳಿಕೆಯಿಂದ ಕೆರಳಿರುವ ಆಯೋಗ ಗಡ್ಕರಿಗೆ ನೋಟಿಸ್‌ ಜಾರಿ ಮಾಡಿದ್ದು ಬುಧವಾರ ಸಂಜೆಯೊಳಗೆ ಉತ್ತರಿಸಲು ತಿಳಿಸಿದೆ. ಇಲ್ಲವಾದಲ್ಲಿ ಪೂರ್ವ ಸೂಚನೆಯನ್ನು ತಿಳಿಸದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+