ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ರಾಜೀನಾಮೆ
ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ರಾಜಿನಾಮೆ. ಆಗಸ್ಟ್ 31ರವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಹೇಳಿರುವ ಅರವಿಂದ್.
ನವದೆಹಲಿ, ಆಗಸ್ಟ್ 1: ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮಾಸಾಂತ್ಯದವರೆಗೂ ಹಾಲಿ ಹುದ್ದೆಯಲ್ಲಿ ಅವರು ಮುಂದುವರಿಯಲಿದ್ದು, ಆನಂತರ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ನಂತರ, ಯೋಜನಾ ಆಯೋಗವನ್ನು ಬರಖಾಸ್ತುಗೊಳಿಸಿ, ಅದರ ಬದಲಿಗೆ ನೀತಿ ಆಯೋಗವನ್ನು ರಚಿಸಿದ್ದರು.

ಇದು ಅಸ್ತಿತ್ವಕ್ಕೆ ಬಂದ ನಂತರ, ಅದರ ಅಧಿಕಾರಿಗಳಲ್ಲಿ ಮೊದಲು ರಾಜಿನಾಮೆ ಕೊಟ್ಟ ಅಧಿಕಾರಿಯೆಂದು ಇದೀಗ, ಅರವಿಂದ್ ಪಣಗಾರಿಯಾ ಅವರು ಪರಿಗಣಿಸಲ್ಪಟ್ಟಿದ್ದಾರೆ.












Click it and Unblock the Notifications